ಅಮೆರಿಕಾ-ಚೀನಾಗಳ ನಡುವೆ ಸೆಮಿಕಂಡಕ್ಟರ್ ಸಮರ
ಮೈಕ್ರೋ ಚಿಪ್ ಗಳು ಪ್ರಸ್ತುತ ಜಾಗತಿಕ ಆರ್ಥಿಕತೆಯ ಜೀವಾಳವಾಗಿವೆ: ಎಲ್ಇಡಿ ದೀಪದ ಬಲ್ಬುಗಳಿಂದ ಹಿಡಿದು ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷೀನ್), ಆಟೋಮೊಬೈಲ್ ಗಳು ಹಾಗೂ ಸೆಲ್ ಫೋನ್ ಗಳು ಎಲ್ಲಾ ಸಾಧನಗಳಲ್ಲೂ ಈ ಸಣ್ಣ ಸಿಲಿಕಾನ್ ಬಿಲ್ಲೆಗಳನ್ನು (ಸ್ಲೈಸಸ್) ಕಾಣಬಹುದು.
ಮೆಕ್ಕೆನ್ಸಿ ಈ ವರ್ಷ ಹೊರಡಿಸಿದ ಸಂಶೋಧನೆಯ ಅನುಸಾರ, 2030ರ ವೇಳೆಗೆ ಸೆಮಿಕಂಡಕ್ಟರ್ ವಲಯದ ಮೌಲ್ಯ 1 ಟ್ರಿಲಿಯನ್ ಡಾಲರ್ (ಸುಮಾರು ರೂ. 81 ಲಕ್ಷ ಕೋಟಿ ) ಆಗಲಿದೆ.
ರಾಷ್ಟ್ರೀಯ ಭದ್ರತೆಯ ಕಳವಳ-ಕಾಳಜಿಗಳನ್ನು ಉಲ್ಲೇಖಿಸಿ ಅಮೆರಿಕಾ ಸಂಯುಕ್ತ ಸಂಸ್ಥಾನವು ಕಳೆದ ಕೆಲವು ತಿಂಗಳುಗಳಿಂದ ಚೀನಾಗೆ ಅತ್ಯಂತ ಆಧುನಿಕ ಸೆಮಿಕಂಡಕ್ಟರ್ ಗಳ ಲಭ್ಯತೆ ಹಾಗೂ ಅವುಗಳನ್ನು ತಯಾರಿಸಲು ಅಗತ್ಯವಿರುವ ಉಪಕರಣಗಳು ಹಾಗೂ ಜನಬಲದ ಲಭ್ಯತೆಯನ್ನು ನಿರ್ಬಂಧಿಸಲು ಪ್ರಯತ್ನಿಸಿದೆ.
ಚೀನಾವು ಅಮೇರಿಕಾ ತನ್ನ ಮೇಲೆ ತಂತ್ರಜ್ಞಾನೀಯ ಭಯೋತ್ಪಾದನೆ (ಟೆಕ್ನಾಲಜಿಕಲ್ ಟೆರರಿಸಂ)ಯನ್ನು ನಡೆಸುತ್ತಿದೆ. ಜೊತೆಗೆ ತನ್ನ ಆರ್ಥಿಕ ಬೆಳವಣಿಗೆಗೆ ನ್ಯಾಯವಲ್ಲದ ರೀತಿಯಲ್ಲಿ ಅಡ್ಡಿಪಡಿಸಿದೆ ಎಂದು ಆರೋಪಿಸಿ. ಈ ಭಯವನ್ನು ತಳ್ಳಿ ಹಾಕಿದೆ. ಅಮೆರಿಕಾದ ನಿಯಂತ್ರಣ ಪ್ರಯತ್ನಗಳನ್ನು ಅದು ಎದುರಿಸಲು ಪ್ರಯತ್ನಿಸಿದೆ.
ಈ ಬಗೆಯ “ಸೆಮಿಕಂಡಕ್ಟರ್ ಸಮರ” ದಲ್ಲಿ ಈ ಕೆಳಗಿನ ಬಹು ಮುಖ್ಯ ಅಂಶಗಳನ್ನು ಪರಿಗಣಿಸಬೇಕು.
