Rafale Aircraft:`ಅಗತ್ಯ ಬಿದ್ದರೆ ಭಾರತಕ್ಕೆ ಹೆಚ್ಚುವರಿ ರಫೇಲ್ ಪೂರೈಕೆ, ಫ್ರಾನ್ಸ್ ರಕ್ಷಣಾ ಸಚಿವರ ಮಹತ್ವದ ಹೇಳಿಕೆ
Rafale Aircraft News: ಭಾರತವು ಸೆಪ್ಟೆಂಬರ್ 2016 ರಲ್ಲಿ ಫ್ರಾನ್ಸ್‌ನೊಂದಿಗೆ 36 ರಫೇಲ್ ಯುದ್ಧ ವಿಮಾನಗಳಿಗಾಗಿ ಸುಮಾರು 59 ಸಾವಿರ ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.
Rafale Aircraft Deal - ಅಗತ್ಯ ಬಿದ್ದಲ್ಲಿ ಭಾರತಕ್ಕೆ (India) ಹೆಚ್ಚುವರಿ ರಫೇಲ್ ಯುದ್ಧ ವಿಮಾನಗಳನ್ನುಪೂರೈಕೆ ಮಾಡಲು ತಮ್ಮ ದೇಶ ಸಿದ್ಧವಿದೆ ಎಂದು ಫ್ರಾನ್ಸ್ (France) ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಹೇಳಿದ್ದಾರೆ. ಕಾರ್ಯತಂತ್ರದ ಪಾಲುದಾರರಿಂದ ಒಂದೇ ರೀತಿಯ ವಿಮಾನವನ್ನು ಬಳಸುವುದು ಅವರ ಸಂಬಂಧದ "ನೈಜ ಆಸ್ತಿ ಮತ್ತು ಬಲ" ವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಪಾರ್ಲೆ ಅವರು ತಮ್ಮ ಭಾರತೀಯ ಸಹವರ್ತಿ ರಾಜನಾಥ್ ಸಿಂಗ್ ಅವರೊಂದಿಗೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸುವ ಮುನ್ನ ಥಿಂಕ್ ಟ್ಯಾಂಕ್ ನಲ್ಲಿ (ಚಿಂತಕರ ಚಾವಡಿ) ಈ ಹೇಳಿಕೆ ನೀಡಿದ್ದಾರೆ.
ಭಾರತವು 36 ರಫೇಲ್ ಯುದ್ಧವಿಮಾನಗಳ ಒಪ್ಪಂದಕ್ಕೆ ಸಹಿ ಹಾಕಿತ್ತು
ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ, 33 ರಫೇಲ್ ಯುದ್ಧ ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ಭಾರತಕ್ಕೆ ಸರಬರಾಜು ಮಾಡಲಾಗಿದೆ ಎಂದು ಫ್ರೆಂಚ್ ರಾಯಭಾರ ಕಚೇರಿ ತಿಳಿಸಿದೆ. ಭಾರತವು 2016 ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನೊಂದಿಗೆ 36 ರಫೇಲ್ ಯುದ್ಧ ವಿಮಾನಗಳಿಗಾಗಿ (Rafale Aircraft) ಸುಮಾರು 59 ಸಾವಿರ ಕೋಟಿ ರೂಪಾಯಿಗಳಿಗೆ ಅಂತರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಕುರಿತಾಗಿ ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪಾರ್ಲೆ, "ಭಾರತೀಯ ವಾಯುಪಡೆಯು ರಫೇಲ್ ವಿಮಾನದಿಂದ ತೃಪ್ತವಾಗಿದೆ ಎಂಬುದು ತಮ್ಮ ಪಾಲಿಗೆ ಸಂತೋಷದ ಸಂಗತಿ ಮತ್ತು ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ, ನಾವು ಒಪ್ಪಂದದ ಅಡಿಯಲ್ಲಿ 36 ವಿಮಾನಗಳನ್ನು ಸಮಯಕ್ಕೆ ತಲುಪಿಸಿದ್ದೇವೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ'' ಎಂದಿದ್ದಾರೆ.
ಭಾರತದೊಂದಿಗೆ ಹೊಸ ಸಾಧ್ಯತೆಗಳಿಗೆ ಅವಕಾಶವಿದೆ - ಫ್ರಾನ್ಸ್ ರಕ್ಷಣಾ ಸಚಿವರು
ಈ ಬಗ್ಗೆ ಮುಂದುವರೆದು ಮಾತನಾಡಿರುವ ಫ್ರೆಂಚ್ ರಕ್ಷಣಾ ಸಚಿವರು "ಒಂದೇ ರೀತಿಯ ವಿಮಾನವನ್ನು ಬಳಸುವುದು ನಿಜವಾದ ಆಸ್ತಿ ಮತ್ತು ಶಕ್ತಿ. ಹೊಸ ಸಾಧ್ಯತೆಗಳಿಗೆ ಅವಕಾಶವಿದೆ ಎಂಬುದು ನಮಗೆ ಖಾತರಿ ಇದೆ. ಭಾರತದ ಒಂದು ವೇಳೆ ಹೆಚ್ಚುವರಿ ಅವಶ್ಯಕತೆಗೆ ಬೇಡಿಕೆ ಸಲ್ಲಿಸಿದರೆ, ನಾವು ಅದಕ್ಕೆ ಪ್ರತಿಕ್ರಿಯಿಸಲು ಸಿದ್ಧರಾಗಿದ್ದೇವೆ. ವಿಮಾನವಾಹಕ ನೌಕೆ ಶೀಘ್ರದಲ್ಲೇ ಸೇವೆಗೆ ಬರಲಿದೆ ಎಂದು ನಮಗೆ ತಿಳಿದಿದೆ. ಅದಕ್ಕಾಗಿ ವಿಮಾನಗಳು ಬೇಕಾಗಲಿವೆ" ಎಂದು ಅವರು ಹೇಳಿದ್ದಾರೆ. ಭಾರತ ನಿರ್ಧರಿಸಿದರೆ, ನಾವು ಬೇರೆ ಆವೃತ್ತಿಯ ರಫೇಲ್ ಅನ್ನು ಕೂಡ ನೀಡಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Narendra Modi : ಪ್ರಧಾನಿ ಮೋದಿಗೆ 'ಭೂತಾನ್ ಅತ್ಯುನ್ನತ ನಾಗರಿಕ ಪ್ರಶಸ್ತಿ' ಗೌರವ
ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ವಿಕ್ರಾಂತ್ ಮುಂದಿನ ವರ್ಷ ಆಗಸ್ಟ್‌ನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲು ತೀರ್ಮಾನಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್ ವಿಮಾನದ ಮೊದಲ ರವಾನೆಯನ್ನು ಕಳೆದ ವರ್ಷ ಜುಲೈ 29 ರಂದು ಭಾರತಕ್ಕೆ ಸರಬರಾಜು ಮಾಡಲಾಗಿತ್ತು. ಇನ್ನೂ 36 ರಫೇಲ್ ವಿಮಾನಗಳ ಖರೀದಿಗೆ ಭಾರತದೊಂದಿಗೆ ಮಾತುಕತೆ ನಡೆಸಲು ಫ್ರಾನ್ಸ್ ತನ್ನ ಇಚ್ಛೆಯನ್ನು ವ್ಯಕ್ತಪಡಿಸುತ್ತಿದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.