Vladimir Putin India Visit: ಕುಟಿಲ ನೀತಿಯಲ್ಲಿ ಪರಿಣಿತ ವ್ಲಾಡಿಮೀರ್ ಪುಟಿನ್, ಭಾರತದ ಭೇಟಿ ಹಿಂದಿನ ಉದ್ದೇಶ ಏನು?

Vladimir Putin India Visit: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಅವರ ಈ ಭೇಟಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ (India And Russia Bilateral Relations) ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಸ್ವಾತಂತ್ರ್ಯದ ನಂತರ ಬಹಳ ಗಟ್ಟಿಯಾಗಿವೆ. ವಿಶೇಷವಾಗಿ ರಷ್ಯಾದೊಂದಿಗಿನ ಮಿಲಿಟರಿ ಸಂಬಂಧಗಳು ಮೊದಲಿಗಿಂತಲೂ ಇಂದು ಉತ್ತಮವಾಗಿವೆ. ಮಿಲಿಟರಿ ಯಂತ್ರಾಂಶದ ಹೊರತಾಗಿ, ಭಾರತವು ಟ್ಯಾಂಕ್‌ಗಳು, ಸಣ್ಣ ಶಸ್ತ್ರಾಸ್ತ್ರಗಳು, ವಿಮಾನಗಳು, ಹಡಗುಗಳು, ವಾಹಕ ವಿಮಾನಗಳು (INS Vikramaditya) ಮತ್ತು ಜಲಾಂತರ್ಗಾಮಿ ನೌಕೆಗಳನ್ನು ರಷ್ಯಾದಿಂದ ಖರೀದಿಸುತ್ತಿದೆ. ಎರಡೂ ದೇಶಗಳು ಒಟ್ಟಾಗಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯನ್ನು ಸಹ ತಯಾರಿಸುತ್ತಿವೆ.

Written by - Nitin Tabib | Last Updated : Dec 6, 2021, 01:49 PM IST
  • ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿ.
  • ಭಾರತದ ಪಾಲಿಗೆ ಈ ಭೇಟಿ ಎಷ್ಟು ಮಹತ್ವದ್ದಾಗಿದೆ?
  • ಪುಟಿನ್ ಭಾರತ ಭೇಟಿಯ ಹಿಂದಿನ ಉದ್ದೇಶವಾದರೂ ಏನು?
Vladimir Putin India Visit: ಕುಟಿಲ ನೀತಿಯಲ್ಲಿ ಪರಿಣಿತ ವ್ಲಾಡಿಮೀರ್ ಪುಟಿನ್, ಭಾರತದ ಭೇಟಿ ಹಿಂದಿನ ಉದ್ದೇಶ ಏನು? title=
Vladimir Putin India Visit (File Photo)

ನವದೆಹಲಿ: ಕರೋನವೈರಸ್ ಒಮಿಕ್ರಾನ್ ರೂಪಾಂತರಿ (Covid-19 Omicron Variant) ಮತ್ತು ಉಕ್ರೇನ್ ಬಿಕ್ಕಟ್ಟಿನ (Ukraine Crisis) ಗಂಭೀರ ಪರಿಸ್ಥಿತಿಯ ನಡುವೆ ಕೆಲವು ಗಂಟೆಗಳ ಕಾಲ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)ಅವರು ಡಿಸೆಂಬರ್ 6 ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಪುಟಿನ್ ಅಂತರಾಷ್ಟ್ರೀಯ ಕೂಟ ನೀತಿಯಲ್ಲಿ ಓರ್ವ ನಿಪುಣ ಆಟಗಾರರಾಗಿದ್ದಾರೆ. ಅವರು ಯಾರನ್ನಾದರೂ ಕೂಡ ಎದುರಿಸಬಲ್ಲರು. ಭಾರತಕ್ಕೆ (India) ಭೇಟಿ ನೀಡಿದಾಗ, ಪುಟಿನ್ ಅವರು ತಮ್ಮ ಮೂರು ದಕ್ಷಿಣ ಏಷ್ಯಾ ರಾಷ್ಟ್ರಗಳಾಗಿರುವ ಭಾರತ, ಚೀನಾ(China) ಮತ್ತು ಪಾಕಿಸ್ತಾನವನ್ನು (Pakistan) ಏಕಕಾಲದಲ್ಲಿ ಗುರಿಯಾಗಿಸಲು ಪ್ರಯತ್ನಿಸಲಿದ್ದಾರೆ

