Pakistan Prime Minister ಶೆಹಬಾಜ್ ಷರೀಫ್ ಅವರು ತಮ್ಮ ಸಹೋದರ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಸ್ವದೇಶಕ್ಕೆ ಮರಳಿದ ನಂತರ ನಾಲ್ಕನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ. ಪಿಎಂಎಲ್-ಎನ್ ಸೆಂಟ್ರಲ್ ಜನರಲ್ ಕೌನ್ಸಿಲ್ ಸಭೆ ಪಕ್ಷದೊಳಗೆ ನಡೆದ ಚುನಾವಣೆಯಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿ ಶೆಹಬಾಜ್ ಅವರನ್ನು ಮರು ಆಯ್ಕೆ ಮಾಡಿದೆ ಎಂದು ದಿ ನ್ಯೂಸ್ ವರದಿ ಮಾಡಿದೆ. ಪಕ್ಷದ ಮಹತ್ವದ ಸಭೆಯೊಂದರಲ್ಲಿ ಶೆಹಬಾಜ್ ಷರೀಫ್, ಮನೆಗೆ ಮರಳಿದ ಬಳಿಕ ಪಿಎಂಎಲ್-ಎನ್ ಅಧ್ಯಕ್ಷ ಸ್ಥಾನವನ್ನು ನವಾಜ್ ಷರೀಫ್ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನವಾಜ್ ಷರೀಫ್ ಆಧುನಿಕ ಪಾಕಿಸ್ತಾನದ ಸೃಷ್ಟಿಕರ್ತ: ಶೆಹಬಾಜ್
ನವಾಜ್ ಷರೀಫ್ ಆಧುನಿಕ ಪಾಕಿಸ್ತಾನದ ನಿರ್ಮಾತೃ ಎಂದು ಶಹಬಾಜ್ ಈ ಸಂದರ್ಭದಲ್ಲಿ ಹೇಳಿದ್ದಾರೆ, ಅವರು ತಮ್ಮ ಅಧಿಕಾರಾವಧಿಯಲ್ಲಿ ಇಂಧನ ಕೊರತೆಯನ್ನು ನಿವಾರಿಸಿದರು ಮತ್ತು ಬಲವಾದ ರಸ್ತೆ ಜಾಲವನ್ನು ನಿರ್ಮಿಸಿದರು.  ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ, ಕೃಷಿ, ಕೈಗಾರಿಕೆ ಮತ್ತು ಆರ್ಥಿಕತೆಯ ಇತರ ಪ್ರಮುಖ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದರು ಎಂದಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆರೋಗ್ಯದ ಕಾರಣಗಳಿಂದ ನವೆಂಬರ್ 2019 ರಿಂದ ಲಂಡನ್‌ನಲ್ಲಿ ಸ್ವಯಂ ಗಡಿಪಾರು ಆಗಿರುವ ತಮ್ಮ ಹಿರಿಯ ಸಹೋದರ ಪಾಕಿಸ್ತಾನಕ್ಕೆ ಮರಳುವುದನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ.


ಪಕ್ಷದ ಮಹತ್ವದ ಸಭೆಯನ್ನು ಏಕೆ ಕರೆಯಲಾಗಿತ್ತು?
ಚುನಾವಣಾ ಆಯೋಗದ ಕತ್ತಿ ತಮ್ಮ ಮೇಲೆ ನೇತಾಡುತ್ತಿದೆ ಮತ್ತು ಇದೇ ಕಾರಣದಿಂದ ಈ ಸಭೆ ಆಯೋಜಿಸಲಾಗಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ನವಾಜ್ ಷರೀಫ್ ಅವರನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದ ನಂತರ ಮತ್ತು ಪಕ್ಷದ ಯಾವುದೇ ಸ್ಥಾನವನ್ನು ಅಲಂಕರಿಸಲು ನಿರ್ಬಂಧಿಸಿದ ನಂತರ ಶೆಹಬಾಜ್ ಅವರಿಗೆ ಪಿಎಂಎಲ್-ಎನ್ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಪಿಎಂಎಲ್-ಎನ್‌ಗೆ ಯುವ ನಾಯಕತ್ವದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಮರ್ಯಮ್ ನವಾಜ್ ಅವರ ಕಠಿಣ ಪರಿಶ್ರಮವನ್ನು ಅವರು ಶ್ಲಾಘಿಸಿದ್ದಾರೆ. 


ಇದನ್ನೂ ಓದಿ-PM Modi US Visit: ಭಾರತದ ಕುರಿತು ಅಮೆರಿಕಾ ಏನು ಯೋಚಿಸುತ್ತದೆ, ಮಾಹಿತಿ ಬಹಿರಂಗಪಡಿಸಿದ ಯುಎಸ್ ಅಧಿಕಾರಿ


ರಾಜಕೀಯ ನಕ್ಷೆ ಬದಲಾಗಲಿದೆ: ಶಹಬ್ಬಾಸ್
ನವಾಜ್ ಷರೀಫ್ ಪಾಕಿಸ್ತಾನಕ್ಕೆ ಮರಳಿದ ನಂತರ ರಾಜಕೀಯದ ನಕ್ಷೆ ಬದಲಾಗುವುದನ್ನು ನೀವು ನೋಡುತ್ತೀರಿ ಎಂದು ಶೆಹಬಾಜ್ ಹೇಳಿದ್ದಾರೆ. ಜಿಯೋ ನ್ಯೂಸ್‌ನ ಸುದ್ದಿ ಪ್ರಕಾರ, ತಮ್ಮ ಆಡಳಿತದ ಬಗ್ಗೆ ಮಾತನಾಡುತ್ತಾ, ಗುಲಾಬಿಯ ಬದಲು ಮುಳ್ಳು ಸಿಕ್ಕ ಸಮಯದಲ್ಲಿ ತಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಿದೆ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಅವರು ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ.


ಇದನ್ನೂ ಓದಿ-Strange Facts: ದುಬೈ ಜನರ ಈ ಬೆರಗುಗೊಳಿಸುವ ಈ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು?


ಹಣದುಬ್ಬರವು ಜನರ ಬೆನ್ನು ಮುರಿದಿದೆ, ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಒಗ್ಗಟ್ಟಿನಿಂದ ಕಷ್ಟದ ದಿನಗಳನ್ನು ಎದುರಿಸಲು ತಮ್ಮ ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ ಎಂದು ಶೇಹಬಾಜ್ ಶರೀಫ್ ಹೇಳಿದ್ದಾರೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