ನವದೆಹಲಿ: ರಷ್ಯಾ ದೇಶವು ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ಬೆನ್ನಲ್ಲೇ ಈಗ ತನ್ನ ವಾಯುಪ್ರದೇಶವನ್ನು ಬ್ರಿಟಿಷ್ ಏರ್ ಲೈನ್ಸ್ ಬಳಿಸಿಕೊಳ್ಳುವುದಕ್ಕೆ ನಿಷೇಧ ಹೇರಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Russia-Ukraine War:ಯುದ್ಧದ ಮಧ್ಯೆ ಭಾವನಾತ್ಮಕ ಚಿತ್ರ! ಉಕ್ರೇನಿಯನ್ ಮಹಿಳೆ ಅಳುತ್ತಿರುವ ಫೋಟೋ ವೈರಲ್


ರಷ್ಯಾ ತನ್ನ ವಿಮಾನ ನಿಲ್ದಾಣಗಳಲ್ಲಿ ಇಳಿಯುವುದನ್ನು ಅಥವಾ ಅದರ ವಾಯುಪ್ರದೇಶವನ್ನು ದಾಟಲು ಬ್ರಿಟಿಷ್ ವಿಮಾನಯಾನ ಸಂಸ್ಥೆಗಳನ್ನು ನಿಷೇಧಿಸಿದೆ ಎಂದು ಅದರ ರಾಜ್ಯ ನಾಗರಿಕ ವಿಮಾನಯಾನ ನಿಯಂತ್ರಕ ಶುಕ್ರವಾರ ತಿಳಿಸಿದೆ.ಉಕ್ರೇನ್‌ನ ರಷ್ಯಾದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದ ವಿಮಾನಯಾನ ಸಂಸ್ಥೆಯಾದ ಏರೋಫ್ಲೋಟ್‌ನ ವಿಮಾನಗಳ ಮೇಲೆ ಲಂಡನ್‌ನ ನಿಷೇಧವನ್ನು ಈ ಕ್ರಮವು ಅನುಸರಿಸುತ್ತದೆ.


ಇದನ್ನೂ ಓದಿ- Russia-Ukraine conflict: ಉಕ್ರೇನ್ ಮೇಲೆ ರಷ್ಯಾ ದಾಳಿ, ತುರ್ತು ಸಭೆ ಕರೆದ ನ್ಯಾಟೋ


ಈಗ ರಷ್ಯಾದ ದಾಳಿಯಿಂದಾಗಿ ಹಲವಾರು ದೇಶಗಳು ಜಾಗತಿಕ ಯುದ್ಧದ ಭೀತಿ ವಿಚಾರವಾಗಿ ತೀವ್ರ ಆತಂಕ ವ್ಯಕ್ತಪಡಿಸಿವೆ.ಭಾರತದಲ್ಲಿನ ಉಕ್ರೇನ್ ರಾಯಭಾರಿ ನಿನ್ನೆ ಪ್ರಧಾನಿ ಮೋದಿ ಜಾಗತಿಕವಾಗಿ ಪ್ರಭಾವಿ ನಾಯಕ ಆದ್ದರಿಂದ ಪುಟಿನ್ (Russian President Vladimir Putin)  ಅವರ ಜೊತೆ ಮಾತನಾಡಬೇಕು ಎಂದು ಅವರು ಮನವಿ ಮಾಡಿದ್ದರು.


ಇದಾದ ಬೆನ್ನೆಲ್ಲೇ ಭಾರತದ ಪ್ರಧಾನಿ ಮೋದಿ (PM Narendra Modi) ದೂರವಾಣಿ ಕರೆಯ ಮೂಲಕ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಅವರ ಜೊತೆ ಮಾತನಾಡಿ ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪುಟಿನ್ ಅವರಿಗೆ ಸಲಹೆ ನೀಡಿದ್ದಾರೆ.ಇದೇ ವೇಳೆ ಪುಟಿನ್ ರಷ್ಯಾದ ಕ್ರಮಗಳನ್ನು ವಿವರಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