ಸಮೂಹ ನಾಶಕ ಶಸ್ತ್ರಾಸ್ತ್ರಗಳೆಂದರೇನು?

Weapons of Mass Destruction: ಸಮೂಹ ನಾಶಕ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಹೊಂದುವುದು ಹಾಗೂ ಬಳಸುವುದನ್ನು ಅಂತಾರಾಷ್ಟ್ರೀಯ ಕಾನೂನುಗಳು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತವೆ. ಹಲವಾರು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳು ಸಮೂಹ ನಾಶಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ನಿರ್ಬಂಧಿಸುತ್ತವೆ. 

Written by - Girish Linganna | Edited by - Yashaswini V | Last Updated : Apr 27, 2023, 01:21 PM IST
  • 1968ರಲ್ಲಿ ಜಾರಿಗೆ ಬಂದ ಈ ಕಾನೂನು ಅಂತಾರಾಷ್ಟ್ರೀಯ ಕಾನೂನುಬದ್ಧ ಪರಮಾಣು ಶಸ್ತ್ರಾಸ್ತ್ರ ತಡೆಗೆ ಮೂಲಾಧಾರವಾಗಿದೆ.
  • ಈ ಒಪ್ಪಂದದ ಉದ್ದೇಶ ಇನ್ನೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರದ ರಾಷ್ಟ್ರಗಳಿಗೆ ಪರಮಾಣು ಶಸ್ತ್ರಾಸ್ತ್ರಗಳು ಪ್ರಸರಣವಾಗದಂತೆ ತಡೆಯುವುದಾಗಿದೆ.
  • ಅದರೊಡನೆ, ಈಗಾಗಲೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು ಅವುಗಳ ಆಯುಧಗಳನ್ನು ತ್ಯಜಿಸುವಂತೆ ಮಾಡಲು ಉತ್ತೇಜಿಸುವುದಾಗಿದೆ.
ಸಮೂಹ ನಾಶಕ ಶಸ್ತ್ರಾಸ್ತ್ರಗಳೆಂದರೇನು? title=
Weapons of Mass Destruction

Weapons of Mass Destruction: ಸಮೂಹ ನಾಶಕ ಶಸ್ತ್ರಾಸ್ತ್ರ (ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್ - ಡಬ್ಲ್ಯುಎಂಡಿ) ಎಂದರೆ ವ್ಯಾಪಕವಾದ ವಿನಾಶ ಮತ್ತು ಪ್ರಾಣಹಾನಿ ಉಂಟುಮಾಡಬಲ್ಲ ಆಯುಧಗಳಾಗಿವೆ. ಅದರಲ್ಲೂ ಪರಮಾಣು ಶಸ್ತ್ರಾಸ್ತ್ರಗಳು, ಜೈವಿಕ ಅಥವಾ ರಾಸಾಯನಿಕ ವಿಧಾನದ ಆಯುಧಗಳು ಹೆಚ್ಚು ಪರಿಣಾಮಕಾರಿಯಾಗಿವೆ.

ನ್ಯೂಕ್ಲಿಯರ್ ಆಯುಧ ಎನ್ನುವ ಆಯುಧ ಪರಮಾಣು ಪ್ರತಿಕ್ರಿಯೆಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಆ ಸಂದರ್ಭದಲ್ಲಿ ನಡೆಯುವ ಸ್ಫೋಟದಿಂದ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಇದು ಅತ್ಯಂತ ಪ್ರಬಲವಾಗಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿ ಹಾಗೂ ಪ್ರಾಣ ಹಾನಿ ಉಂಟುಮಾಡುತ್ತವೆ.

ಜೈವಿಕ ಆಯುಧಗಳೆಂದರೆ ಅವುಗಳಲ್ಲಿ ಜೀವಂತ ಜೀವಿಗಳು ಅಥವಾ ಅವುಗಳ ಟಾಕ್ಸಿನ್‌ಗಳನ್ನು ಬಳಸಿ, ಮಾನವರಲ್ಲಿ, ಪ್ರಾಣಿಗಳಲ್ಲಿ ಅಥವಾ ಸಸ್ಯಗಳಲ್ಲಿ ಅಪಾರ ಪ್ರಮಾಣದಲ್ಲಿ ಕಾಯಿಲೆ, ಸಾವು ಉಂಟುಮಾಡುತ್ತವೆ. ಈ ಜೈವಿಕ ಆಯುಧಗಳು ಅತ್ಯಂತ ಸಾಂಕ್ರಾಮಿಕವಾಗಿದ್ದು, ಅವುಗಳನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ.