ವಿಶೇಷವೆಂದರೆ ಅವರ ಈ ಭೇಟಿಯ ಸಂಧರ್ಭದಲ್ಲಿ ಅಧ್ಯಕ್ಷ ಪುಟಿನ್ (ವ್ಲಾದಿಮಿರ್ ಪುಟಿನ್ ಭಾರತ ಭೇಟಿ) ಮತ್ತು ಪ್ರಧಾನಿ ನರೇಂದ್ರ ಮೋದಿ (ಪಿಎಂ ನರೇಂದ್ರ ಮೋದಿ) ನಡುವೆ ಕೆಲಕಾಲ ಖಾಸಗಿ ಮಾತುಕತೆ ನಡೆಯಲಿದೆ. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಚೀನಾ ಮತ್ತು ಭಾರತ ಗಡಿ ವಿವಾದದ ಸಮಯದಿಂದಲೂ, ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳಲ್ಲಿ ಒಂದು ಗ್ಯಾಪ್ ನಿರ್ಮಾಣಗೊಂಡಿದೆ. ಉಭಯ ದೇಶಗಳ ಬಾಂಧವ್ಯದಲ್ಲಿ ಆ ಗಟ್ಟಿತನ ಕಂಡಿಲ್ಲ. ಚೀನಾ ಗಡಿ ವಿವಾದದ ಸಮಯದಲ್ಲಿ ಭಾರತಕ್ಕೆ ರಷ್ಯಾದ ಸಹಕಾರ ಅಗತ್ಯವಾಗಿತ್ತು, ಆದರೆ ರಷ್ಯಾ ಮೌನವಾಗಿತ್ತು. ಈ ಸಮಯದಲ್ಲಿ ಭಾರತವು ಅಮೆರಿಕಕ್ಕೆ ಬಹಳ ಹತ್ತಿರವಾಗಿದೆ. ಜಗತ್ತಿನ ಮುಂದೆ ಭಾರತ ತನ್ನ ಆಳವಾದ ಸ್ನೇಹಿತ ಎಂದು ಅಮೆರಿಕ ಬಣ್ಣಿಸಿದೆ. ರಷ್ಯಾ ಮತ್ತು ಚೀನಾದ ಸಾಮೀಪ್ಯವೂ ಭಾರತವನ್ನು ಘಾಸಿಗೊಳಿಸಿದೆ. ಅಷ್ಟೇ ಅಲ್ಲ, ಚೀನಾದ ಸಾಮೀಪ್ಯದಿಂದ ರಷ್ಯಾ ಕೂಡ ಪಾಕಿಸ್ತಾನಕ್ಕೆ ಹತ್ತಿರವಾಗಿದೆ. ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ರಷ್ಯಾಕ್ಕೆ ಭಾರತ, ಚೀನಾ ಮತ್ತು ಪಾಕಿಸ್ತಾನ ಎಂಬ ಮೂರು ದೇಶಗಳ ಅಗತ್ಯವಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 

Forbes.com ಗಾಗಿ ಬರೆಯಲಾದ 'Why Russia Won't Choose Sides Between China And India' ಎಂಬ ಶೀರ್ಷಿಕೆಯ ಲೇಖನದಲ್ಲಿ ಆಗ್ನೇಯ ಏಷ್ಯಾದ ಪತ್ರಕರ್ತ ಡೇವಿಡ್ ಹಟ್ ಅವರು ಪ್ರಸ್ತುತ ರಷ್ಯಾದ ತಂತ್ರವು ಚೀನಾವನ್ನು ಭಾರತದೊಂದಿಗೆ ತೊಡಗಿಸಿಕೊಳ್ಳುವುದಾಗಿದೆ ಎಂದು ಹೇಳಿದ್ದಾರೆ. ಅಂತರಾಷ್ಟ್ರೀಯ ಕೂಟನೀತಿಯಲ್ಲಿ ಅಮೆರಿಕದ ಪ್ರಾಬಲ್ಯವನ್ನು ಎದುರಿಸಲು ರಷ್ಯಾಕ್ಕೆ ಚೀನಾ ಸ್ನೇಹ ಬೇಕೇ ಬೇಕು. ಆದರೆ ಏಷ್ಯಾದಲ್ಲಿ ಚೀನಾದ ಮತಾಂಧತೆ  ರಷ್ಯಾಗೆ  ಕಳವಳಕಾರಿಯಾಗಿದೆ. ಇದಕ್ಕಾಗಿ ಅದು ಚೀನಾವನ್ನು ಎದುರಿಸಲು ಭಾರತದೊಂದಿಗಿನ ಸಂಬಂಧಕ್ಕೂ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ- ರಕ್ಷಣಾ ಸಹಕಾರವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ: ರಾಜನಾಥ್ ಸಿಂಗ್

