ಭಾರತದಲ್ಲೂ ಲಸಿಕೆಗಳನ್ನು ಬಳಸಲು ಅವಕಾಶ ನೀಡುವಂತೆ ಫಿಜರ್ - ಬಯೋಎನ್‌ಟೆಕ್ ಸಂಸ್ಥೆಗಳು ಮನವಿ ಮಾಡಿಕೊಂಡಿವೆ. ಆದರೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮೊದಲಿಗೆ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.
ಈ ಲಸಿಕೆಯನ್ನು ದೇಶದ ಜನರಿಗೆ ತಲುಪಿಸಲು ಲಸಿಕೆಯ ಬೆಲೆಯನ್ನು (ಕರೋನಾ ಲಸಿಕೆ ಬೆಲೆ) ನಿರ್ಧರಿಸಲು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಕೇಂದ್ರ ಸರ್ಕಾರದ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು.
ಮಾರ್ಗರೇಟ್ ಕೀನನ್ ಮಂಗಳವಾರ ಬೆಳಿಗ್ಗೆ 06:31 ಕ್ಕೆ ಮಧ್ಯ ಇಂಗ್ಲೆಂಡ್‌ನ ಕೊವೆಂಟ್ರಿಯಲ್ಲಿರುವ ತನ್ನ ಸ್ಥಳೀಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದರು. ಅವರು 91 ನೇ ವರ್ಷಕ್ಕೆ ಕಾಲಿಡುವ ಒಂದು ವಾರ ಮೊದಲು ಲಸಿಕೆ ಪಡೆದಿದ್ದು ತಮ್ಮ ಹುಟ್ಟು ಹಬ್ಬಕ್ಕೆ ಇದೊಂದು ಅತ್ಯುತ್ತಮ ಉಡುಗೊರೆ ಎಂದು ಬಣ್ಣಿಸಿದ್ದಾರೆ.
ಕೊರೊನಾ ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತವಾಗಿರುವ ಅಮೆರಿಕಾದ ದಿಗ್ಗಜ ಕಂಪನಿ Pfizer, US ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮತಿ ಕೋರಿದೆ.
ರಷ್ಯಾದ ಕರೋನವೈರಸ್ ಲಸಿಕೆ ಸ್ಪುಟ್ನಿಕ್ ವಿ ಯ ಪ್ರತಿ ಡೋಸ್ ಬೆಲೆಯು ಅಮೆರಿಕಾದ ಔಷಧಿ ಕಂಪನಿಗಳಾದ ಫಿಜರ್ ಮತ್ತು ಮೊಡೆರ್ನಾ ಲಸಿಕೆಗಳಿಗಿಂತ ಕಡಿಮೆ ಇರುತ್ತದೆ ಎಂದು ರಷ್ಯಾದ ಲಸಿಕೆಯ ಅಧಿಕೃತ ಟ್ವಿಟರ್ ಖಾತೆ ಭಾನುವಾರ ತಿಳಿಸಿದೆ.
ಲಸಿಕೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಶೇಕಡಾ 90 ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಫಲಿತಾಂಶಗಳು ನಿರೀಕ್ಷೆಗಿಂತ ಉತ್ತಮವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ತಿಂಗಳ ಅಂತ್ಯದ ವೇಳೆಗೆ, ಲಸಿಕೆ ಮಾರಾಟ ಮಾಡಲು ಕಂಪನಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.