ಮೈಕ್ರೋ ಚಿಪ್ ಗಳ ಮಹತ್ವವೇನು?
ಮೈಕ್ರೋ ಚಿಪ್ ಗಳು ಪ್ರಸ್ತುತ ಜಾಗತಿಕ ಆರ್ಥಿಕತೆಯ ಜೀವಾಳವಾಗಿವೆ: ಎಲ್ಇಡಿ ದೀಪದ ಬಲ್ಬುಗಳಿಂದ ಹಿಡಿದು ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷೀನ್), ಆಟೋಮೊಬೈಲ್ ಗಳು ಹಾಗೂ ಸೆಲ್ ಫೋನ್ ಗಳು ಎಲ್ಲಾ ಸಾಧನಗಳಲ್ಲೂ ಈ ಸಣ್ಣ ಸಿಲಿಕಾನ್ ಬಿಲ್ಲೆಗಳನ್ನು (ಸ್ಲೈಸಸ್) ಕಾಣಬಹುದು.
ಇದನ್ನೂ ಓದಿ- ಬಳಕೆಯಾಗದ ಬಿಲಿಯನ್‌ಗಟ್ಟಲೆ ಭಾರತೀಯ ರುಪಾಯಿ ಇಟ್ಟುಕೊಂಡಿದ್ದೇನೆಂದ ರಷ್ಯಾ
ಆರೋಗ್ಯ ರಕ್ಷಣೆ, ಕಾನೂನು ಪಾಲನೆ ಮತ್ತು ಜನಬಳಕೆಯಂತಹ ಪ್ರಮುಖ ಸೇವೆಗಳಿಗೆ ಅವು ಅತ್ಯಗತ್ಯ.
ಮೆಕ್ಕೆನ್ಸಿ ಕಳೆದ ವರ್ಷ ಪ್ರಕಟಿಸಿದ ವರದಿಯ ಪ್ರಕಾರ 2030ರ ವೇಳೆಗೆ ಸೆಮಿಕಂಡಕ್ಟರ್ ಮಾರುಕಟ್ಟೆ 1 ಟ್ರಿಲಿಯನ್ ಡಾಲರ್ (ಸುಮಾರು ರೂ.81,78,400 ಕೋಟಿ) ಮೌಲ್ಯವನ್ನು ತಲುಪುವುದು ಎಂದು ಅಂದಾಜಿಸಲಾಗಿದೆ.
ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾದ ಚೀನಾ ತನ್ನ ಅಗಾಧ ಇಲೆಕ್ಟ್ರಾನಿಕ್ ಸಾಧನ ತಯಾರಿಕೆಗಳ ನೆಲೆಗೆ ವಿದೇಶಿ ಮೈಕ್ರೋ ಚಿಪ್ ಗಳ ನಿರಂತರ ಸರಬರಾಜನ್ನು ಅವಲಂಬಿಸಿದೆ. ಚೀನಾದಲ್ಲಲ್ಲದೆ ಇನ್ನೆಲ್ಲೂ ಇದು ಇಷ್ಟೊಂದು ಎದ್ದು ಕಾಣುತ್ತಿಲ್ಲ.
2021ರಲ್ಲಿ ಚೀನಾವು, ತೈಲಕ್ಕಿಂತ ಹೆಚ್ಚು ಸೆಮಿಕಂಡಕ್ಟರ್ ಗಳನ್ನು $430 ಬಿಲಿಯನ್ (ಸುಮಾರು ರೂ.35,16,200 ಕೋಟಿ) ವ್ಯಯಿಸಿ ಆಮದು ಮಾಡಿಕೊಂಡಿದೆ.
ಚೀನಾದ ಮೇಲೆ ಏಕೆ ಹೆಚ್ಚಿನ ಗಮನ?
