Viral News: ಆನ್‌ಲೈನ್‌ ತರಗತಿ ತಪ್ಪಿಸಿಕೊಳ್ಳಲು ಈ ಹುಡುಗಿ ಎಂತಹ ಕೆಲಸ ಮಾಡಿದ್ದಾಳೆ ನೋಡಿ..!

ಆನ್‌ಲೈನ್ ತರಗತಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಹುಡುಗಿ ಲ್ಯಾಪ್‌ಟಾಪ್ ಮುಂದೆ ತನ್ನದೇ ರೀತಿಯ ಡಮ್ಮಿ ಗೊಂಬೆಯೊಂದನ್ನು ಪ್ರತಿಷ್ಠಾಪಿಸಿ ಸಖತ್ ಆಗಿ ನಿದ್ದೆ ಹೊಡೆದಿದ್ದಾಳೆ.

Written by - Puttaraj K Alur | Last Updated : Sep 18, 2021, 11:12 AM IST
  • ಆನ್‌ಲೈನ್‌ ತರಗತಿ ತಪ್ಪಿಸಿಕೊಳ್ಳಲು ಹುಡುಗಿ ಮಾಡಿದಳು ಮಾಸ್ಟರ್ ಪ್ಲ್ಯಾನ್
  • ತನ್ನನ್ನೇ ಹೋಲುವ ಗೊಂಬೆ ಸಿದ್ಧಪಡಿಸಿ ಲ್ಯಾಪ್‌ಟಾಪ್ ಮುಂದೆ ಕುರಿಸಿದ ಯುವತಿ
  • ಆನ್‌ಲೈನ್‌ ಕ್ಲಾಸ್ ನಡೆಯುತ್ತಿದ್ದಾಗಲೇ ಗಡತ್ತಾಗಿ ನಿದ್ರೆ ಮಾಡಿದ ಹುಡುಗಿ ಫೋಟೋ ವೈರಲ್
Viral News: ಆನ್‌ಲೈನ್‌ ತರಗತಿ ತಪ್ಪಿಸಿಕೊಳ್ಳಲು ಈ ಹುಡುಗಿ ಎಂತಹ ಕೆಲಸ ಮಾಡಿದ್ದಾಳೆ ನೋಡಿ..! title=
ಆನ್‌ಲೈನ್‌ ಕ್ಲಾಸ್ ನಡೆಯುತ್ತಿದ್ದಾಗಲೇ ಗಡತ್ತಾಗಿ ನಿದ್ರೆ ಮಾಡಿದ ಹುಡುಗಿ (Photo Courtesy: @Zee News)

ನವದೆಹಲಿ: ಕೊರೊನಾ ಸಾಂಕ್ರಾಮಿಕ(Corona Pandemic)ದಿಂದ ಬಹುತೇಕ ಜನರ ಜೀವನಶೈಲಿಯೇ ಬದಲಾಗಿಬಿಟ್ಟಿದೆ. ಅನೇಕರು ಇಂದು ಮೊಬೈಲ್ ಗೀಳು ಅಂಟಿಸಿಕೊಂಡಿದ್ದಾರೆ. ಲಾಕ್ ಡೌನ್ ವೇಳೆ ಸಮಯ ಕಳೆಯಲು ಸ್ಮಾರ್ಟ್‌ಫೋನ್‌ ಎಲ್ಲರಿಗೂ ಸಹಕಾರಿಯಾಗಿತ್ತು. ಕೊರೊನಾ ಕಾರಣದಿಂದ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸ್ಮಾರ್ಟ್‌ಫೋನ್‌ ಮೂಲಕವೇ ಆನ್‌ಲೈನ್‌ ಕ್ಲಾಸ್ ನಡೆಸಲಾಗುತ್ತಿದೆ. ಆನ್‌ಲೈನ್‌ ತರಗತಿಗಳ ಅವಾಂತರಗಳ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾಗಲ್ಲಿ ಅನೇಕ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.  

ಆನ್‌ಲೈನ್‌ ಕ್ಲಾಸ್(Online Class) ವೇಳೆ ಮಕ್ಕಳು ಶಿಕ್ಷಕರಿಗೆ ನೀಡಿದ ತೊಂದರೆಗಳು ಒಂದೆರಡಲ್ಲ. ಅವರ ತುಂಟಾಟ, ಚೇಷ್ಠೆ ನೋಡುಗರ ಮೊಗದಲ್ಲಿ ನಗು ತರಿಸಿತ್ತು. ಕೆಲವರಂತೂ ಆನ್‌ಲೈನ್‌ ತರಗತಿಗಳಿಂದ ತಪ್ಪಿಸಿಕೊಳ್ಳಲು ಚಿತ್ರ-ವಿಚಿತ್ರ ಉಪಾಯಗಳನ್ನು ಮಾಡಿ ಕೊನೆಗೆ ಸಿಕ್ಕಬಿದ್ದ ಅನೇಕ ಪ್ರಸಂಗಗಳು ನಡೆದಿವೆ. ಅದೇ ರೀತಿಯ ಮತ್ತೊಂದು ಪ್ರಸಂಗ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆನ್‌ಲೈನ್‌ ತರಗತಿ ತಪ್ಪಿಸಿಕೊಳ್ಳಲು ಹುಡುಗಿಯೊಬ್ಬಳು ಮಾಡಿದ ಉಪಾಯ ಕಂಡು ನೆಟಿಜನ್ ಗಳೇ ದಂಗಾಗಿ ಹೋಗಿದ್ದು, ಹೊಟ್ಟೆ ಹುಣ್ಣಾಗುವಂತೆ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಇದನ್ನೂ ಓದಿ: ಇಲ್ಲಿ ಟ್ರಕ್ ಚಾಲಕರೂ ಪಡೆಯುತ್ತಾರೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ, 2 ದಿನ ರಜೆ ಮತ್ತು ಬೋನಸ್

