PM Modi in Egypt: 26 ವರ್ಷದ ಬಳಿಕ ಈಜಿಪ್ಟ್ಗೆ ಭಾರತದ ಪ್ರಧಾನಿಯ ಮೊದಲ ಭೇಟಿ!
ಪ್ರಧಾನಿ ಮೋದಿಯವರು ಭಾನುವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ -ಸಿಸಿ ಅವರನ್ನು ಭೇಟಯಾಗಲಿದ್ದು, ದುಂಡುಮೇಜಿನ ಸಭೆ ನಡೆಸಲಿದ್ದಾರೆ. ನಂತರ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.
ನವದೆಹಲಿ: ಅಮೆರಿಕದ ಯಶಸ್ವಿ ಭೇಟಿ ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಈಜಿಪ್ಟ್ ರಾಜಧಾನಿ ಕೈರೋಗೆ ಆಗಮಿಸಿದರು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 2 ದಿನಗಳ ಅಧಿಕೃತ ಭೇಟಿಗಾಗಿ ಕೈರೋಗೆ ಆಗಮಿಸಿದರು.
ಬರೋಬ್ಬರಿ 26 ವರ್ಷಗಳ ನಂತರ ಮೊದಲ ದ್ವಿಪಕ್ಷೀಯ ಭೇಟಿಗಾಗಿ ಪ್ರಧಾನಿ ಮೋದಿ ಈಜಿಪ್ಟ್ಗೆ ಆಗಮಿಸಿದ್ದಾರೆ. ಕೈರೋ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ವಿಶೇಷ ಗೌರವ ನೀಡುವ ಮೂಲದ ಈಜಿಪ್ಟ್ ಪ್ರಧಾನಿ ಸ್ವಾಗತಿಸಿದರು. ಇದೇ ವೇಳೆ ಪ್ರಧಾನಿ ಮೋದಿಯವರಿಗೆ ವಿಶೇಷ ಗೌರವ ರಕ್ಷೆ ನೀಡಲಾಯಿತು.
ಇದನ್ನೂ ಓದಿ: Yevgeny Prigozhin ಯಾರು? ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನೇರ ಚಾಲೆಂಜ್!
ಕೈರೋದ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರನ್ನು ಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಅವರಿಗೆ ವಿಶೇಷ ಗೌರವವನ್ನು ನೀಡಲಾಯ್ತು. ಕಳೆದ 26 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‍ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
PM Modi Egypt Visit: ಕೈರೋ ತಲುಪಿದ ಪ್ರಧಾನಿ ಮೋದಿ, ಈಜಿಪ್ಟ್ ಪ್ರಧಾನಿ ಮದ್ಬೌಲಿಯಿಂದ ಸ್ವಾಗತ
ಈಜಿಪ್ಟ್ ಸಾಂಪ್ರದಾಯಿಕವಾಗಿ ಆಫ್ರಿಕನ್ ಖಂಡದಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿರುವುದರಿಂದ ಈ ಭೇಟಿಯು ಮಹತ್ವದ್ದಾಗಿದೆ. ಭಾರತ-ಈಜಿಪ್ಟ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಮಾರ್ಚ್ 1978ರಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಈಜಿಪ್ಟ್ ಸೆಂಟ್ರಲ್ ಏಜೆನ್ಸಿ ಫಾರ್ ಪಬ್ಲಿಕ್ ಮೊಬಿಲೈಸೇಶನ್ ಮತ್ತು ಸ್ಟ್ಯಾಟಿಸ್ಟಿಕ್ಸ್ (CAPMAS) ಪ್ರಕಾರ ಅತ್ಯಂತ ಒಲವುಳ್ಳ ರಾಷ್ಟ್ರದ ಷರತ್ತು ಆಧರಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.