ಐ ಫೋನ್ ಗಳು, ಟೆಸ್ಲಾ ಗಳು, ಪ್ಲೇ ಸ್ಟೇಷನ್ ಗಳಲ್ಲದೆ ಕೃತಕ ಜಾಣ್ಮೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಜೊತೆಗೆ ಹೈಪರ್ ಸೋನಿಕ್ ಕ್ಷಿಪಣಿಗಳು ಮತ್ತು ಸ್ಟೆಲ್ತ್ ಫೈಟರ್ ಫೈಟರ್ಸ್ ನಂತಹ ಮೇರು ತಂತ್ರಜ್ಞಾನದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಂತಹ ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಅತ್ಯಂತ ಶಕ್ತಿಶಾಲಿ ಚಿಪ್ ಗಳು ಅತ್ಯಗತ್ಯ
ಕಳೆದ ವರ್ಷ ಅಮೆರಿಕಾ ಸಂಯುಕ್ತ ಸಂಸ್ಥಾನವು, ಅವು “ಮಿಲಿಟರಿ ಉಪಯುಕ್ತತೆಯೊಂದಿಗೆಗಿನ ಸೂಕ್ಷ್ಮ ಸಂವೇದನೆಯ ತಂತ್ರಜ್ಞಾನ” ಗಳನ್ನು ತಡೆಯುವ ಉದ್ದೇಶಕ್ಕಾಗಿ ಇವೆ ಎಂದು ಪ್ರತಿಪಾದಿಸಿ ಚೀನಾದ ಸಶಸ್ತ್ರ ಪಡೆ, ಗುಪ್ತಚರ ಹಾಗೂ ಭದ್ರತಾ ಸೇವೆಗಳು. ಅವನ್ನು ಪಡೆಯಲಾಗದಂತೆ ರಫ್ತು ನಿರ್ಬಂಧಗಳ ಸರಣಿಯನ್ನೇ ವಿಧಿಸಿತು.
ಅದರಂತೆಯೇ ಈ ವರ್ಷದ ಮಾರ್ಚ್ ನಲ್ಲಿ ಡಚ್ ಸರ್ಕಾರವು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮಿಲಿಟರಿ ಬಳಕೆಯನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಮಾರಾಟದ ಮೇಲೆ ನಿರ್ಬಂಧಗಳನ್ನು ಹಾಕಿತು.
“ತಂತ್ರಜ್ಞಾನಗಳ ಮಿಲಿಟರಿ ತಿರುವ”ನ್ನು ತಡೆಯಲು ಜಪಾನ್ ಸಹ ಅದೇ ತಿಂಗಳು ಇದೇ ರೀತಿಯ ನಿಬಂಧನೆಗಳನ್ನು ಘೋಷಿಸಿತು. ನೇಟೋ ಸದಸ್ಯ ರಾಷ್ಟ್ರ ದ ನೆದರ್ಲ್ಯಾಂಡ್ಸ್ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ಒಪ್ಪಂದಿತ ಮಿತ್ರ ಜಪಾನ್ ದೇಶಗಳು ಚೀನಾವನ್ನು ಹೆಸರಿಸದಿದ್ದರೂ ಅವರ ನಿರ್ಬಂಧಗಳು ಬೀಜಿಂಗ್ ಅನ್ನು ಕೆರಳಿಸಿತು.
ಇದನ್ನೂ ಓದಿ- ಮಣಿಪುರ ರಾಜ್ಯದ ಸಂಕೀರ್ಣ ಬುಡಕಟ್ಟು ರಾಜಕೀಯದೆಡೆಗೊಂದು ನೋಟ
ಸೂಪರ್ ಕಂಪ್ಯೂಟರ್ ಗಳು, ಉನ್ನತ ಮಟ್ಟದ ಮಿಲಿಟರಿ ಉಪಕರಣಗಳು ಹಾಗೂ ಕೃತಕ ಜಾಣ್ಮೆಯ ಅಭಿವೃದ್ಧಿ ಇತ್ಯಾದಿಗಳಲ್ಲಿ ಬಳಸಬಹುದಾದ ಅತ್ಯಂತ ಆಧುನಿಕ ಸೆಮಿಕಂಡಕ್ಟರ್ ಗಳು ಹಾಗೂ ಚಿಪ್ ತಯಾರಿಸುವ ತಂತ್ರಜ್ಞಾನ ಇವುಗಳ ಮೇಲೆ ಈ ನಿರ್ಬಂಧಗಳು ಅನ್ವಯವಾಗುತ್ತವೆ.
