ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಮಾಲ್ಡಿವ್ಸ್ ಗೆ ಪಲಾಯನ ಮಾಡಿದ ನಂತರ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ಅವರನ್ನು ಬುಧುವಾರದಂದು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಸಾವಿರಾರು ಜನರು ಕೊಲಂಬೊದಲ್ಲಿನ ಅಧ್ಯಕ್ಷರ ಕಚೇರಿಯನ್ನು ಸುತ್ತುವರೆದ ಬೆನ್ನಲ್ಲೇ ವಿಕ್ರಮಸಿಂಘೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.


ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಕ್ರಮಸಿಂಘೆ ಅವರ ಮಾಧ್ಯಮ ಕಾರ್ಯದರ್ಶಿ ದಿನೌಕ್ 'ಹಂಗಾಮಿ ಅಧ್ಯಕ್ಷರಾಗಿ ನೇಮಕವಾಗಿರುವ ರಾಣಿಲ್ ವಿಕ್ರಂಸಿಂಘೆ ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ "ಎಂದು ಹೇಳಿದ್ದಾರೆ.


ವಿಕ್ರಮಸಿಂಘೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದನ್ನು ರಾಜಪಕ್ಸೆ ಅನುಮೋದಿಸಿದ್ದಾರೆ, ಅಧ್ಯಕ್ಷರು ತಮ್ಮ ಕರ್ತವ್ಯಗಳನ್ನು ಪೂರೈಸಲು ಸಾಧ್ಯವಾಗದ ಸಂದರ್ಭಗಳಲ್ಲಿ ವ್ಯವಹರಿಸುವ ನಿಟ್ಟಿನಲ್ಲಿ ಈಗ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಎಂದು ಸಂಸತ್ತಿನ ಸ್ಪೀಕರ್ ಹೇಳಿದ್ದಾರೆ.


ಇದನ್ನೂ ಓದಿ: ಅಧ್ಯಕ್ಷ ರಾಜಪಕ್ಸೆ ಪಲಾಯನ.. ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ


ಗೋತಬಯ ರಾಜಪಕ್ಸೆ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ಸುದ್ದಿ ಹರಡುತ್ತಿದ್ದಂತೆ, ಕೊಲಂಬೊದ ಪ್ರಮುಖ ಪ್ರತಿಭಟನಾ ಸ್ಥಳದಲ್ಲಿ ಸಾವಿರಾರು ಜನರು "ಗೋಟಾ ಕಳ್ಳ, ಗೋಟಾ ಕಳ್ಳ" ಎಂದು ಎಂದು ಘೋಷಣೆ ಕೂಗುತ್ತಿರುವುದು ಕಂಡು ಬಂದಿದೆ.ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಿದ ಬಗ್ಗೆ ವ್ಯಾಪಕ ಪ್ರತಿಭಟನೆಗಳ ನಡುವೆ ಮತ್ತು ಅವರ ನಿರೀಕ್ಷಿತ ರಾಜೀನಾಮೆಗೆ ಒತ್ತಾಯಿಸಿ ಜನರು ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಬೆನ್ನಲ್ಲ್ಲೇ ಅವರು ಮಾಲ್ಡಿವ್ಸ್ ಗೆ ಪಲಾಯನ ಮಾಡಿದ್ದಾರೆ.


ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರು ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ನ ರಾಜಧಾನಿ ಮಾಲೆ ನಗರಕ್ಕೆ ತೆರಳಿದ್ದಾರೆ ಎಂದು ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.ಅಲ್ಲಿಂದ ಅವರು ಮತ್ತೊಂದು ಏಷ್ಯಾದ ದೇಶಕ್ಕೆ ತೆರಳುವ ಸಾಧ್ಯತೆಯಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.


ಶುಕ್ರವಾರದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರಾಜಪಕ್ಸೆ, ಏಕೀಕೃತ ಸರ್ಕಾರಕ್ಕೆ ದಾರಿ ಮಾಡಿಕೊಡಲು ಬುಧವಾರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಿತ್ತು.ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಶನಿವಾರದಂದು ಅಧ್ಯಕ್ಷ ಮತ್ತು ಪ್ರಧಾನಿಯವರ ಅಧಿಕೃತ ನಿವಾಸಗಳಿಗೆ ಮುತ್ತಿಗೆ ಹಾಕಿದ ನಂತರ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.ಜುಲೈ 20 ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.


ಇದನ್ನೂ ಓದಿ: Fire at Railway Track: ಆಕಾಶದಿಂದ ಸುರೀತಾ ಬೆಂಕಿ ಮಳೆ! ಸುಟ್ಟು ಹೋಯ್ತು ರೈಲು ಹಳಿ


ಪ್ರತಿಭಟನಾನಿರತ ಜನರು ಪ್ರಸ್ತುತ ಶ್ರೀಲಂಕಾದಲ್ಲಿನ ಸಮಸ್ಯೆಗೆ ರಾಜಪಕ್ಸೆ ಕುಟುಂಬವೇ ಕಾರಣ ಎಂದು ದೂಷಿಸಿದ್ದಾರೆ.ಪ್ರವಾಸೋದ್ಯಮ-ಅವಲಂಬಿತ ದೇಶವಾಗಿರುವ ಶ್ರೀಲಂಕಾ ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈಗ ಅದು ಭಾರತ, ಚೀನಾ ಹಾಗೂ ವಿಶ್ವಬ್ಯಾಂಕ್ ಗಳಿಗೆ ಆರ್ಥಿಕ ನೆರವಿಗಾಗಿ ಅಂಗಲಾಚಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.