ಅಷ್ಟಕ್ಕೂ ನಡೆದಿರುವುದಾದರೂ ಏನು ಅಂತೀರಾ..? ಕೊರೊನಾ ವೈರಸ್(CoronaVirus) ಭೀತಿಯಿಂದ ಮಕ್ಕಳ ಆನ್‌ಲೈನ್‌ ಕ್ಲಾಸ್ ಗೆ ಸಹಾಯವಾಗಲಿ ಎಂದು ಪೋಷಕರು ದುಬಾರಿ ಬೆಲೆ ತೆತ್ತು ಸ್ಮಾರ್ಟ್‌ಫೋನ್‌ ಕೊಡಿಸಿದ್ದಾರೆ. ಆದರೆ ಕೆಲವರು ಇಂತಹ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಹುಡಗಿಯೊಬ್ಬಳು ಸ್ಮಾರ್ಟ್‌ಫೋನ್‌ ತರಗತಿ ನಡೆಸುತ್ತಿದ್ದ ಶಿಕ್ಷಕರನ್ನೇ ಮೂರ್ಖರನ್ನಾಗಿ ಮಾಡಿದ್ದಾಳೆ.   

ಆನ್‌ಲೈನ್ ತರಗತಿ(Online Class) ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಹುಡುಗಿ ಲ್ಯಾಪ್‌ಟಾಪ್ ಮುಂದೆ ತನ್ನದೇ ರೀತಿಯ ಡಮ್ಮಿ ಗೊಂಬೆಯೊಂದನ್ನು ಪ್ರತಿಷ್ಠಾಪಿಸಿ ಸಖತ್ ಆಗಿ ನಿದ್ದೆ ಹೊಡೆದಿದ್ದಾಳೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿದೆ. ತರಗತಿಯಿಂದ ಬೇಜಾರಾದಾಗ ತನ್ನದೇ ರೀತಿಯ ಗೊಂಬೆಯೊಂದನ್ನು ಸಿದ್ಧಪಡಿಸಿ ಅದನ್ನು ಲ್ಯಾಪ್‌ಟಾಪ್ ಮುಂದೆ ಕುರಿಸಿದ್ದಾಳೆ. ಇದನ್ನು ನೋಡಿದರೆ ಹುಡುಗಿ ಆನ್‌ಲೈನ್ ಕ್ಲಾಸ್ ಕೇಳುತ್ತಿದ್ದಾಳೆಂಬಂತೆ ಕಾಣುತ್ತದೆ. ಯಾರಿಗೂ ಸಂಶಯ ಬಾರದಂತೆ ಪ್ಲಾನ್ ಮಾಡಿದ ಹುಡುಗಿ ಪಕ್ಕದಲ್ಲಿಯೇ ನಿದ್ರೆಗೆ ಹೋಗಿದ್ದಾಳೆ.

ಇದನ್ನೂ ಓದಿ: ಹತ್ತು ತಿಂಗಳಲ್ಲಿ ಎರಡು ಬಾರಿ ಗರ್ಭವತಿಯಾಗಿ 3 ಮಕ್ಕಳಿಗೆ ಜನ್ಮ ನೀಡಿದ 23 ವರ್ಷದ ಮಹಿಳೆ

ಲ್ಯಾಪ್‌ಟಾಪ್ ಮುಂದೆ ಕುರಿಸಿದ ಗೊಂಬೆಯನ್ನು ಥೇಟ್ ಅವಳಂತೆಯೇ ಸಿಂಗರಿಸಲಾಗಿದೆ. ಅದಕ್ಕೆ ವಿಗ್ ಮತ್ತು ಕನ್ನಡಕವನ್ನೂ ಹಾಕಿದ್ದಾಳೆ. ಯಾರಿಗೂ ಡೌಟ್ ಬರದಂತೆ ಗೊಂಬೆಗೆ ಫೇಸ್ ಮಾಸ್ಕ್ ಅನ್ನು ಹಾಕಿದ್ದಾಳೆ. ತಾನು ಮಾತ್ರ ಆನ್‌ಲೈನ್ ಕ್ಲಾಸ್ ತಪ್ಪಿಸಿಕೊಂಡು ಪಕ್ಕದ ಬೆಡ್ ಮೇಲೆ ಗಡತ್ತಾಗಿ ನಿದ್ದೆ ಮಾಡಿದ್ದಾಳೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ಅನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಕೆಲವು ಟ್ವಿಟರ್ ಬಳಕೆದಾರರು ಹುಡುಗಿಯನ್ನು ಗೇಲಿ ಮಾಡಿದ್ದಾರೆ. ಒಬ್ಬ ಬಳಕೆದಾರ, ‘ಮನೆಯಲ್ಲಿ ತರಗತಿಯ ಸಮಯದಲ್ಲಿ ಮಾಸ್ಕ್ ನ ಅವಶ್ಯಕತೆ ಏನಿತ್ತು’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News