ಚೀನಾಗೆ ಯಾಕೆ ಚಿಂತೆ?
ಮೈಕ್ರೋ ಚಿಪ್ ಗಳ ತಯಾರಿಕಾ ವಿಧಾನವು ಅತಿ ಜಟಿಲವಾಗಿದ್ದು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಅದು ನಡೆಯುತ್ತದೆ. ಆದರೆ ಅದರ ಅನೇಕ ಹಂತಗಳು ಅಮೇರಿಕಾ ದ ಮೂಲಾಂಶ (ಇನ್ ಪುಟ್) ಗಳನ್ನು ಅವಲಂಬಿಸಿವೆ. ಜಪಾನಿ ಕಂಪನಿಗಳು ಹಾಗೂ ಸಿಲಿಕಾನ್ ವೇಫರ್ ಗಳ ಮೇಲಿನ ಮುದ್ರಿಸುವ ಮುದ್ರಣ ಮಾದರಿ ಗಳನ್ನು ಮುದ್ರಿಸುವ ಹೆಚ್ಚಿನ ಲಿಥೋಗ್ರಫಿ ಯಂತ್ರಗಳನ್ನು ತಯಾರಿಸುವ ನೆದರ್ಲ್ಯಾಂಡ್ ಮೂಲದ ASML ಕಂಪನಿ ಈ ಕ್ಷೇತ್ರದ ಇತರೆ ಪಾಲುದಾರರಾಗಿವೆ. ಇದು ಈ ಮೂರು ದೇಶಗಳು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದ ಮೇಲೆ ಭಾರೀ ಪ್ರಭಾವವನ್ನು ಉಂಟು ಮಾಡಲು ಅನುವು ಮಾಡಿಕೊಡುತ್ತದೆ.
ಚಿಪ್ ವಾರ್:
ದ ಫೈಟ್ ಫಾರ್ ವರ್ಲ್ಡ್ಸ್ ಮೋಸ್ಟ್ ಕ್ರಿಟಿಕಲ್ ಟೆಕ್ನಾಲಜಿ' ಪುಸ್ತಕದ ಲೇಖಕರಾದ ಕ್ರಿಸ್ ಮಿಲ್ಲರ್ ಅವರು ಕೆಲವು ಮೂಲಗಳಿಗೆ ತಿಳಿಸಿದ ಪ್ರಕಾರ ತನಗೆ ಲಭ್ಯವಾಗದೆ ಹೋಗುತ್ತಿರುವ ಅಂತಹ ಉಪಕರಣಗಳನ್ನು ತಯಾರಿಸಲು ಚೀನಾಗೆ ಹಲವಾರು ವರ್ಷಗಳೇ ಹಿಡಿಯುವುದು. “ಅವುಗಳನ್ನು ತಯಾರಿಸುವುದು ಅಷ್ಟು ಸರಳವಾಗಿದ್ದರೆ ಚೀನಾದ ಕಂಪನಿಗಳು ಇಷ್ಟು ಹೊತ್ತಿಗೆ ಅವನ್ನು ತಯಾರಿಸಿರುತ್ತಿದ್ದವು.”
ಈ ನಿರ್ಬಂಧಗಳು ಜನರ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರಿವೆ?
