Russia Nuclear Drill: ಉಕ್ರೇನ್ ಉದ್ವಿಗ್ನತೆಯ ನಡುವೆ ನ್ಯೂಕ್ಲಿಯರ್ ಡ್ರಿಲ್ ಆರಂಭಿಸಿದ ರಷ್ಯಾ ಸೇನೆ, ಡ್ರಿಲ್ ಸ್ವತಃ ಸಾಕ್ಷಿಯಾದ Vladimir Putin
Russia-Ukraine Standoff - ಉಕ್ರೇನ್ನೊಂದಿಗಿನ ಉದ್ವಿಗ್ನತೆಯ ನಡುವೆ, ರಷ್ಯಾದ ಮಿಲಿಟರಿ ಶನಿವಾರ ತನ್ನ ಪರಮಾಣು ಪಡೆಗಳ ಮಿಲಿಟರಿ (Russian Military) ಸಮರಾಭ್ಯಾಸ ಆರಂಭಿಸಿದೆ. ರಷ್ಯಾ ಮತ್ತು ಬೆಲಾರಸ್ ಈ 10 ದಿನಗಳ ಮಿಲಿಟರಿ ಸಮರಾಭ್ಯಾಸ (Russia-Ukraine Crisis) ಪ್ರಾರಂಭಿಸಿವೆ. ರಷ್ಯಾದ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಟ್ಯಾಂಕ್‌ಗಳು ಮತ್ತು ಪ್ಯಾರಾಟ್ರೂಪರ್‌ಗಳು ದೊಡ್ಡ ಪ್ರಮಾಣದ ಮಿಲಿಟರಿ ಸಮರಾಭ್ಯಾಸದಲ್ಲಿ ತೊಡಗಿಸಿಕೊಂಡಿವೆ.
ಮಾಸ್ಕೋ: Russia-Ukraine Conflict - ಉಕ್ರೇನ್ (Ukraine) ಜೊತೆಗಿನ ಉದ್ವಿಗ್ನತೆಯ ನಡುವೆ ರಷ್ಯಾ ಸೇನೆ ಶನಿವಾರ ತನ್ನ ಪರಮಾಣು ಪಡೆಗಳ ಮಿಲಿಟರಿ ಸಮರಾಭ್ಯಾಸ ಪ್ರಾರಂಭಿಸಿದೆ. ರಷ್ಯಾ (Russia) ಮತ್ತು ಬೆಲಾರಸ್ ಈ 10 ದಿನಗಳ ಮಿಲಿಟರಿ ಸಮರಾಭ್ಯಾಸ ನಡೆಸಲಿವೆ. ರಷ್ಯಾದ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಟ್ಯಾಂಕ್‌ಗಳು ಮತ್ತು ಪ್ಯಾರಾಟ್ರೂಪರ್‌ಗಳು ದೊಡ್ಡ ಪ್ರಮಾಣದ ಮಿಲಿಟರಿ ಸಮರಾಭ್ಯಾಸದಲ್ಲಿ ತೊಡಗಿಸಿಕೊಂಡಿವೆ. ಏತನ್ಮಧ್ಯೆ, ಮಿಲಿಟರಿ ಪಡೆಗಳನ್ನು ಕಡಿಮೆ ಮಾಡುವಂತೆ ಅಮೆರಿಕ ರಷ್ಯಾಕ್ಕೆ ಸಲಹೆ ನೀಡಿದೆ.
ಪುಟಿನ್ ಅವರ ಉಪಸ್ಥಿತಿಯಲ್ಲಿ ಮಾಕ್ ಡ್ರಿಲ್
ಶನಿವಾರ ಆರಂಭಗೊಂಡಿರುವ ಈ ಮಿಲಿಟರಿ ಸಮರಾಭ್ಯಾಸಕ್ಕೆ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸ್ವತಃ ಸಾಕ್ಷಿಯಾಗಿದ್ದಾರೆ. ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಸಹ ಸಮರಾಭ್ಯಾಸದಲ್ಲಿ ಶಾಮೀಲುಗೊಳಿಸಲಾಗಿದೆ.
ವಿಡಿಯೋ ಜಾರಿಗೊಳಿಸಿದೆ ರಷ್ಯಾದ ರಕ್ಷಣಾ ಸಚಿವಾಲಯ
ರಷ್ಯಾದ ಪೂರ್ವ ಮಿಲಿಟರಿ ಜಿಲ್ಲೆಯ ಕಡಲ ಘಟಕಗಳು ಬೆಲಾರಸ್‌ನ ಒಬುಜ್-ಲೆಸ್ನೋವ್ಸ್ಕಿ ತರಬೇತಿ ಮೈದಾನದಲ್ಲಿ ಜಂಟಿ ಸಮರಾಭ್ಯಾಸ ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ನೌಕಾಪಡೆಗಳು ಎಂಐ -8 ಮಿಲಿಟರಿ ಹೆಲಿಕ್ಯಾಪ್ಟರ್ ಗಳಿಂದ ಇಳಿಯುತ್ತಿರುವುದನ್ನು ಮತ್ತು ವಿವಿಧ ಯುದ್ಧತಂತ್ರದ ಸಮರಾಭ್ಯಾಸಗಳನ್ನು ಮಾಡುವುದನ್ನು ನೀವು ಗಮನಿಸಬಹುದು.
ಇದನ್ನೂ ಓದಿ-Russia-Ukraine Crisis: ರಷ್ಯಾ ದಾಳಿಯ ಭೀತಿ, ಉಕ್ರೇನ್ ನಲ್ಲಿ AK-47 ಹಿಡಿದ 79ರ ಇಳಿವಯಸ್ಸಿನ ಅಜ್ಜಿ
ಓರ್ವ ವ್ಯಕ್ತಿ ಮೃತಪಟ್ಟ ವರದಿ
ಏತನ್ಮಧ್ಯೆ ಉಕ್ರೇನ್ ನಲ್ಲಿಯೂ ಕೂಡ ಭೀತಿಯ ವಾತಾವರಣವಿದ್ದು, ಪೂರ್ವ ಉಕ್ರೇನ್ ನಲ್ಲಿ ಓರ್ವ ಸೈನಿಕ ಮೃತಪಟ್ಟಿರುವುದು ವರದಿಯಾಗಿದೆ.
ಇದನ್ನೂ ಓದಿ-Russia-Ukraine Crisis: 'ನಾಳೆ ಬೆಳಗ್ಗೆ 5.30ಕ್ಕೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ'!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.