ರಷ್ಯಾದ ಶಸ್ತ್ರಾಸ್ತ್ರಗಳಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದೆ
ಇಷ್ಟೇ ಅಲ್ಲ, ಭಾರತ ವಿಶೇಷವಾಗಿ ರಷ್ಯಾ ನಿರ್ಮಿತ  ಶಸ್ತ್ರಾಸ್ತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ಈ ಕಾರಣಕ್ಕಾಗಿ, ರಷ್ಯಾ ವಿಶ್ವಸಂಸ್ಥೆಯಲ್ಲಿ ಭಾರತದ  ಶಾಶ್ವತ ಸದಸ್ಯತ್ವದಿಂದ ಹಿಡಿದು ಶಾಂಘೈ ಸಹಕಾರ ಸಂಸ್ಥೆ ಮತ್ತು ಎನ್ಎಸ್ಜಿಗೆ ಬೆಂಬಲ ವ್ಯಕ್ತಪಡಿಸುತ್ತಿದೆ. ರಷ್ಯಾ ಮತ್ತು ಚೀನಾ ನಡುವಿನ ಸಂಬಂಧಕದ ಕುರಿತು ಹೇಳುವುದಾದರೆ. ಪುಟಿನ್ ಸರ್ಕಾರಕ್ಕೆ ಇದು ಒಂದು ರೀತಿಯ ಅನಿವಾರ್ಯತೆಯಾಗಿದೆ.  ಪಾಶ್ಚಿಮಾತ್ಯ ನಿರ್ಬಂಧಗಳನ್ನು ಜಯಿಸಲು ರಷ್ಯಾಕ್ಕೆ ಚೀನಾ ಅಗತ್ಯವಿದೆ, ಆದರೆ ಅದು (ರಷ್ಯಾ) ಚೀನಾದ ಬಗ್ಗೆ ಖಚಿತವಾಗಿಲ್ಲ.

ಇದನ್ನೂ ಓದಿ-PM Modi-Putin Summit Today: ಪ್ರಧಾನಿ ಮೋದಿ-ಪುಟಿನ್ ಶೃಂಗಸಭೆಯತ್ತ ಎಲ್ಲರ ಚಿತ್ತ

ಭಾರತದ ಪಾಲಿಗೆ ಪುಟಿನ್ ಭೇಟಿ ಎಷ್ಟು ಮಹತ್ವದ್ದಾಗಿದೆ?
ರಷ್ಯಾ ಅಧ್ಯಕ್ಷ ಪುಟಿನ್ ಅವರ ಈ ಭೇಟಿಯಿಂದ  ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಮತ್ತಷ್ಟು ಬಲ ಸಿಗಲಿದೆ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಸ್ವಾತಂತ್ರ್ಯದ ನಂತರ ಬಹಳ ಗಟ್ಟಿಯಾಗಿವೆ. ವಿಶೇಷವಾಗಿ ರಷ್ಯಾದೊಂದಿಗಿನ ಮಿಲಿಟರಿ ಸಂಬಂಧಗಳು ಮೊದಲಿನಿಂದಲೂ ಉತ್ತಮವಾಗಿವೆ. ಮಿಲಿಟರಿ ಯಂತ್ರಾಂಶದ ಹೊರತಾಗಿ, ಭಾರತವು ಟ್ಯಾಂಕ್‌ಗಳು, ಸಣ್ಣ ಶಸ್ತ್ರಾಸ್ತ್ರಗಳು, ವಿಮಾನಗಳು, ಹಡಗುಗಳು, ವಾಹಕ ವಿಮಾನಗಳು (INS ವಿಕ್ರಮಾದಿತ್ಯ) ಮತ್ತು ಜಲಾಂತರ್ಗಾಮಿ ನೌಕೆಗಳನ್ನು ರಷ್ಯಾದಿಂದ ಖರೀದಿಸಿದೆ. ಎರಡೂ ದೇಶಗಳು ಒಟ್ಟಾಗಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ಮೇಲೂ ಕೂಡ ಕಾರ್ಯನಿರ್ವಹಿಸುತ್ತಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-21st Indo-Russia Annual Summit: ಡಿಸೆಂಬರ್ 6 ಕ್ಕೆ ಭಾರತಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News