ಈ ಹಾನಿಯ ಪರಿಣಾಮವನ್ನು ಕಡಿಮೆ ಮಾಡಲು ಚೀನಾದ ಸೆಮಿಕಂಡಕ್ಟರ್ ತಯಾರಕರು ಅಮೆರಿಕಾದ ರಫ್ತು ನಿಷೇಧಗಳಿಗೆ ಮುಂಚಿತವಾಗಿಯೇ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಸಾಕಷ್ಟು ಅಗತ್ಯವಾದ ಘಟಕಗಳು ಹಾಗೂ ಯಂತ್ರೋಪಕರಣಗಳನ್ನು ಸಂಗ್ರಹಿಟ್ಟುಕೊಂಡರು. ಆದಾಗ್ಯೂ ಒಮ್ಮೆ ದಾಸ್ತಾನು ಮುಗಿದು ಹೋದಲ್ಲಿ ಅಥವಾ ದುರಸ್ತಿಗೆ ಬಂದಲ್ಲಿ ಈ ನಿರ್ಬಂಧಗಳು ಪ್ರತಿಕೂಲ ಪರಿಣಾಮ ಬೀರಲು ಪ್ರಾರಂಭಿಸುತ್ತವೆ ಎಂದು ಒಂದು ದೊಡ್ಡ ಸೆಮಿಕಂಡಕ್ಟರ್ ಕಂಪನಿಯು ಕೆಲವು ಮೂಲಗಳಿಗೆ ತಿಳಿಸಿದೆ.
ಇದನ್ನೂ ಓದಿ- ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆನಿಸಿದ ಭಾರತ: ಇದನ್ನು ಸಂಭ್ರಮಿಸಬೇಕೋ ಅಥವಾ ಚಿಂತಿಸಬೇಕೋ?
ಒಮ್ಮಿಂದೊಮ್ಮೆಲೇ ಚಿಪ್ ನ ಲಭ್ಯತೆಯನ್ನು ಖಚಿತಪಡಿಸಲು ಸಾಧ್ಯವಾಗದ ಚೀನಿ ಸಂಸ್ಥೆಗಳು ಹಲವು ಲಾಭದಾಯಕ ಸಾಗರೋತರ ಒಪ್ಪಂದಗಳು ಮುರಿದು ಬೀಳುವುದನ್ನು ಎದುರಿಸಬೇಕಾಯಿತು ಇದರಿಂದ ಅವರು ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವುದರ ಜೊತೆಗೆ ಸಂಸ್ಥೆಯ ವಿಸ್ತರಣಾ ಯೋಜನೆಗಳನ್ನು ನಿಲ್ಲಿಸಬೇಕಾಯಿತು.
ಅಮೆರಿಕ ಸಂಯುಕ್ತ ಸಂಸ್ಥಾನ, ದ ನೆದರ್ಲ್ಯಾಂಡ್ಸ್ ಹಾಗೂ ಜಪಾನ್ ಗಳು ಹೇರಿದ ನಿರ್ಬಂಧಗಳು ಚೀನಾದ ಅತಿ ದೊಡ್ಡ ಸೆಮಿಕಂಡಕ್ಟರ್ ಕಂಪನಿಯಾದ ಯಾಂಗ್ಟ್ಜೆ ಮೆಮೊರಿ ಟೆಕ್ನಾಲಜಿ (YMTC) ಸೇರಿದಂತೆ ಹಲವು ಅತಿ ದೊಡ್ಡ ಚಿಪ್ ತಯಾರಿಕೆದಾರರಿಗೆ ನೇರವಾದ ಪರಿಣಾಮ ಬೀರಿವೆ.
ಚೀನಾ ನಂಬಿಕೊಂಡಿದ್ದ ಪ್ರತಿಭಾ ಭಂಡಾರ ಬರಿದಾಗುತ್ತಿರುವುದು ಈ ನಿರ್ಬಂಧಗಳ ಒಂದು ಮಹತ್ತರ ಪ್ರತಿಕೂಲ ಪರಿಣಾಮ.
ಚೀನಾದ ಚಿಪ್ ಉದ್ಯಮವನ್ನು ಕುರಿತಾದ ಇತ್ತೀಚಿನ ಒಂದು ಅರೆ ಅಧಿಕೃತ ವಿಮರ್ಶೆಯ ಅನುಸಾರ 2024ರ ವೇಳೆಗೆ 8 ಮಿಲಿಯನ್ ವಿದೇಶಿ ಉದ್ಯೋಗಿಗಳಿಗೆ ಬೇಡಿಕೆ ಇರುತ್ತದೆ. ಆದರೆ ಅಮೇರಿಕಾದ ವ್ಯಕ್ತಿಗಳು ಚೀನಾದ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕೆಲಸ ಮಾಡದಿರುವಂತೆ ಇರುವ ವಾಷಿಂಗ್ಟನ್ ನ ನಿಯಮದಿಂದ ಈ ಅಂತರವನ್ನು ಕಡಿಮೆ ಮಾಡುವುದು ಬಹಳಷ್ಟು ಕಷ್ಟವಾಗುತ್ತದೆ.
