ಲಂಡನ್:  ವಿಶ್ವದ ಹೆಸರಾಂತ ವಿಮಾ ಕಂಪನಿಯು (Insurance Company) ಇದುವರೆಗೆ ಮಾಡಿದ ವಿಚಿತ್ರವಾದ ವಿಮಾ ಕ್ಲೈಮ್‌ಗಳ ಬಗ್ಗೆ ಆಸಕ್ತಿದಾಯಕ (Interesting Incidents) ಘಟನೆಗಳನ್ನು (Strange Incidents) ನೆನಪಿಸಿಕೊಂಡಿದೆ ಮತ್ತು ಅದನ್ನು ತನ್ನ ಗ್ರಾಹಕರೊಂದಿಗೆ ಹಂಚಿಕೊಂಡಿದೆ. ಇದರಲ್ಲಿರುವ ಒಂದು ಘಟನೆ ನಿಮ್ಮನ್ನೂ ಕೂಡ ಯೋಚನೆಗೀಡು ಮಾಡಲಿದೆ, ಇದು ನಿಜವಾಗಿಯೂ ಸಾಧ್ಯವೇ? ಎಂದು ನೀವೂ ಕೂಡ ಪ್ರಶ್ನಿಸುವಿರಿ.


COMMERCIAL BREAK
SCROLL TO CONTINUE READING

ಶಾಂಪೇನ್ ನಿಂದಾದ ಗಾಯಕ್ಕೆ ಇನ್ಸುರೆನ್ಸ್ ಕ್ಲೇಮ್ 
'ದಿ ಮಿರರ್'ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, 325 ವರ್ಷಗಳ ವ್ಯವಹಾರವನ್ನು ಪೂರ್ಣಗೊಳಿಸಿರುವ ಬ್ರಿಟಿಷ್ ವಿಮಾ ಕಂಪನಿ (British Insurance Company) ಈ ವಿಚಿತ್ರ ಪ್ರಕರಣಗಳನ್ನು  ಹಂಚಿಕೊಂಡಿದೆ. ಇವುಗಳಲ್ಲಿ ಅತ್ಯಂತ ವಿಚಿತ್ರ ಕ್ಲೇಮ್ ಪ್ರಕರಣ ಶಾಂಪೇನ್ ಕಾರ್ಕ್ ಕುರಿತಾಗಿದೆ. ಈ ಪ್ರಕರಣ 1878ನೇ ಇಸ್ವಿಯದ್ದಾಗಿದೆ. ಲಂಡನ್ (London) ಹೋಟೆಲ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಶಾಂಪೇನ್ ಬಾಟಲಿಯ ಕಾರ್ಕ್‌ನಿಂದ ಗಾಯಗೊಂಡಿದ್ದರು. ಶಾಂಪೇನ್ ಬಾಟಲಿಯನ್ನು ತೆರೆಯುವಾಗ ಅವರ ಕಣ್ಣಿಗೆ ಕಾರ್ಕ್ ಹೊಡೆದುಕೊಂಡಿತ್ತು.


ಇದನ್ನೂ ಓದಿ-Third World War Fear: 3ನೇ ಮಹಾಯುದ್ಧದ ಮುನ್ಸೂಚನೆಯೇ ಇದು! ಪೂರ್ವ ಯುರೋಪ್ ಗೆ NATO ವತಿಯಿಂದ ಯುದ್ಧ ಸಾಮಗ್ರಿಗಳ ರವಾನೆ


ಕ್ಲೇಮ್ ರೂಪದಲ್ಲಿ ಕಂಪನಿ ಎರಡೂವರೆ ತಿಂಗಳ ವೇತನ ಪಾವತಿಸಿತ್ತು
ವ್ಯಕ್ತಿಗೆ ವಿಮಾ ಕಂಪನಿಯು ಸುಮಾರು ಎರಡೂವರೆ ತಿಂಗಳ ಸಂಬಳಕ್ಕೆ ಸಮನಾದ £25 10s ಪಾವತಿಸಿತ್ತು. ಎರಡನೆಯ ಪ್ರಕರಣವು 1960ನೇ ಇಸ್ವಿಯದ್ದಾಗಿದೆ, ಇದರಲ್ಲಿ ಕುರಿಗಳು ಶೋರೂಮ್‌ನ ಕಿಟಕಿಯನ್ನು ಒಡೆದ ನಂತರ ಶೋರೂಮ್‌ನ ಮಾಲೀಕರು ವಿಮಾ ಕಂಪನಿಯಿಂದ ಕ್ಲೈಮ್ ಕೋರಿದ್ದರು. ಈ ಸಂದರ್ಭದಲ್ಲಿಯೂ ಕಂಪನಿಯು ಗ್ರಾಹಕರಿಗೆ ವಿಮೆ ಕ್ಲೈಮ್ ನೀಡಿತ್ತು.


ಇದನ್ನೂ ಓದಿ-Omicron BA.2 Strain: ಭಾರತಕ್ಕೆ ಓಮಿಕ್ರಾನ್ ಹೊಸ ರೂಪಾಂತರಿ BA.2 ಎಂಟ್ರಿ, ಎಷ್ಟು ಅಪಾಯಕಾರಿ ಈ ವೈರಸ್?


ದಂತ ವೈದ್ಯರ ವಿಚಿತ್ರ ಇನ್ಸೂರೆನ್ಸ್ ಕ್ಲೇಮ್
ಕ್ಲೇಮ್ ನ ಇಂತಹ ಇನ್ನೊಂದು ಸ್ವಾರಸ್ಯಕರ ಪ್ರಕರಣವನ್ನು ಕಂಪನಿ ಹಂಚಿಕೊಂಡಿದೆ. ಪ್ರಕರಣದಲ್ಲಿ ದಂತ ವೈದ್ಯರೊಬ್ಬರು ಅನಸ್ತೆಸಿಯಾ ಕೊಟ್ಟು ತನ್ನ ರೋಗಿಯನ್ನು ಉಪಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ರೋಗಿ ವೈದ್ಯರನ್ನು ಥಳಿಸಿ ಅವರನ್ನು ಕಿಟಕಿಯಾಚೆ ಎಸೆದಿದ್ದ. ಈ ಪ್ರಕರಣದಲ್ಲಿಯೂ ಕೂಡ ಕಂಪನಿ ದಂತ ವೈದ್ಯರಿಗೆ ಕ್ಲೇಮ್ ಪಾವತಿಸಿತ್ತು. 325 ವರ್ಷಗಳ ತನ್ನ ಇತಿಹಾಸದಲ್ಲಿ ಕಂಪನಿ ಇದುವರೆಗೆ 11 ಅರಬ್ ಗೂ ಹೆಚ್ಚಿನ ಮೊತ್ತವನ್ನು ಕ್ಲೇಮ್ ರೂಪದಲ್ಲಿ ಪಾವತಿಸಿದೆ ಎಂದು ಹೇಳಿಕೊಂಡಿದೆ.


ಇದನ್ನೂ ಓದಿ-Trending News: Internet ನಲ್ಲಿ ಎಲ್ಲರ ತಲೆ ಗಿರಕಿ ಹೊಡೆಸಿದ 7 ಆನೆಗಳ ಫೋಟೋ, ನಿಮಗೆಷ್ಟು ಆನೆಗಳು ಕಾಣಿಸುತ್ತಿವೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.