ಇಸ್ಲಾಮಾಬಾದ್: ಪಾಕಿಸ್ತಾನ(Pakistan)ದ ಮಾಜಿ ಪ್ರಧಾನಿ ನವಾಜ್ ಷರೀಫ್(Nawaz Sharif) ಮಂಗಳವಾರ ಬೆಳಿಗ್ಗೆ 11: 30 ರ ಸುಮಾರಿಗೆ ಲಾಹೋರ್‌ನಿಂದ ಏರ್ ಆಂಬುಲೆನ್ಸ್ ಮೂಲಕ ಲಂಡನ್‌ಗೆ ತೆರಳಿದರು.


COMMERCIAL BREAK
SCROLL TO CONTINUE READING

ಮಾಹಿತಿಯ ಪ್ರಕಾರ, ಈ ಏರ್ ಆಂಬುಲೆನ್ಸ್‌ನಲ್ಲಿ ನವಾಜ್ ಷರೀಫ್(Nawaz Sharif) ಜೊತೆಗೆ ಅವರ ಸಹೋದರ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷ ಶಬಾಜ್ ಷರೀಫ್ ಹಾಗೂ ವೈದ್ಯರೂ ಇದ್ದರೂ ಎನ್ನಲಾಗಿದೆ. ನವಾಜ್ ಷರೀಫ್ ಅವರ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ಇಸ್ಲಾಮಾಬಾದ್ ಹೈಕೋರ್ಟ್ 8 ವಾರಗಳ ಜಾಮೀನು ನೀಡಿದೆ. ಈ ಮೂಲಕ ನವಾಜ್ ಷರೀಫ್ ಚಿಕಿತ್ಸೆ ಪಡೆಯಲು ಲಂಡನ್‌ಗೆ ತೆರಳಲು ಅನುಮತಿ ನೀಡಿದೆ.


ನ್ಯಾಯಾಲಯ ನವಾಜ್ ಷರೀಫ್‌ಗೆ 4 ವಾರಗಳ ವಿದೇಶ ಪ್ರವಾಸಕ್ಕೆ ಅನುಮೋದನೆ ನೀಡಲಾಗಿದೆ. ಆದಾಗ್ಯೂ, ವೈದ್ಯರ ಶಿಫಾರಸಿನಿಂದಾಗಿ, ಈ ಅವಧಿಯನ್ನು ನಂತರವೂ ವಿಸ್ತರಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ. ಈ ಹಿಂದೆ, ಅವರ ವೈದ್ಯ ಅಡ್ನಾನ್ ಖಾನ್ ನವಾಜ್ ಅವರ ಆರೋಗ್ಯದ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಮರಿಯಾಮ್ ನವಾಜ್(Maryam Nawaz) ಅವರು ನವಾಜ್ ಷರೀಫ್‌ಗೆ ಬೆಲ್‌ಗಾಗಿ ಒತ್ತಾಯಿಸಿದರು.


ನವಾಜ್ ಷರೀಫ್ ಅವರು ಭಾನುವಾರವೇ(ನವೆಂಬರ್ 17) ಲಂಡನ್‌ಗೆ ತೆರಳಬೇಕಿತ್ತು. ಆದರೆ ಎಕ್ಸಿಟ್ ಕಂಟ್ರೋಲ್ ಲಿಸ್ಟ್ (ಇಸಿಎಲ್) ನಲ್ಲಿ ಅವರ ಹೆಸರಿದ್ದ ಕಾರಣ ಅವರ ಟಿಕೆಟ್ ರದ್ದುಗೊಂಡಿದ್ದು, ನಂತರ ಮಂಗಳವಾರ ಹೊರಡಲು ನಿರ್ಧರಿಸಲಾಯಿತು. ನವಾಜ್ ಷರೀಫ್ ಕಳೆದ ಕೆಲವು ವರ್ಷಗಳಿಂದ ಅಲ್-ಅಜೀಜಿಯಾ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಪ್ರಸ್ತುತ ಅವರ ಲಾಹೋರ್(Lahore) ನಿವಾಸದಲ್ಲಿ ನವಾಜ್ ಅವರ ಚಿಕಿತ್ಸೆ ನಡೆಯುತ್ತಿತ್ತು.