ಇದಕ್ಕೆ ಚೀನಾ ಹೇಗೆ ಪ್ರತಿಕ್ರಿಯಿಸಿದೆ?
ಸೆಮಿಕಂಡಕ್ಟರ್ ನಲ್ಲಿ ಸ್ವಾವಲಂಬಿಯಾಗಲು ಬೀಜಿಂಗ್ ತನ್ನ ಎಲ್ಲಾ ಪ್ರಯತ್ನಗಳನ್ನು ಇನ್ನೂ ಹೆಚ್ಚು ಶೀಘ್ರಗೊಳಿಸುವ ಪ್ರತಿಜ್ಞೆಯೊಂದಿಗೆ ಕೋಪ ಹಾಗೂ ಪ್ರತಿಭಟನೆಯಿಂದ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಈ ಅಮೆರಿಕಾದ ನಿರ್ಬಂಧಗಳನ್ನು ತಪ್ಪಿಸಲು “ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್” ನ ಇಬ್ಬರು ಸೆಮಿಕಂಡಕ್ಟರ್ ತಜ್ಞರು, ಪ್ರತಿಭಾವಂತ ವ್ಯಕ್ತಿಗಳು ಹಾಗೂ ನವೀನ ರೀತಿಯ ಸಂಶೋಧನೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಹಣ ಹೂಡುವಂತೆ ಬೀಜಿಂಗ್ ಗೆ ಸಲಹೆ ನೀಡಿ ಅದರ ಒಂದು ನೀಲಿ ನಕ್ಷೆ (ಬ್ಲೂಪ್ರಿಂಟ್)ಯನ್ನು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದರು.
ಇದು ಒಂದು ನಿರೀಕ್ಷಿತ ಕಾರ್ಯತಂತ್ರದ ಬದಲಾವಣೆಯ ಸುಳಿವು ನೀಡಿತು. ಜೊತೆಗೆ YMTC ಇದರ ಒಂದು ಪ್ರಮುಖ ಆಪದ್ಬಾಂಧವನಂತೆ ಕಂಡು ಬರುತ್ತಿದೆ. ಕಂಪನಿಯ ದಾಖಲೆಗಳ ಪ್ರಕಾರ ಹೊಸ ರಫ್ತು ಪ್ರತಿಬಂಧಗಳು ಜಾರಿಗೆ ಬಂದಾಗಿನಿಂದ ಈ ಅಮೆರಿಕಾ ನಿರ್ಬಂಧಿತ ಸಂಸ್ಥೆಯು $7.1 ಬಿಲಿಯನ್ (ಸುಮಾರು ರೂ. 58,100 ಕೋಟಿ) ಹಣ ಹೂಡಿಕೆಯನ್ನು ಸ್ವೀಕರಿಸಿದೆ.
ಇದನ್ನೂ ಓದಿ- ಇಂಜಿನ್ ಸಮಸ್ಯೆಗಳ ಕಾರಣದಿಂದ ದಿವಾಳಿಯಾಗುವ ಹಾದಿಯಲ್ಲಿ ಉದ್ಯಮಿ ವಾಡಿಯಾ ಮಾಲಕತ್ವದ ವಿಮಾನಯಾನ ಸಂಸ್ಥೆ
ಹೆಚ್ಚಿದ ಹಣ ಹೂಡಿಕೆ ಚೀನಾಗೆ ಸಂಕಷ್ಟದಿಂದ ಪರಿಹಾರವೇ?
ದೇಶಿಯ ಕೈಗಾರಿಕಾ ಅಭಿವೃದ್ಧಿಯಲ್ಲಿ ಚೀನಾದ ಹತ್ತಾರು ಶತ ಕೋಟಿ ಬಿಲಿಯನ್ ಡಾಲರ್ ಗಳ ಹಣ ಹೂಡಿಕೆ ಇನ್ನೂ ಫಲ ನೀಡಬೇಕಿದೆ.
