ನವದೆಹಲಿ: ಉಕ್ರೇನ್ ಮತ್ತು ರಷ್ಯಾದಲ್ಲಿ (Russia Ukraine War) ಬೆಳಿಗ್ಗೆಯಿಂದ ಭಯಾನಕ ಸುದ್ದಿಗಳು ಹೊರ ಬರುತ್ತಿವೆ. ಯುದ್ಧದ ಪರಿಸ್ಥಿತಿಯಿದ್ದು, ಎಲ್ಲೆಡೆ ಜನರಲ್ಲಿ ಭೀತಿ ಸೃಷ್ಟಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್‌ನ ಮಹಿಳೆಯೊಬ್ಬರು ಅಳುತ್ತಿರುವ ಚಿತ್ರವೊಂದು ಸಾಕಷ್ಟು ವೈರಲ್ ಆಗುತ್ತಿದೆ.
ಯುದ್ಧದ ಮಧ್ಯೆ ಮಹಿಳೆಯ ಚಿತ್ರ ವೈರಲ್:
ವಾಸ್ತವವಾಗಿ, ಯುದ್ಧ ಅತ್ಯಂತ ಭೀಕರ ಪರಿಸ್ಥಿತಿಯನ್ನು ನಿರ್ಮಿಸುತ್ತದೆ. ಅಲ್ಲಿ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದು ಮತ್ತು ಅವರ ಕುಟುಂಬ ಸದಸ್ಯರ ಜೀವಗಳನ್ನು ಉಳಿಸಲು ಹವನಿಸುತ್ತಿರುತ್ತಾರೆ. ಇದೀಗ ಉಕ್ರೇನ್ ಜನರಲ್ಲಿ ಅಂತಹ ಭಯವಿದೆ. ಅಲ್ಲಿನ ಬೀದಿಗಳಲ್ಲಿ ರಷ್ಯಾದ (Russia) ಸೈನಿಕರು ಆಯುಧಗಳೊಂದಿಗೆ ಶಸ್ತ್ರಸಜ್ಜಿತರಾಗಿ ತಿರುಗಾಡುತ್ತಿದ್ದಾರೆ.
रूस के हमले से यूक्रेन में अफरा-तफरी, रोते हुए सड़कों पर भाग रहे लोग#RussiaUkraineConflict #Putin #WorldWar3 @aditi_tyagi
यहां देखें LIVE - https://t.co/vQo61ksgSN pic.twitter.com/NclzRC540E
— Zee News (@ZeeNews) February 24, 2022
ಇದನ್ನೂ ಓದಿ: Russia-Ukraine conflict: ಉಕ್ರೇನ್ ಮೇಲೆ ರಷ್ಯಾ ದಾಳಿ, ತುರ್ತು ಸಭೆ ಕರೆದ ನ್ಯಾಟೋ
ಯುದ್ಧದ ಮಧ್ಯೆ, ಉಕ್ರೇನ್‌ನ (Ukraine) ಅಧ್ಯಕ್ಷೀಯ ಕಚೇರಿಯ ಸಲಹೆಗಾರರು 40 ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಭಾರತದಿಂದ ಸಹಾಯಕ್ಕಾಗಿ ಆಶಿಸುತ್ತೇವೆ:
ಭಾರತ ಮತ್ತು ರಷ್ಯಾ (India-Russia Relationship) ನಡುವಿನ ಸಂಬಂಧ ಉತ್ತಮವಾಗಿದೆ ಎಂದು ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಹೇಳಿದ್ದಾರೆ. ಉಕ್ರೇನ್-ರಷ್ಯಾ ವಿವಾದವನ್ನು ನಿಯಂತ್ರಿಸುವಲ್ಲಿ ನವದೆಹಲಿ (ಭಾರತ) ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ತಕ್ಷಣವೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ನಮ್ಮ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಸಂಪರ್ಕಿಸಲು ವಿನಂತಿಸುತ್ತೇವೆ ಎಂದು ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ 24 ಗಂಟೆಗಳ ತುರ್ತು ಸಹಾಯವಾಣಿ ಇಲ್ಲಿದೆ
ರಷ್ಯಾದ 7 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಉಕ್ರೇನ್:
ಇಂತಹ ಭಯಾನಕ ವಾತಾವರಣದ ನಡುವೆಯೇ ಉಕ್ರೇನ್ ಸೇನೆ ಇದುವರೆಗೆ ರಷ್ಯಾದ 7 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಮಾಧ್ಯಮಗಳು ಹೇಳಿಕೊಂಡಿವೆ. ರಷ್ಯಾದಿಂದ ಪ್ರತ್ಯೇಕ ದೇಶವೆಂದು ಗುರುತಿಸಲ್ಪಟ್ಟ ಲುಹಾನ್ಸ್ಕ್ ಪ್ರಾಂತ್ಯದಲ್ಲಿ ರಷ್ಯಾದ ಏಳನೇ ಯುದ್ಧ ವಿಮಾನವನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