ಎಸ್‌ಸಿಒ ಶೃಂಗ ಸಭೆ: ಭಯೋತ್ಪಾಧನೆ ವಿರುದ್ಧ ಕಠಿಣ ಕ್ರಮಕ್ಕೆ ಮೋದಿ ಆಗ್ರಹ
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ ಭಯೋತ್ಪಾದನೆಯನ್ನು ಬೆಂಬಲಿಸುವ, ನೆರವು ನೀಡುವ ಮತ್ತು ಧನಸಹಾಯ ನೀಡುವ ದೇಶಗಳು ಅದಕ್ಕೆ ಜವಾಬ್ದಾರರಾಗಿರಬೇಕು ಎಂದು ಹೇಳಿದರು
ನವದೆಹಲಿ: ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ ಭಯೋತ್ಪಾದನೆಯನ್ನು ಬೆಂಬಲಿಸುವ, ನೆರವು ನೀಡುವ ಮತ್ತು ಧನಸಹಾಯ ನೀಡುವ ದೇಶಗಳು ಅದಕ್ಕೆ ಜವಾಬ್ದಾರರಾಗಿರಬೇಕು ಎಂದು ಹೇಳಿದರು
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರವನ್ನು ಬಲಪಡಿಸಲು ಎಸ್‌ಸಿಒನ ಮನೋಭಾವ ಮತ್ತು ಆದರ್ಶಗಳನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು. ಕಳೆದ ಹಲವು ದಶಕಗಳಿಂದ ಭಾರತವನ್ನು ಎದುರಿಸಲು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ತನ್ನ ಅತಿದೊಡ್ಡ ನೀತಿಯನ್ನಾಗಿ ಮಾಡಿಕೊಂಡಿರುವ ಪಾಕಿಸ್ತಾನವನ್ನು ಭಾಷಣದಲ್ಲಿ ನೇರವಾಗಿ ಹೆಸರಿಸದೆ ಪ್ರತಿ ದೇಶವೂ ಒಗ್ಗೂಡಿ ಇದರ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೆ ವೇಳೆ ಬಾಂಬ್ ಸ್ಫೋಟದಲ್ಲಿ ಹಲವಾರು ಜನರು ಸಾವನ್ನಪ್ಪಿದ ಶ್ರೀಲಂಕಾ ಮತ್ತು ಕೊಲಂಬೊದ ಸೇಂಟ್ ಆಂಥೋನಿ ಚರ್ಚ್ ಗೆ ಇತ್ತೀಚೆಗೆ ಭೇಟಿ ನೀಡಿದ್ದನ್ನು ಭಾಷಣದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
ಪ್ರಧಾನಿ ಅವರು ಭಾರತೀಯ ಸಂಪರ್ಕ ಯೋಜನೆಗಳ ಬಗ್ಗೆ ಮಾತನಾಡಿ ದೇಶಗಳ ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಪಾರದರ್ಶಕವಾಗಿರಬೇಕು ಎಂದು ಹೇಳಿದರು. "ನಮ್ಮ ದೃಷ್ಟಿಕೋನಗಳು ಆರೋಗ್ಯಕರ ಸಹಕಾರವನ್ನು ಉತ್ತೇಜಿಸುವುದು" ಎಂದು ತಿಳಿಸಿದರು.ಅಫ್ಘಾನಿಸ್ತಾನ ಕಳೆದ ನಾಲ್ಕು ದಶಕಗಳಿಂದ ಯುದ್ಧ ಮತ್ತು ನಾಗರಿಕ ಕಲಹಗಳಿಂದ ಹಾನಿಗೊಳಗಾದ ದೇಶವಾಗಿದೆ. ಆದ್ದರಿಂದ ಇದರ ಅಭಿವೃದ್ಧಿಗೆ ಇದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.