ಗೊತ್ತಿರಲಿ..! ಅಧ್ಯಕ್ಷ ಬೈಡೆನ್ ಗೆ ಭಾಷಣ ಬರೆದು ಕೊಟ್ಟಿದ್ದು ಭಾರತೀಯ ವಿನಯ್ ರೆಡ್ಡಿ..!

ವಿಶ್ವದ ಬಲಾಢ್ಯ ರಾಷ್ಟ್ರವೊಂದರ ಪ್ರಬಲ ರಾಷ್ಟ್ರಾಧ್ಯಕ್ಷರಾದ ಬೈಡೆನ್ ಗೆ ಭಾಷಣ ಬರೆದುಕೊಟ್ಟಿದ್ದು ಭಾರತೀಯ. ಅದರಲ್ಲೂ ತೆಲಂಗಾಣದ ತೆಲುಗು ಬಿಡ್ಡ ವಿನಯ್ ರೆಡ್ಡಿ.

Written by - Ranjitha R K | Last Updated : Jan 21, 2021, 01:39 PM IST
  • ಅಮೆರಿಕ ಅಧ್ಯಕ್ಷರಿಗೆ ನಿನ್ನೆಯ ಭಾಷಣ ಬರೆದುಕೊಟ್ಟಿದ್ದು ತೆಲಂಗಾಣದ ಬಿಡ್ಡ ವಿನಯ್ ರೆಡ್ಡಿ
  • ಬೈಡೆನ್ ಭಾಷಣ ಬರೆಯುವ ತಂಡದ ನಿರ್ದೇಶಕರಾಗಿರುವ ವಿನಯ್ ರೆಡ್ಡಿ
  • ಅಮೆರಿಕದ ಡೇಟನ್ ನಲ್ಲಿ ಬೆಳೆದ ವಿನಯ್ ರೆಡ್ಡಿ ಮೂಲ ಇರುವುದು ತೆಲಂಗಾಣದ ಪೋತಿರೆಡ್ಡಿ ಪೇಟದಲ್ಲಿ
ಗೊತ್ತಿರಲಿ..! ಅಧ್ಯಕ್ಷ ಬೈಡೆನ್ ಗೆ ಭಾಷಣ ಬರೆದು ಕೊಟ್ಟಿದ್ದು ಭಾರತೀಯ ವಿನಯ್ ರೆಡ್ಡಿ..! title=
ಬೈಡೆನ್ ಭಾಷಣ ಬರೆಯುವ ತಂಡದ ನಿರ್ದೇಶಕರಾಗಿರುವ ವಿನಯ್ ರೆಡ್ಡಿ

ನವದೆಹಲಿ: ಅಮೆರಿಕದ ರಾಷ್ಟ್ರಾಧ್ಯಕ್ಷರಾಗಿ ಜೊ ಬೈಡನ್ (Jeo Biden) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಬೈಡೆನ್ ಅಭೂತಪೂರ್ವ ಭಾಷಣ ಮಾಡಿದ್ದಾರೆ. ಈ ಭಾಷಣವನ್ನು ವಿಶ್ವಾದ್ಯಂತ ಎಲ್ಲಾ ಜನ ಕೇಳಿದ್ದಾರೆ. ಭಲೆ..ಭಲೇ ಏನಪ್ಪಾ ಬೈಡೆನ್ ಭಾಷಣ ಎಂದು ಖುಷಿ ಪಟ್ಟಿದ್ದಾರೆ.  ನಿಮಗೆ ಗೊತ್ತಿರಲಿ, ವಿಶ್ವದ ಬಲಾಢ್ಯ ರಾಷ್ಟ್ರವೊಂದರ ಪ್ರಬಲ ರಾಷ್ಟ್ರಾಧ್ಯಕ್ಷರಾದ ಬೈಡೆನ್ ಗೆ ಭಾಷಣ ಬರೆದುಕೊಟ್ಟಿದ್ದು ಭಾರತೀಯ. ಅದರಲ್ಲೂ ತೆಲಂಗಾಣದ ತೆಲುಗು ಬಿಡ್ಡ ವಿನಯ್ ರೆಡ್ಡಿ.

