ಕಾಬೂಲ್:  Panjshir Valley Resistance - ತಾಲಿಬಾನ್ (Taliban) ವಕ್ತಾರ ಮತ್ತೊಮ್ಮೆ ಪಂಜ್‌ಶಿರ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಘೋಷಿಸಿದ್ದಾನೆ .  ಪಂಜಶೀರ್ ನಲ್ಲಿ ನಾವು ನಮ್ಮ ಶತ್ರುಗಳನ್ನು ಹತ್ಯೆಗೈದಿದ್ದೇವೆ ಮತ್ತು ಸದ್ಯ ಪಂಜಶೀರ್ ತಾಲಿಬಾನ್ ಪಡೆಗಳ ವಶದಲ್ಲಿದೆ ಎಂದು ತಾಲಿಬಾನ್ (Afghanistan) ವಕ್ತಾರ ಜಬೀವುಲ್ಲಾ ಮುಜಾಹಿದ್ (Zabiullah Mujahid) ಹೇಳಿದ್ದಾನೆ. ಪಂಜಶೀರ್ ನಲ್ಲಿ ಯಾರ ವಿರುದ್ಧವೂ ಕೂಡ ಯಾವುದೇ ರೀತಿಯ  ತಾರತಮ್ಯ ಎಸಗಲಾಗುವುದಿಲ್ಲ ಎಂದು ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಬಯಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ.  ನಂತರ ನಮ್ಮ ಪಡೆಗಳು ಪಂಜಶೀರ್ ಮೇಲೆ ದಾಳಿ ನಡೆಸಿ ಅದನ್ನು ತಮ್ಮ ವಶಕ್ಕೆ ಪಡೆದಿವೆ  ಎಂದು ಮುಜಾಹೀದ್ ಹೇಳಿದ್ದಾನೆ. 


COMMERCIAL BREAK
SCROLL TO CONTINUE READING

ಈ ಮೊದಲೂ ಕೂಡ ತಾಲಿಬಾನ್ ವಕ್ತಾರ ಪಂಜಶೀರ್ ಅನ್ನು ವಶಪಡಿಸಿರುವ ಕುರಿತು ಹೇಳಿಕೊಂಡಿದ್ದ ಮತ್ತು NRF ಆತನ ಹೇಳಿಕೆಯನ್ನು ತಿರಸ್ಕರಿಸಿತ್ತು. ಏತನ್ಮಧ್ಯೆ ನಾರ್ದನ್ ಅಲೈನ್ಸ್ ಮುಖ್ಯಸ್ಥ ಅಹ್ಮದ್ ಮಸೂದ್ (Ahmad Massoud)  ಟ್ವೀಟ್ ಮಾಡುವ ಮೂಲಕ ತಾವು ಸುರಕ್ಷಿತವಾಗಿರುವುದಾಗಿ ಹೇಳಿಕೊಂಡಿದ್ದ ಮತ್ತು  ಚಿಂತಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದ.


ಇದನ್ನೂ ಓದಿ-ವಿದ್ಯಾಭ್ಯಾಸ ಮುಂದುವರೆಸಬೇಕಾದರೆ ಆಫ್ಘಾನ್ ವಿದ್ಯಾರ್ಥಿಗಳು ಅನುಸರಿಸಬೇಕು ಈ ನಿಯಮ, ಜಾರಿಗೆ ಬಂತು ತಾಲಿಬಾನ್ ಹೊಸ ಆದೇಶ