ರಾಸಾಯನಿಕ ಆಯುಧಗಳೆಂದರೆ ಗಾಯ ಅಥವಾ ಸಾವು ಉಂಟಾಗುವಂತೆ ಮಾಡುವ ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತವೆ. ಅವುಗಳನ್ನು ಅನಿಲ, ದ್ರವ ಅಥವಾ ಘನ ರೂಪದಲ್ಲೂ ಹಬ್ಬಿಸಬಹುದು.

ಇದನ್ನೂ ಓದಿ- ಆಗಸವನ್ನು ಗೆಲ್ಲಲು ಚೀನಾದ ಬಾಹ್ಯಾಕಾಶ ಯುದ್ಧತಂತ್ರ

ಸಮೂಹ ನಾಶಕ ಶಸ್ತ್ರಾಸ್ತ್ರಗಳನ್ನು ಬಳಸುವುದು, ಹೊಂದುವುದು, ಹಾಗೂ ಸಾಗಾಟ ಮಾಡುವುದನ್ನು ಅಂತಾರಾಷ್ಟ್ರೀಯ ಕಾನೂನುಗಳು ಅತ್ಯಂತ ಕಟ್ಟುನಿಟ್ಟಾಗಿ ನಿಯಂತ್ರಿಸುತ್ತವೆ. ಹಲವಾರು ರಾಷ್ಟ್ರಗಳು ಈಗಾಗಲೇ ಸಮೂಹ ನಾಶಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುವುದು, ಉತ್ಪಾದಿಸುವುದು ಮತ್ತು ಬಳಸುವುದನ್ನು ನಿಷೇಧಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ, ವಿವಿಧ ರಾಷ್ಟ್ರಗಳು ಮತ್ತು ಸಂಸ್ಥೆಗಳು ಸಮೂಹ ನಾಶಕ ಶಸ್ತ್ರಾಸ್ತ್ರಗಳನ್ನು ಬಳಸುವ ಸಂಭಾವ್ಯತೆಯ ಕುರಿತು ಕಳವಳಗಳು ಇದ್ದೇ ಇರುತ್ತವೆ.

ಸಮೂಹ ನಾಶಕ ಶಸ್ತ್ರಾಸ್ತ್ರಗಳಲ್ಲಿ ಇರುವ ವಿಧಗಳನ್ನು ಗಮನಿಸುವುದಾದರೆ, 
ಪರಮಾಣು ಶಸ್ತ್ರಾಸ್ತ್ರಗಳು: 

ಈ ಆಯುಧಗಳು ಪರಮಾಣು ಪ್ರತಿಕ್ರಿಯೆಯನ್ನು ಬಳಸಿಕೊಂಡು, ಸ್ಫೋಟದ ರೂಪದಲ್ಲಿ ಅಪಾರ ಪ್ರಮಾಣದಲ್ಲಿ ಶಕ್ತಿಯನ್ನು ಬಿಡುಗಡೆಗೊಳಿಸುತ್ತವೆ. ಇವುಗಳು ಅಪಾರ ಪ್ರಮಾಣದಲ್ಲಿ ಹಾನಿ ಮತ್ತು ಸಾವುನೋವುಗಳನ್ನು ಉಂಟುಮಾಡುತ್ತವೆ.

ರಾಸಾಯನಿಕ ಆಯುಧಗಳು: 
ಈ ಆಯುಧಗಳು ರಾಸಾಯನಿಕಗಳನ್ನು ಬಳಸಿಕೊಂಡು, ಸಾವು ನೋವುಗಳನ್ನು ಉಂಟುಮಾಡುತ್ತವೆ. ಮಸ್ಟರ್ಡ್ ಗ್ಯಾಸ್, ಸರಿನ್ ಹಾಗೂ ವಿಎಕ್ಸ್‌ಗಳು ರಾಸಾಯನಿಕ ಆಯುಧಗಳಿಗೆ ಉದಾಹರಣೆಗಳಾಗಿವೆ.

