ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ
ಬೃಹತ್ ಚೌಕಟ್ಟಿನಡಿಯಲ್ಲಿ ಪೂರೈಸಲು ಯೋಜಿಸಿರುವ ಮೊದಲ 25 ಮಿಲಿಯನ್ ಡೋಸ್‌ಗಳ ಭಾಗವಾಗಿ ಅಮೆರಿಕ ಕೋವಿಡ್ ಲಸಿಕೆಗಳನ್ನು ಭಾರತಕ್ಕೆ ಕಳಿಸಲಿದೆ ಎಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಭರವಸೆ ನೀಡಿದ್ದಾರೆ.
ನವದೆಹಲಿ: ಬೃಹತ್ ಚೌಕಟ್ಟಿನಡಿಯಲ್ಲಿ ಪೂರೈಸಲು ಯೋಜಿಸಿರುವ ಮೊದಲ 25 ಮಿಲಿಯನ್ ಡೋಸ್‌ಗಳ ಭಾಗವಾಗಿ ಅಮೆರಿಕ ಕೋವಿಡ್ ಲಸಿಕೆಗಳನ್ನು ಭಾರತಕ್ಕೆ ಕಳಿಸಲಿದೆ ಎಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಹಲವು ಪ್ರಥಮಗಳಿಗೆ ಕಾರಣರಾದ ಅಮೆರಿಕಾದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಇದೇ ವೇಳೆ ಅವರು ಮೆಕ್ಸಿಕೊದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್, ಗ್ವಾಟೆಮಾಲಾದ ಅಧ್ಯಕ್ಷ ಅಲೆಜಾಂಡ್ರೊ ಜಿಯಮ್ಮಟ್ಟಿ ಮತ್ತು ಕೆರಿಬಿಯನ್ ದ ಅಧ್ಯಕ್ಷ ಪ್ರಧಾನಿ ಕೀತ್ ರೌಲಿ ಅವರಿಗೂ ಸಹಿತ ಕರೆ ಮಾಡಿದ್ದಾರೆ.
ಭಾರತದ ಹೊರತಾಗಿ, ಈ ದೇಶಗಳು, ಯುಎಸ್ ನ ಜಾಗತಿಕ ಲಸಿಕೆ ಹಂಚಿಕೆ ಸ್ಟ್ರಾಟಜಿ ಅಡಿಯಲ್ಲಿ ಲಸಿಕೆಗಳನ್ನು ಸ್ವೀಕರಿಸುತ್ತವೆ.ಬಿಡೆನ್-ಹ್ಯಾರಿಸ್ ಆಡಳಿತದ ಚೌಕಟ್ಟನ್ನು ಜೂನ್ ಅಂತ್ಯದ ವೇಳೆಗೆ ಜಾಗತಿಕವಾಗಿ ಕನಿಷ್ಠ 80 ಮಿಲಿಯನ್ ಲಸಿಕೆಗಳನ್ನು ಹಂಚಿಕೊಳ್ಳಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತದಲ್ಲಿನ ಕೊರೊನಾ ಸಾವುಗಳು ಹೃದಯ ವಿದ್ರಾವಕಾರಿ -ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್ (Kamala Harris) ಜೊತೆಗಿನ ಮಾತುಕತೆ ನಂತರ ಪ್ರಧಾನಿ ಟ್ವೀಟ್ ಮಾಡಿ ಅಮೆರಿಕಾದ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅಮೇರಿಕಾದಲ್ಲಿ ವಾಸಿಸುತ್ತಿರುವ ಎಲ್ಲಾ ಭಾರತೀಯರ ಬೆಂಬಲಕ್ಕೂ ಅವರು ಧನ್ಯವಾದ ಅರ್ಪಿಸಿದ್ದಾರೆ.
ಗೊತ್ತಿರಲಿ..! ಅಧ್ಯಕ್ಷ ಬೈಡೆನ್ ಗೆ ಭಾಷಣ ಬರೆದು ಕೊಟ್ಟಿದ್ದು ಭಾರತೀಯ ವಿನಯ್ ರೆಡ್ಡಿ..!
ಜಾಗತಿಕ ಆರೋಗ್ಯ ಪರಿಸ್ಥಿತಿ ಸಹಜವಾದ ಕೂಡಲೇ ಭಾರತಕ್ಕೆ ಉಪಾಧ್ಯಕ್ಷ ಹ್ಯಾರಿಸ್ ಅವರನ್ನು ಸ್ವಾಗತಿಸುವ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.