ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಭಾರತಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಇಮ್ರಾನ್ ಖಾನ್ ( Imran Khan) ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಕೋವಿಡ್ ನಿಂದಾಗಿ ಭಾರತದಲ್ಲಿನ ಬಡವರು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಉಲ್ಲೇಖಿಸುವ ವರದಿಯ ಮೂಲಕ ಟ್ವೀಟ್ ಮಾಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಸರ್ಕಾರವು ನಗದು ವರ್ಗಾವಣೆ ಕಾರ್ಯಕ್ರಮದ ಮೂಲಕ ಪಾರದರ್ಶಕವಾಗಿ ಭಾರತಕ್ಕೆ ಸಹಾಯ ಮಾಡಲು ಸಿದ್ದವಿರುವುದಾಗಿ ಹೇಳಿದ್ದಾರೆ.



'ಈ ವರದಿಗೆ ಅನುಗುಣವಾಗಿ, ಭಾರತದಾದ್ಯಂತ 34% ಕುಟುಂಬಗಳು ಸಹಾಯವಿಲ್ಲದೆ ಒಂದು ವಾರಕ್ಕಿಂತ ಹೆಚ್ಚು ಕಾಲ ಬದುಕಲು ಸಾಧ್ಯವಾಗುವುದಿಲ್ಲ. ಸಹಾಯವನ್ನು ನೀಡಲು ಮತ್ತು ನಮ್ಮ ಯಶಸ್ವಿ ನಗದು ವರ್ಗಾವಣೆ ಹಂಚಿಕೆಯನ್ನು ಹಂಚಿಕೊಳ್ಳಲು ನಾನು ಸಿದ್ಧನಿದ್ದೇನೆ, ಅದರ ವ್ಯಾಪ್ತಿ ಮತ್ತು ಪಾರದರ್ಶಕತೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘಿಸಲಾಗಿದೆ, 'ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದರು. 


ಇದಕ್ಕೆ ತೀಕ್ಷ್ಣ ಉತ್ತರ ನೀಡಿರುವ ಭಾರತ ಪಾಕಿಸ್ತಾನದ ಜಿಡಿಪಿ ಶೇ 90 ರಷ್ಟು ಸಾಲವನ್ನು ಹೊಂದಿದ್ದು, ಭಾರತ ಈಗಾಗಲೇ ತನ್ನ ನಾಗರಿಕರಿಗೆ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಪಾಕಿಸ್ತಾನದ ಜಿಡಿಪಿ ಗಾತ್ರದಷ್ಟಿದೆ ಎಂದು ಹೇಳಿದೆ.


'ಪಾಕಿಸ್ತಾನವು ತಮ್ಮ ಜಿಡಿಪಿಯ 90% ನಷ್ಟು ಸಾಲ ಸಮಸ್ಯೆಯನ್ನು ಹೊಂದಿದೆ ಎಂದು ನೆನಪಿಸಿಕೊಳ್ಳುವುದು ಉತ್ತಮ. ಭಾರತದ ಆರ್ಥಿಕ ಪ್ಯಾಕೇಜ್ ಪಾಕಿಸ್ತಾನದ ಜಿಡಿಪಿಯಷ್ಟೇ ದೊಡ್ಡದಾಗಿದೆ ”ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.