ಫ್ಲೋರಿಡಾ: ಸ್ಪೇಸ್‌ಎಕ್ಸ್‌(SpaceX)ನ ರಾಕೆಟ್‌ ಮೂಲಕ ವಿಶ್ವದ ಮೊದಲ ವ್ಯೋಮ ಪ್ರವಾಸ ಕೈಗೊಂಡಿದ್ದ ನಾಲ್ವರು ಪ್ರವಾಸಿಗರು ಭಾನುವಾರ(4:30 AM IST)ಕ್ಯಾಪ್ಸ್ಯೂಲ್‌ ಮೂಲಕ ಫ್ಲೋರಿಡಾದ ಕರಾವಳಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಈ ನಾಲ್ವರು ಬಾಹ್ಯಾಕಾಶ ಪ್ರವಾಸಿಗರು ಐತಿಹಾಸಿಕ SpaceX Inspiration4 ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.


ಅಮೇರಿಕಾವು ತಾಲಿಬಾನ್ ನ್ನು ಪರಿಗಣಿಸದಿದ್ದರೆ ಪರಿಸ್ಥಿತಿ ಹದಗೆಡುತ್ತದೆ-ಇಮ್ರಾನ್ ಖಾನ್


COMMERCIAL BREAK
SCROLL TO CONTINUE READING

ಸ್ಪೇಸ್‌ಎಕ್ಸ್‌(SpaceX)ನ ರಾಕೆಟ್‌ ಮೂಲಕ ಪ್ರವಾಸ ಕೈಗೊಂಡಿದ್ದ ನಾಲ್ವರು ಪ್ರವಾಸಿಗರು ವಾಪಸ್ ಮರಳುತ್ತಿದ್ದಂತೆ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ‘ಅಭಿನಂದನೆಗಳು @Inspiration4x!!!’ ಎಂದು ಅವರು ಶುಭ ಹಾರೈಕೆ ತಿಳಿಸಿದ್ದಾರೆ. ‘ನಿಮ್ಮ ಈ ಯಶಸ್ವಿ ಪ್ರಯಾಣವು ಇಡೀ ಭೂಮಿಯಲ್ಲಿನ ಸ್ಥಳವು ಎಲ್ಲರಿಗಾಗಿ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ’ ಎಂದು ಸ್ಪೇಸ್‌ಎಕ್ಸ್ ಮಿಷನ್ ಕಂಟ್ರೋಲ್ ಹೇಳಿಕೊಂಡಿದೆ.  


Viral News: ಆನ್‌ಲೈನ್‌ ತರಗತಿ ತಪ್ಪಿಸಿಕೊಳ್ಳಲು ಈ ಹುಡುಗಿ ಎಂತಹ ಕೆಲಸ ಮಾಡಿದ್ದಾಳೆ ನೋಡಿ..!


ಈ ನಾಲ್ವರು ಪ್ರವಾಸಿಗಳು ಕಕ್ಷೆಯಲ್ಲಿನ ತಮ್ಮ 3 ದಿನದ ಪ್ರವಾಸದಲ್ಲಿ ಅನೇಕ ಚಟುವಟಿಕೆಗಳನ್ನು ನಡೆಸಿದ್ದರು. ಅಮೆರಿಕದ ಸೇಂಟ್‌ ಜೂಡ್‌ ಆಸ್ಪತ್ರೆಯ ರೋಗಿಗಳೊಂದಿಗೆ ಮಾತುಕತೆ ನಡೆಸಿದ್ದರು. ತಮ್ಮಲ್ಲಿಯೇ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಕೊಂಡಿದ್ದರು, ನ್ಯೂಯಾರ್ಕ್‌ ಷೇರುಪೇಟೆ ವಹಿವಾಟಿನ ಮುಕ್ತಾಯದ ಘಂಟೆಯನ್ನು ಬಾರಿಸಿದ್ದರು. ಚಿತ್ರ ಬಿಡಿಸುವುದು ಹಾಗೂ ವಾದ್ಯವನ್ನು ಕೂಡ ನುಡಿಸಿ ವಿಶ್ವದ ಗಮನ ಸೆಳೆದಿದ್ದರು. SpaceX ಕಂಪನಿಯು ವರ್ಷಕ್ಕೆ ಖಾಸಗಿಯಾಗಿ 6 ಬಾಹ್ಯಾಕಾಶ ಯಾನ ನಡೆಸಲು ಯೋಜನೆ ರೂಪಿಸಿದೆ. ಆಸಕ್ತರು ಅರ್ಜಿ ಸಲ್ಲಿಸಿ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.