2025ರ ವೇಳೆಗೆ ಶೇಕಡಾ 70 ರಷ್ಟು ಸೆಮಿಕಂಡಕ್ಟರ್ ಸ್ವಾವಲಂಬನೆಯನ್ನು ಸಾದಿಸಲು ಚೀನಾ ಆಶಿಸಿತ್ತು. ಆದರೆ ಕೆಲವು ಚಿಂತನಶೀಲ ಪರಿಣತರ ಅಭಿಪ್ರಾಯದಲ್ಲಿ ಪ್ರಸ್ತುತವಾಗಿ ಚೀನಾ ತನ್ನ ಬೇಡಿಕೆಯ ಕೇವಲ ಶೇಕಡಾ 20 ರಷ್ಟು ಬೇಡಿಕೆಯನ್ನು ಮಾತ್ರ ಪೂರೈಸಿದೆ.
"ಹಣ ಏನು ಸಮಸ್ಯೆಯಲ್ಲ" ಎಂದು ಹೇಳಿದ ಹಾಂಗ್ ಕಾಂಗ್ ಮೆಗಾ ಟ್ರಸ್ಟ್ ಇನ್ವೆಸ್ಟ್ಮೆಂಟ್ ನ ಸಹ-ಸಂಸ್ಥಾಪಕರಾದ ಕಿ ವಾಂಗ್ ಅವರು, ಬದಲಾಗಿ ದುಂದು ವೆಚ್ಚ, ವಂಚನೆ ಹಾಗೂ ಸಾಮರ್ಥ್ಯದ ಕೊರತೆಗಳ ಸಮಸ್ಯೆಯನ್ನು ಸೂಚಿಸಿದರು.
"ಉದ್ಯಮವನ್ನು ಇನ್ನೂ ಹೆಚ್ಚಾಗಿ ಬೆಂಬಲಿಸುವುದರ ಹೊರತಾಗಿ ಚೀನಾಗೆ ಇನ್ಯಾವುದೇ ಉತ್ತಮ ಆಯ್ಕೆ ಇಲ್ಲ" ಎಂದು ಈಸ್ಟ್ ವೆಸ್ಟ್ ಫ್ಯೂಚರ್ಸ್ ಕನ್ಸಲ್ಟಿಂಗ್ ನ ನಿರ್ದೇಶಕರಾದ ಜಾನ್ ಲೀ ಅವರು ಹೇಳಿದರು.
ಈ ನಿರ್ಬಂಧಗಳು ಹೀಗೇ ಜಾರಿಯಲ್ಲಿದ್ದಲ್ಲಿ ಚೀನಾ ತನ್ನ ಸ್ವಾವಲಂಬಿಯಾಗುವ ಗುರಿಯನ್ನು ತಲುಪಬಹುದಾದರೂ ಅದು ಬಹಳಷ್ಟು ಸಮಯ ತೆಗೆದುಕೊಳ್ಳುವುದು ಎಂದು ತಜ್ಞರು ಹೇಳುತ್ತಾರೆ.
ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕರಾದ ಬಿಲ್ ಗೇಟ್ಸ್ ಅವರು ಮಾರ್ಚ್ ತಿಂಗಳ ಒಂದು ಪ್ರದರ್ಶನದಲ್ಲಿ ಚೀನಾವು ಉತ್ತಮ ಚಿಪ್ ಗಳನ್ನು ತಯಾರಿಸುವುದನ್ನು ಅಮೆರಿಕಾ ಎಂದಿಗೂ ತಡೆಯಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮದೇ ಆದ ಚಿಪ್ ಗಳನ್ನು ತಯಾರಿಸಲು ಸಾಕಷ್ಟು ಸಮಯ ಹಾಗೂ ಹಣವನ್ನು ಖರ್ಚು ಮಾಡುವಂತೆ ಮಾಡುತ್ತೇವೆ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.