Russia-Ukraine War:ಯುದ್ಧದ ನಡುವೆಯೇ 11 ವರ್ಷದ ಬಾಲಕನ 1000 ಕೀ.ಮೀ ಪಯಣ, `ಹೀರೋ` ಎಂದ ಸರ್ಕಾರ
Russia-Ukraine War - ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ (Ukraine-Russia Tension) ನಡುವೆಯ 11 ವರ್ಷದ ಉಕ್ರೇನ್ ಬಾಲಕನೋರ್ವ 1000 ಕೀ.ಮೀ ಯಾತ್ರೆ (Ukraine Boy Travel Story)ನಡೆಸುವ ಮೂಲಕ ಸ್ಲೋವೊಕಿಯಾ ತಲುಪಿದ್ದಾನೆ. ವರದಿಗಳ ಪ್ರಕಾರ ಆತನ ಹೆಗಲ ಮೇಲಿದ್ದ ಒಂದು ಬ್ಯಾಗ್ ನಲ್ಲಿ ಆತನ ತಾಯಿ ನೀಡಿದ್ದ ಲೆಟರ್ ಹಾಗೂ ಒಂದು ಎಮರ್ಜೆನ್ಸಿ ನಂಬರ್ ಇತ್ತು ಎನ್ನಲಾಗಿದೆ.
Russia-Ukraine War - ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ (Ukraine-Russia Tension) ನಡುವೆಯ 11 ವರ್ಷದ ಉಕ್ರೇನ್ ಬಾಲಕನೋರ್ವ 1000 ಕೀ.ಮೀ ಯಾತ್ರೆ (Ukraine Boy Travel Story)ನಡೆಸುವ ಮೂಲಕ ಸ್ಲೋವೊಕಿಯಾ ತಲುಪಿದ್ದಾನೆ. ವರದಿಗಳ ಪ್ರಕಾರ ಆತನ ಹೆಗಲ ಮೇಲಿದ್ದ ಒಂದು ಬ್ಯಾಗ್ ನಲ್ಲಿ ಆತನ ತಾಯಿ ನೀಡಿದ್ದ ಲೆಟರ್ ಹಾಗೂ ಒಂದು ಎಮರ್ಜೆನ್ಸಿ ನಂಬರ್ ಇತ್ತು ಎನ್ನಲಾಗಿದೆ.
ಮಗುವನ್ನು ಕೊಂಡಾಡುತ್ತಿರುವ ಜನರು
ಈ 11 ವರ್ಷದ ಮಗು ಕಳೆದ ವಾರ ರಷ್ಯಾದ (Russia) ಪಡೆಗಳು ವಶಪಡಿಸಿಕೊಂಡ ಆಗ್ನೇಯ ಉಕ್ರೇನ್‌ನ (Ukraine) ಝಪೊರಿಜ್ಜ್ಯಾ ನಿವಾಸಿಯಾಗಿದ್ದಾನೆ. ವರದಿಗಳ ಪ್ರಕಾರ, ಅನಾರೋಗ್ಯದಿಂದ ಓರ್ವ ಸಂಬಂಧಿಯನ್ನು ನೋಡಿಕೊಳ್ಳಲು ಅವರ ಪೋಷಕರು ಉಕ್ರೇನ್‌ನಲ್ಲಿ ಉಳಿಯಬೇಕಾಯಿತು. ಈ ಕಷ್ಟಕರವಾದ ಪ್ರಯಾಣವನ್ನು ಪೂರ್ಣಗೊಳಿಸಿದ ಮಗುವಿನ ಮುಖದಲ್ಲಿನ ನಿಷ್ಕಲ್ಮಶ ನಗು, ನಿರ್ಭಯತೆ ಮತ್ತು ದೃಢಸಂಕಲ್ಪದ ಕುರಿತು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ, ಸ್ಲೋವಾಕಿಯಾದ ಆಂತರಿಕ ಸಚಿವಾಲಯವು ಮಗುವನ್ನು "ಕಳೆದ ರಾತ್ರಿಯ ಅತಿ ದೊಡ್ಡ ಹೀರೋ" (Ukraine War Hero) ಎಂದು ಬಣ್ಣಿಸಿದೆ.
ಇದನ್ನೂ ಓದಿ-ಕೈವ್ ನತ್ತ ಧಾವಿಸುತ್ತಿರುವ ಶತ್ರು ಪಡೆ, ಹೊಸ ವೀಡಿಯೊ ಬಿಡುಗಡೆ ಮಾಡಿದ ರಷ್ಯಾದ ರಕ್ಷಣಾ ಸಚಿವಾಲಯ
ಮಗುವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ ಸ್ಲೋವೊಕಿಯಾ ಸರ್ಕಾರ
ವರದಿಗಳ ಪ್ರಕಾರ, ಹುಡುಗನ ತಾಯಿ ಆತನನ್ನು ತನ್ನ ಸಂಬಂಧಿಕರವರೆಗೆ ತಲುಪಿಸಲು ರೈಲಿನಲ್ಲಿ ಸ್ಲೋವಾಕಿಯಾಕ್ಕೆ (Slovakia Government) ಕಳುಹಿಸಿದ್ದಳು. ಸ್ಲೋವಾಕಿಯಾ ತಲುಪಿದ ಬಳಿಕ, ಸ್ಲೋವೊಕಿಯಾದ ಗಡಿಭಾಗದ ಅಧಿಕಾರಿಗಳು ಬ್ರಾತಿಸ್ಲಾವಾನಲ್ಲಿ ವಾಸಿಸುವ ಮಗುವಿನ ಸಂಬಂಧಿಕರನ್ನು ಸಂಪರ್ಕಿಸಿ ಆತನನ್ನು ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ-ಬಲು ಅಪರೂಪ ಈ ಜೋಡಿ! 24 ರ ಯುವಕನ ಜೊತೆ 77ರ ವೃದ್ಧೆ ಮದುವೆ
ಇನ್ನೊಂದೆಡೆ ತಮ್ಮ ಮಗುವನ್ನು ಸರಿಯಾಗಿ ನೋಡಿಕೊಂಡು ಸಂಬಂಧಿಕರಿಗೆ ಹಸ್ತಾಂತರಿಸಿದ ಸ್ಲೋವೊಕಿಯಾ ಸರ್ಕಾರ ಮತ್ತು ಅಧಿಕಾರಿಗಳಿಗೆ ಮಗುವಿನ ತಾಯಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಂದೆ-ತಾಯಿಯರಿಗೆ ಉಕ್ರೇನ್ ನಲ್ಲಿ ಉಳಿದುಕೊಳ್ಳುವ ಪ್ರಸಂಗ ಬಂದ ಕಾರಣ ಮಗು ಒಂಟಿಯಾಗಿ ಪ್ರಯಾಣ ಬೆಳೆಸಲಿದ್ದು, ಮಗುವಿನ ಧೈರ್ಯವನ್ನು ಮೆಚ್ಚಲೇಬೇಕು ಎಂದು ಸ್ಲೋವೊಕಿಯಾದ ಗೃಹ ಸಚಿವಾಲಯ ಹೇಳಿದೆ.
ಇದನ್ನೂ ಓದಿ-Cobra-Rattlesnake Fight: ಇದ್ದಕ್ಕಿದ್ದಂತೆ ಎದುರಾದ ರಾಟಲ್ ಸ್ನೇಕ್-ಕೋಬ್ರಾ, ಮುಂದೆ ಆಗಿದ್ದೇ ಬೇರೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.