ನವದೆಹಲಿ: ಅಮೆರಿಕ ಮೂಲದ ಫಾರ್ಮಾ ಕಂಪನಿ ಫಿಜರ್ (Pfizer) ಮತ್ತು ಜರ್ಮನಿ ಮೂಲದ ಬಯೋನ್​ಟೆಕ್ (BioNTech) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ (CoVcinee) ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (World Health Organization) ಒಪ್ಪಿಗೆ ನೀಡಿದೆ.


COMMERCIAL BREAK
SCROLL TO CONTINUE READING

ಈ ಮುಖಾಂತರ ಫಿಜರ್ - ಬಯೋನ್​ಟೆಕ್ ಕೋವ್ಯಾಕ್ಸಿನ್ ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ಪಡೆದ ಮೊದಲ ಕೋವ್ಯಾಕ್ಸಿನ್   ಆಗಿದೆ. ಔಷಧ ನಿಯಂತ್ರಕ ಏಜೆನ್ಸಿ (Drugs Control Agencies) ಸಂಸ್ಥೆಗಳನ್ನು ಹೊಂದಿಲ್ಲದ ದೇಶಗಳು ಲಸಿಕೆಗಳ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಈ ಹಿನ್ನಲೆಯಲ್ಲಿ ಫಿಜರ್ - ಬಯೋಎನ್‌ಟೆಕ್‌ ಲಸಿಕೆಗಳ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ನೀಡಿದೆ.


ಪ್ರಪಂಚದ ವಿವಿಧ ಲಸಿಕೆ ನಿಯಂತ್ರಕ ತಜ್ಞರು ಫಿಜರ್-ಬಯೋಎನ್‌ಟೆಕ್ COVID -19 ಲಸಿಕೆಯ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟದ ಡೇಟಾವನ್ನು ಪರಿಶೀಲಿಸಿದ್ದಾರೆ‌. ಈ ವೇಳೆ ತಜ್ಞರು ಫಿಜರ್-ಬಯೋಎನ್‌ಟೆಕ್ ಕೋವ್ಯಾಕ್ಸಿನ್ ತಯಾರಿಕೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪರಿಣಾಮಕಾರಿತ್ವಕ್ಕೆ ಹೊಂದಿರಬೇಕಾದ ಮಾನದಂಡಗಳನ್ನು ಪೂರೈಸಲಾಗಿದೆ. ರೋಗವನ್ನು ಪರಿಹರಿಸಲು ಅದನ್ನು ಬಳಸಬಹುದಾಗಿದೆ ಹಾಗೂ ಸಂಭಾವ್ಯ ಅಪಾಯಗಳನ್ನು ಈ ಲಸಿಕೆ ನಿವಾರಿಸುತ್ತದೆ ಎಂಬ ಅಂಶಗಳನ್ನು ಖಾತರಿ ಪಡಿಸಿಕೊಳ್ಳಲಾಗಿದೆ‌. ಸರಿದೂಗಿಸುತ್ತವೆ ಎಂದು ಅವರು ಕಂಡುಕೊಂಡಿದ್ದಾರೆ. ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ.


ಇದನ್ನೂ ಓದಿ : COVID 19 Vaccine ವಿತರಣೆಗೆ ಸಿದ್ಧತೆ ದೇಶಾದ್ಯಂತ ಡ್ರೈ ರನ್


ಫಿಜರ್ (Pfizer) - ಬಯೋನ್​ಟೆಕ್  ಕೋವ್ಯಾಕ್ಸಿನ್ ಅನ್ನು 60 ಡಿಗ್ರಿ ಸೆಲ್ಷಿಯಸ್ ನಿಂದ 90 ಡಿಗ್ರಿ ಸೆಲ್ಸಿಯಸ್ ವರೆಗೆ ಸಂಗ್ರಹಿಸಿ ಇಡಬೇಕಾಗುತ್ತದೆ. ಇವುಗಳನ್ನು ಅಲ್ಟ್ರಾ-ಕೋಲ್ಡ್ ಚೈನ್ ಉಪಕರಣಗಳು ಲಭ್ಯವಿಲ್ಲದ ವ್ಯವಸ್ಥೆಯಲ್ಲಿ ಕೆಡದಂತೆ ಇಟ್ಟುಕೊಳ್ಳುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ.


ಈಗಾಗಲೇ ಬ್ರಿಟನ್ (Britain) ದೇಶ ತಮ್ಮಲ್ಲಿ ಫಿಜರ್ - ಬಯೋಎನ್‌ಟೆಕ್‌ ಸಂಸ್ಥೆಗಳ ಲಸಿಕೆಯ ತುರ್ತು ಬಳಕೆ ಮಾಡಬಹುದು ಎಂದು ಒಪ್ಪಿಗೆ ನೀಡಿದೆ. ಫಿಜರ್ - ಬಯೋನ್​ಟೆಕ್‌ ಸಂಸ್ಥೆಗಳು ಭಾರತದಲ್ಲೂ ತಮ್ಮ ಲಸಿಕೆಗಳನ್ನು ಬಳಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿವೆ. ಆದರೆ ಭಾರತದಲ್ಲಿ ಒಪ್ಪಿಗೆ‌ ನೀಡಬೇಕಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drugs Controller General Of India) ಇನ್ನೂ ಒಪ್ಪಿಗೆ ನೀಡಿಲ್ಲ.‌ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮೊದಲಿಗೆ ಸೆರಮ್ ಇನ್ಸ್​ಟಿಟ್ಯೂಟ್ (Serum) ಮತ್ತು ಭಾರತ್ ಬಯೋಟೆಕ್ (Bharath Biotech) ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ (Covishield) ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.


ಇದನ್ನೂ ಓದಿ : Corona new strain: ಈ ದೇಶದಲ್ಲಿ ಪ್ರಯಾಣ ಇತಿಹಾಸ ಹೊಂದಿರದ ಯುವಕನಲ್ಲೂ ಸೋಂಕು ಪತ್ತೆ


ಇಂದು‌ ಭಾರತದಲ್ಲೂ ಮಹತ್ವದ ಸಭೆ :
ಸೆರಮ್ ಇನ್ಸ್​ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಬಳಕೆಗೆ ಅನುಮತಿ ನೀಡುವ ಬಗ್ಗೆ ಶುಕ್ರವಾರ ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿ (SEC) ಸಭೆ ನಡೆಸಲಿದೆ. ಹೆಚ್ಚುವರಿ ಮಾಹಿತಿ ಕೇಳಿರುವ‌ ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿ ಇಂದು ಸೆರಮ್ ಇನ್ಸ್​ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ನೀಡುವ ಮಾಹಿತಿಗಳನ್ನು ಆಧರಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಶಿಫಾರಸು ಮಾಡಲಿದೆ. ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿ ಮಾಹಿತಿಗಳನ್ನು ಆಧರಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅಂತಿಮ ನಿರ್ಧಾರ ಕೈಗೊಳ್ಳಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.