ಜೈವಿಕ ಅಸ್ತ್ರಗಳು: 
ಈ ಆಯುಧಗಳು ರೇಡಿಯೋ ಆ್ಯಕ್ಟಿವ್ ಉತ್ಪನ್ನಗಳನ್ನು ಬಳಸಿಕೊಂಡು, ಸಾವು ನೋವು ಉಂಟುಮಾಡುತ್ತವೆ. ಆ್ಯಂತ್ರಾಕ್ಸ್, ಪ್ಲೇಗ್ ಹಾಗೂ ಸ್ಮಾಲ್ ಪಾಕ್ಸ್‌ಗಳು ಇವುಗಳಿಗೆ ಉದಾಹರಣೆಗಳಾಗಿವೆ.

ಇದನ್ನೂ ಓದಿ- ಸುಡಾನ್ ಬಿಕ್ಕಟ್ಟು: ಇತ್ತೀಚಿನ ಕದನಕ್ಕೆ ಕಾರಣವೇನು? ಗಲಭೆಪೀಡಿತ ರಾಷ್ಟ್ರದ ಹಿಂಸಾತ್ಮಕ ಇತಿಹಾಸ

ರೇಡಿಯಾಲಾಜಿಕಲ್ ಆಯುಧಗಳು: 
ಈ ಆಯುಧಗಳು ರೇಡಿಯೋ ಆ್ಯಕ್ಟಿವ್ ಉಪಕರಣಗಳನ್ನು ಬಳಸಿ, ಸಾವು ನೋವು ಉಂಟುಮಾಡುತ್ತವೆ. 'ಡರ್ಟಿ ಬಾಂಬ್' ಎಂಬ ಸಾಂಪ್ರದಾಯಿಕ ಸಿಡಿಯುವ ಉಪಕರಣವನ್ನು ಬಳಸಿ, ರೇಡಿಯೋ ಆ್ಯಕ್ಟಿವ್ ಉತ್ಪನ್ನಗಳನ್ನು ಹೆಚ್ಚಿನ ಪ್ರದೇಶಕ್ಕೆ ಹರಡುವಂತೆ ಮಾಡಲಾಗುತ್ತದೆ.

ಸೈಬರ್ ಆಯುಧಗಳು: 
ಸೈಬರ್ ಆಯುಧಗಳೆಂದರೆ ಪ್ರಮುಖ ಸೈಬರ್ ಮೂಲಭೂತ ಸೌಕರ್ಯಗಳನ್ನು ನಾಶಪಡಿಸುವ ಉಪಕರಣಗಳು ಅಥವಾ ಸಾಫ್ಟ್‌ವೇರ್ ಗಳಾಗಿವೆ. ಅವುಗಳು ಕಂಪ್ಯೂಟರ್ ವ್ಯವಸ್ಥೆಗಳು ಹಾಗೂ ನೆಟ್‌ವರ್ಕ್ ಗಳನ್ನು ನಾಶಪಡಿಸುತ್ತವೆ ಅಥವಾ ಸೂಕ್ಷ್ಮ ಮಾಹಿತಿಗಳನ್ನು ಕಲೆಹಾಕುತ್ತವೆ.

ಸಮೂಹ ನಾಶಕ ಶಸ್ತ್ರಾಸ್ತ್ರಗಳ ಕುರಿತ ಅಂತಾರಾಷ್ಟ್ರೀಯ ಕಾನೂನುಗಳು:
ಸಮೂಹ ನಾಶಕ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಹೊಂದುವುದು ಹಾಗೂ ಬಳಸುವುದನ್ನು ಅಂತಾರಾಷ್ಟ್ರೀಯ ಕಾನೂನುಗಳು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತವೆ. ಹಲವಾರು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳು ಸಮೂಹ ನಾಶಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ನಿರ್ಬಂಧಿಸುತ್ತವೆ. ಅವುಗಳಿಗೆ ಒಂದಷ್ಟು ಉದಾಹರಣೆಗಳೆಂದರೆ... 

ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ (ಎನ್‌ಪಿಟಿ): 
1968ರಲ್ಲಿ ಜಾರಿಗೆ ಬಂದ ಈ ಕಾನೂನು ಅಂತಾರಾಷ್ಟ್ರೀಯ ಕಾನೂನುಬದ್ಧ ಪರಮಾಣು ಶಸ್ತ್ರಾಸ್ತ್ರ ತಡೆಗೆ ಮೂಲಾಧಾರವಾಗಿದೆ. ಈ ಒಪ್ಪಂದದ ಉದ್ದೇಶ ಇನ್ನೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರದ ರಾಷ್ಟ್ರಗಳಿಗೆ ಪರಮಾಣು ಶಸ್ತ್ರಾಸ್ತ್ರಗಳು ಪ್ರಸರಣವಾಗದಂತೆ ತಡೆಯುವುದಾಗಿದೆ. ಅದರೊಡನೆ, ಈಗಾಗಲೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು ಅವುಗಳ ಆಯುಧಗಳನ್ನು ತ್ಯಜಿಸುವಂತೆ ಮಾಡಲು ಉತ್ತೇಜಿಸುವುದಾಗಿದೆ.

ಕೆಮಿಕಲ್ ವೆಪನ್ಸ್ ಕನ್ವೆನ್ಷನ್ (ಸಿಡಬ್ಲ್ಯುಸಿ): 
1993ರಲ್ಲಿ ಜಾರಿಗೆ ಬಂದ ಈ ಒಪ್ಪಂದ ರಾಸಾಯನಿಕ ಆಯುಧಗಳ ಅಭಿವೃದ್ಧಿ, ಉತ್ಪಾದನೆ, ಸಂಗ್ರಹಣೆ ಹಾಗೂ ಬಳಕೆಯನ್ನು ನಿಷೇಧಿಸುತ್ತದೆ.

ಕಾಂಪ್ರಹೆನ್ಸಿವ್ ನ್ಯೂಕ್ಲಿಯರ್ ಟೆಸ್ಟ್ ಬ್ಯಾನ್ ಟ್ರೀಟಿ (ಸಿಟಿಬಿಟಿ): 
1996ರಲ್ಲಿ ಜಾರಿಗೆ ಬಂದ ನ್ಯೂಕ್ಲಿಯರ್ ಟೆಸ್ಟ್ ಬ್ಯಾನ್ ಟ್ರೀಟಿ ಎಲ್ಲಾ ರೀತಿಯ ನಾಗರಿಕ ಹಾಗೂ ಮಿಲಿಟರಿ ಬಳಕೆಯ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ನಿಷೇಧಿಸುತ್ತದೆ.

ಇದನ್ನೂ ಓದಿ- ಗುರು ಗ್ರಹ, ಮತ್ತದರ ಹಿಮಾಚ್ಛಾದಿತ ಚಂದ್ರರ ಅಧ್ಯಯನ ನಡೆಸಲಿದೆ ಜ್ಯೂಸ್ ಮಿಷನ್

ಟ್ಯಾಲಿನ್ ಮ್ಯಾನುವಲ್ ಆಫ್ ಇಂಟರ್‌ನ್ಯಾಷನಲ್ ಲಾ ಅಪ್ಲಿಕೇಬಲ್ ಟು ಸೈಬರ್ ಆಪರೇಶನ್ಸ್ 2.0 ಅಥವಾ ಸೈಬರ್ ವಾರ್‌ಫೇರ್ ಟ್ರೀಟಿ ಎಂಬ ಕಾನೂನು ಸೈಬರ್ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತದೆ.

ಇನ್ನು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಪ್ರಕಾರ, ಸಮೂಹ ನಾಶಕ ಶಸ್ತ್ರಾಸ್ತ್ರಗಳ ಬಳಕೆಯನ್ನು ಯುದ್ಧಾಪರಾಧ ಎಂದು ಪರಿಗಣಿಸಲಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಹಾಗೂ ಇತರ ಅಂತಾರಾಷ್ಟ್ರೀಯ ನ್ಯಾಯಾಲಯಗಳಿಗೆ ಸಮೂಹ ನಾಶಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುವ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳನ್ನು ಮೀರುವವರಿಗೆ ಶಿಕ್ಷಿಸುವ ಅಧಿಕಾರವೂ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News