ಬಂಡಾಯ ನಾಯಕ ಅಹ್ಮದ್ ಮಸೂದ್ ನ ಹಲವಾರು ಕಮಾಂಡರ್ ಗಳು ಪಂಜಶೀರ್ (Panjshir Congflict) ಕದನದಲ್ಲಿ ಹತ್ಯೆಗೀಡಾಗಿದ್ದಾರೆ. ಇದರಲ್ಲಿ NRF ವಕ್ತಾರ ಫಹೀಮ್ ದಷ್ಟಿ ಮತ್ತು ಉನ್ನತ ಕಮಾಂಡರ್ ಸಲೇಹ್ (Amarullah Saleh) ಮೊಹಮ್ಮದ್ ರೆಗಿಸ್ತಾನಿ ಕೂಡ ಶಾಮೀಲಾಗಿದ್ದಾರೆ. ರೆಗಿಸ್ತಾನಿ  ಅಹ್ಮದ್ ಶಾ ಮಸೂದ್ ಸೀನಿಯರ್‌ಗೆ ತುಂಬಾ ಹತ್ತಿರದವನಾಗಿದ್ದ ಮತ್ತು ಅವರನ್ನು ಗೆರಿಲ್ಲಾ ಯುದ್ಧದಲ್ಲಿ ಪರಿಣಿತಿ ಹೊಂದಿದ್ದ ಎನ್ನಲಾಗಿದೆ.


ಇದನ್ನೂ ಓದಿ-Afghanistan Crisis: ಪಂಜ್​ಶೀರ್ ವಶಕ್ಕೆ ಯತ್ನಿಸಿದ್ದ 600ಕ್ಕೂ ಹೆಚ್ಚು ತಾಲಿಬಾನ್ ಉಗ್ರರ ಹತ್ಯೆ!


ಇದೆ ವೇಳೆ ಈ ಸಂಘರ್ಷದಲ್ಲಿ ರೆಸಿಸ್ಟೆನ್ಸ್ ಫ್ರಂಟ್ ವಕ್ತಾರ ಫಹೀಮ್ ದಷ್ಟಿ ಹಾಗೂ ಅಹ್ಮದ್ ಶಾ ಮಸೂದ್ ಅವರ ಸೋದರಳಿಯ ಜನರಲ್ ಅಬ್ದುಲ್ ವೂಡೂದ್ ಕೂಡ ಹತ್ಯೆಗೀಡಾಗಿದ್ದಾರೆ. ಫಹೀಮ್ ದಷ್ಟಿ ಸಾವು ರೆಸಿಸ್ಟೆನ್ಸ್ ಫ್ರಂಟ್‌ಗೆ (Resistance Force) ದೊಡ್ಡ ಹಿನ್ನಡೆಯಾಗಿದೆಎಂದೇ ಬಿಂಬಿಸಲಾಗುತ್ತಿದೆ. ಏಕೆಂದರೆ ಅವನು ಅಹ್ಮದ್ ಮಸೂದ್‌ಗೆ ತುಂಬಾ ಆಪ್ತನಾಗಿದ್ದ  ಮತ್ತು ವಕ್ತಾರ ಕೂಡ ಆಗಿದ್ದ. ಅಹ್ಮದ್ ಮಸೂದ್ ಮತ್ತು ಅವರ ತಂದೆ ಅಹ್ಮದ್ ಶಾ ಮಸೂದ್ ಅವರಿಗೆ ಅತ್ಯಂತ ನಿಕಟವರ್ತಿಯಾಗಿದ್ದ ಫಹೀದ್ ದಷ್ಟಿ ಸಾವಿನ ನಂತರ, ಒಂದೆಡೆ ಪಂಜ್‌ಶಿರ್‌ನಲ್ಲಿ ಶಾಂತಿಯ ಧ್ವನಿ ಕೇಳಿ ಬರುತ್ತಿದ್ದರೆ, ಇನ್ನೊಂದೆಡೆ ಕೆಲ ನಾಯಕರು ರಕ್ತಸಿಕ್ತ ಸೇಡು ತೀರಿಸಿಕೊಳ್ಳುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.


ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನದಲ್ಲಿ ಅಧಿಕಾರ ಸಂಘರ್ಷ, ಗುಂಡು ಹಾರಿಸಿದ ಹಕ್ಕಾನಿ, ಗಾಯಗೊಂಡ ಬರಾದರ್! : ವರದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.