VIDEO: ಭಾರತಕ್ಕೆ ಬರಲಿರುವ ರಫೇಲ್ ಯುದ್ಧ ವಿಮಾನದ FIRST LOOK

ಫ್ರಾನ್ಸ್ನ ಇಸ್ಟ್ರೆ-ಲೀ ಟ್ಯೂಬ್ ಏರ್ಬೇಸ್ನಲ್ಲಿ ಸುಧಾರಿತ ಫೈಟರ್ ಜೆಟ್ಗಳ ಮೊದಲ ನೋಟವನ್ನು ಅನಾವರಣಗೊಳಿಸಲಾಯಿತು.

Last Updated : Nov 13, 2018, 03:16 PM IST
VIDEO: ಭಾರತಕ್ಕೆ ಬರಲಿರುವ ರಫೇಲ್ ಯುದ್ಧ ವಿಮಾನದ FIRST LOOK title=
PIC: ANI

ನವದೆಹಲಿ: ಫ್ರೆಂಚ್ ರಕ್ಷಣಾ ತಯಾರಕ ಡಸ್ಸಾಲ್ಟ್ ಏವಿಯೇಷನ್ ಮಂಗಳವಾರ ರಫೇಲ್ ಫೈಟರ್ ಜೆಟ್ಗಳ ಮೊದಲ ನೋಟ(FIRST LOOK)ವನ್ನು ಅನಾವರಣಗೊಳಿಸಿತು. ಇದನ್ನು 2019 ರ ಸೆಪ್ಟೆಂಬರ್ ನಿಂದ ಭಾರತೀಯ ಏರ್ ಫೋರ್ಸ್ಗೆ ಕಳುಹಿಸಲಾಗುವುದು.

ಫ್ರಾನ್ಸ್ನ ಇಸ್ಟ್ರೆ-ಲೀ ಟ್ಯೂಬ್ ಏರ್ಬೇಸ್ನಲ್ಲಿ ಸುಧಾರಿತ ಫೈಟರ್ ಜೆಟ್ಗಳ ಮೊದಲ ನೋಟವನ್ನು ಅನಾವರಣಗೊಳಿಸಲಾಯಿತು. ಮಂಗಳವಾರ, ಫ್ಲೀಟ್ ಆಫ್ ರಫೇಲ್ ಫೈಟರ್ ಏರ್ಕ್ರಾಫ್ಟ್ನಲ್ಲಿ ಮೊದಲ ವಿಮಾನವನ್ನು ಪರೀಕ್ಷಿಸಲಾಯಿತು, ಫ್ರಾನ್ಸ್ನ ಇಸ್ಟ್ರೆ-ಲೆ-ಟ್ಯೂಬ್ ಏರ್ಬೇಸ್ನಲ್ಲಿ ಐಎಎಫ್ ಇದನ್ನು ಸ್ವೀಕರಿಸಿತು.

ಈ ಸಮಯದಲ್ಲಿ, ರಫೇಲ್ ರನ್-ವೆ ಯಲ್ಲಿ ಪ್ರಾರಂಭಿಸಲ್ಪಟ್ಟಿತು ಮತ್ತು ಹಲವಾರು ಪರೀಕ್ಷೆಗಳನ್ನು ಕೈಗೊಳ್ಳಲಾಯಿತು. ಸಸ್ಪೆಶನ್ ಸಿಸ್ಟಮ್ ಮತ್ತು ಟೈರ್ಗಳನ್ನು ಸಹ ಪರೀಕ್ಷಿಸಲಾಯಿತು. ಇದರ ನಂತರ ಅದರ ತಾಂತ್ರಿಕ ವ್ಯವಸ್ಥೆಯನ್ನು ಪರೀಕ್ಷಿಸಲಾಯಿತು. ತಂತ್ರಜ್ಞರು ಮತ್ತು ಎಂಜಿನಿಯರ್ಗಳ ಮೇಲ್ವಿಚಾರಣೆಯಲ್ಲಿ, ರಾಫೆಲ್ ಅಂತಿಮವಾಗಿ ತನ್ನ ಮೊದಲ ಹಾರಾಟ ನಡೆಸಿತು.

PIC: ANI

ರಫೇಲ್ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನ:
1. ರಫೇಲ್ ವಿಮಾನವು ಒಂದು ಸಮಯದಲ್ಲಿ 26 ಟನ್ ತೂಕದ (26 ಸಾವಿರ ಕಿಲೋಗ್ರಾಮ್) ತೂಕವನ್ನು ಹೊತ್ತು ಹಾರುವ ಸಾಮರ್ಥ್ಯ ಹೊಂದಿದೆ.

2. ಈ ವಿಮಾನವು 3,700 ಕಿಲೋಮೀಟರ್ ತ್ರಿಜ್ಯದಲ್ಲಿ ಎಲ್ಲಿಯಾದರೂ ಕೂಡ ಆಕ್ರಮಣ ಮಾಡಲು ಸಮರ್ಥವಾಗಿದೆ.

3. ಇದು 36 ಸಾವಿರ ದಿಂದ 60 ಸಾವಿರ ಅಡಿ ಗರಿಷ್ಠ ಎತ್ತರಕ್ಕೆ ಹಾರಬಲ್ಲದು ಮತ್ತು ಕೇವಲ ಒಂದು ನಿಮಿಷದಲ್ಲಿಯೂ ತಲುಪಬಹುದು.

4. ಒಮ್ಮೆ ಅದಕ್ಕೆ ಇಂಧನ ಭರ್ತಿ ಮಾಡಿದ ಬಳಿಕ, ಅದು ಸತತವಾಗಿ 10 ಗಂಟೆಗಳ ಕಾಲ ಹಾರಬಲ್ಲದು.

5. ಈ ವಿಮಾನವು ಗಾಳಿಯಿಂದ ನೆಲಕ್ಕೆ ಮತ್ತು ಗಾಳಿಯಿಂದ ಗಾಳಿಗೆ ದಾಳಿ ಮಾಡಬಹುದು.

6. ರಾಫೆಲ್ನಲ್ಲಿನ ಗನ್ ಒಂದು ನಿಮಿಷದಲ್ಲಿ 125 ಫೈರ್ ಮಾಡಲು ಸಾಧ್ಯವಾಗಿದೆ ಮತ್ತು ಪ್ರತಿ ಋತುವಿನಲ್ಲಿ ದೀರ್ಘಾವಧಿ ಅಪಾಯವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.

Trending News