‘ಮಾ ಬಿಡ್ಡ ಊರುಕಿ ಪೇರು ತೆಚ್ಚಾಡು’
ಭಾರತೀಯ ಮೂಲದ ವಿನಯ್ ರೆಡ್ಡಿ (Vinay Reddy) ಬೆಳೆದಿದ್ದು ಅಮೇರಿಕಾದ (America) ಒಹಾಯಿಯೋದ ಡೇಟನ್ ನಲ್ಲಿ. ಆದರೆ, ವಿನಯ್ ರೆಡ್ಡಿ ಮೂಲ  ಇರುವುದು ತೆಲಂಗಾಣದ (Telangana) ಪೋತಿರೆಡ್ಡಿ ಪೇಟ ಗ್ರಾಮದಲ್ಲಿ.  ವಿನಯ್ ರೆಡ್ಡಿ ತಂದೆ ನಾರಾಯಣ ರೆಡ್ಡಿ ಹುಟ್ಟಿದ್ದು ಇದೇ  ಪೋತಿ ರೆಡ್ಡಿ ಪೇಟ ಗ್ರಾಮದಲ್ಲಿ. ನಂತರ  ಎಂಬಿಬಿಎಸ್ (MBBS)ಮುಗಿಸಿ ಅಮೆರಿಕಕ್ಕೆ ವಲಸೆ ಹೋಗಿ ಡೇಟನ್ ನಲ್ಲಿ ನೆಲೆಸಿದರು. ನಾರಾಯಣ ರೆಡ್ಡಿಯವರ ಮೂವರು ಮಕ್ಕಳಲ್ಲಿ ಒಬ್ಬರು ಈ ವಿನಯ್ ರೆಡ್ಡಿ. ವಿನಯ್ ರೆಡ್ಡಿ ಯಶಸ್ಸನ್ನು ಸಂಪೂರ್ಣ ದೇಶ ಸಂಭ್ರಮಿಸುತ್ತಿದೆ. ಪೋತಿರೆಡ್ಡಿಪೇಟ ಗ್ರಾಮದಲ್ಲಂತೂ ಜನರಿಗೆ ಹಬ್ಬದ ಸಂಭ್ರಮ. ‘ಮಾ ಬಿಡ್ಡ ಊರುಕಿ ಪೇರು ತೆಚ್ಚಾಡು’ (ನಮ್ಮ ಹುಡುಗ ಊರಿಗೆ ಹೆಸರು ತಂದ) ಎಂದು ಸಂಭ್ರಮಿಸುತ್ತಿದ್ದಾರೆ. 

ಇದನ್ನೂ ಓದಿ :ಜೋ ಬಿಡೆನ್‌ಗೆ Donald Trump ಪತ್ರ, ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಬೈಡೆನ್ ಗೆ ಭಾಷಣ ಬರೆಯುವ ತಂಡದ ನಿರ್ದೇಶಕ:
ನಿಮಗೆ ಗೊತ್ತಿರಲಿ. ಬೈಡೆನ್ (Jeo Biden) ತನ್ನ ಆಡಳಿತಕ್ಕೆ ಬೇಕಾದ ಟೀಮನ್ನು ಈಗಾಗಲೇ ಆಯ್ಕೆ ಮಾಡಿದ್ದಾರೆ. ಬೈಡೆನ್ ಟೀಂನಲ್ಲಿ ವಿನಯ್ ರೆಡ್ಡಿ ಕೂಡಾ ಸೇರಿದ್ದಾರೆ. ಅಮೆರಿಕ ಅಧ್ಯಕ್ಷರಿಗೆ ಭಾಷಣ ಬರೆದುಕೊಡುವ ಶ್ವೇತ ಭವನದ ತಂಡದ ನಿರ್ದೇಶಕರಾಗಿ ಆಯ್ಕೆ ಯಾಗಿದ್ದಾರೆ ವಿನಯ್ ರೆಡ್ಡಿ

ಬೈಡೆನ್  ಚುನಾವಣಾ ಭಾಷಣದ ಲಿಪಿಕಾರ..!
ಅಮೆರಿಕ ಚುನಾವಣಾ (America Election) ಅಖಾಡಕ್ಕೆ ಬೈಡೆನ್ ಮತ್ತು ಕಮಲಾ  ಹ್ಯಾರಿಸ್ ದುಮುಕಿದ ದಿನದಿಂದಲೇ ಉಭಯ ನಾಯಕರಿಗೂ ವಿನಯ್ ರೆಡ್ಡಿ ಭಾಷಣ ಬರೆದುಕೊಡುತ್ತಿದ್ದರು.  ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್  (Kamala Harris) ಶಕ್ತಿಯುತ ಭಾಷಣದ ಹಿಂದಿನ ಶಕ್ತಿ ಅದರ ಲಿಪಿಕಾರ ವಿನಯ್ ರೆಡ್ಡಿ. ಅಧ್ಯಕ್ಷರಾಗಿ (President) ನಿಯೋಜಿತರಾದ ದಿನವೇ ಪ್ರಮಾಣವಚನಕ್ಕೆ ಭಾಷಣ ಸಿದ್ದ ಪಡಿಸುವಂತೆ ವಿನಯ್ ರೆಡ್ಡಿಗೆ ಬೈಡೆನ್ ಸೂಚನೆ ನೀಡಿದ್ದರಂತೆ. ಏನೇ ಆಗಲಿ, ವಿನಯ್ ರೆಡ್ಡಿ ಸಾಧನೆಗೆ ಸಂಪೂರ್ಣ ಭಾರತವೇ ಸಲಾಂ ಹೊಡೆಯುತ್ತಿದೆ. ಹೆಮ್ಮೆ ಪಡುತಿದೆ.

ಇದನ್ನೂ ಓದಿ : ಹಲವು ಪ್ರಥಮಗಳಿಗೆ ಕಾರಣರಾದ ಅಮೆರಿಕಾದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News