Trending News: Internet ನಲ್ಲಿ ಎಲ್ಲರ ತಲೆ ಗಿರಕಿ ಹೊಡೆಸಿದ 7 ಆನೆಗಳ ಫೋಟೋ, ನಿಮಗೆಷ್ಟು ಆನೆಗಳು ಕಾಣಿಸುತ್ತಿವೆ?

Elephants Photo: ಒಂದು ವೇಳೆ ನಿಮಗೂ ಕೂಡ ಈ ಛಾಯಾಚಿತ್ರದಲ್ಲಿ ಕೇವಲ ನಾಲ್ಕು ಆನೆಗಳು ಮಾತ್ರ ಕಾಣಿಸುತ್ತಿದ್ದರೆ, ಅದು ನಿಮ್ಮ ಕಣ್ಣುಗಳ ವ್ಯತ್ಯಾಸ. ಏಕೆಂದರೆ, ಈ ಫೋಟೋ ಅನ್ನು ಕ್ಲಿಕ್ಕಿಸಿರುವ ವ್ಯಕ್ತಿ ಈ ಚಿತ್ರದಲ್ಲಿ ಏಳು ಆನೆಗಳಿವೆ ಎಂದು ಹೇಳುತ್ತಾರೆ.

Written by - Nitin Tabib | Last Updated : Jan 24, 2022, 12:51 PM IST
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ 7 ಆನೆಗಳ ಒಗಟು.
  • ಈ ಚಿತ್ರದಲ್ಲಿ ನಿಮಗೆಷ್ಟು ಆನೆಗಳು ಕಾಣಿಸುತ್ತಿವೆ?
  • ಟ್ರೈ ಮಾಡಿ ನೀವೂ ನಿಮ್ಮ ಉತ್ತರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ.
Trending News: Internet ನಲ್ಲಿ ಎಲ್ಲರ ತಲೆ ಗಿರಕಿ ಹೊಡೆಸಿದ 7 ಆನೆಗಳ ಫೋಟೋ, ನಿಮಗೆಷ್ಟು ಆನೆಗಳು ಕಾಣಿಸುತ್ತಿವೆ? title=
CAN YOU SEE ALL 7 (Courtesy - Twitter)

Elephants Counting Challenge - ಸಾಮಾಜಿಕ ಮಾಧ್ಯಮದಲ್ಲಿ ನಿತ್ಯ ಹಲವು ಒಗಟುಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ, ಅದನ್ನು ಪರಿಹರಿಸುವಲ್ಲಿ ನೆಟಿಜನ್‌ಗಳೂ ಕೂಡ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಇಂದು ನಾವು ನಿಮಗಾಗಿ ಅಂತಹುದೇ ಒಂದು ಒಗಟನ್ನು ತಂದಿದ್ದೇವೆ. ಈ ಒಗಟು ಇಂಟರ್ನೆಟ್‌ನಲ್ಲಿ ಎಲ್ಲರಿಗೂ ಸವಾಲೆಸಗಿದೆ (How Many Elephants Are There) ಮತ್ತು ಜನರು ಅದರಲ್ಲಿ ತುಂಬಾ ಗೊಂದಲಕ್ಕೊಳಗಾಗಿದ್ದಾರೆ. ಎಲ್ಲಾ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು (Viral News) ಪ್ರಸ್ತುತಪಡಿಸುತ್ತಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡುತ್ತಾ, ಮೊದಲ ನೋಟದಲ್ಲಿ ಮತ್ತು ಸ್ವಲ್ಪ ಗಮನ ಹರಿಸಿದ ನಂತರವೂ, ಈ ಚಿತ್ರದಲ್ಲಿ ನಾಲ್ಕು ಆನೆಗಳು ನದಿಯ ದಡದಲ್ಲಿ ನಿಂತಿರುವುದು ಕಂಡುಬರುತ್ತದೆ. ನೀವು ಅದರಲ್ಲಿ ನಾಲ್ಕು ಆನೆಗಳನ್ನು ಮಾತ್ರ ನೋಡಲು ಸಾಧ್ಯವಾದರೆ, ಇದು ನಿಮ್ಮ ಕಣ್ಣುಗಳ ವ್ಯತ್ಯಾಸವೂ ಇರಬಹುದು. ಕಾರಣ ಈ ಚಿತ್ರವನ್ನು ಕ್ಲಿಕ್ ಮಾಡಿದ ವ್ಯಕ್ತಿ ಈ ಚಿತ್ರದಲ್ಲಿ ಏಳು ಆನೆಗಳಿವೆ ಎಂದು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಚಿತ್ರದಲ್ಲಿ ಏಳು ಆನೆಗಳನ್ನು ಹುಡುಕಲು ಎಲ್ಲರೂ ಶ್ರಮಿಸುತ್ತಿದ್ದಾರೆ.

ನೀವು ನಂಬಲು ಅಸಾಧ್ಯವಾದರೂ ಕೂಡ ಈ ಫೋಟೋದಲ್ಲಿ 7 ಆನೆಗಳಿರುವುದು ಸತ್ಯ. ಈ ಕ್ಷಣವನ್ನು ಸೆರೆಹಿಡಿಯಲು ಸುಮಾರು 1400 ಛಾಯಾಚಿತ್ರಗಳನ್ನು ಕ್ಲಿಕ್ಕಿಸಲಾಗಿದೆ! ಛಾಯಾಗ್ರಾಹಕರು ರಚಿಸಿರುವ ಫ್ರೇಮ್ ನಲ್ಲಿ ಎಲ್ಲಾ 7 ಆನೆಗಳು ಬಾಯಾರಿಕೆ ತಣಿಸಿಕೊಳ್ಳಲು ಚಿತ್ರದಲ್ಲಿ ಒಟ್ಟಿಗೆ ಬಂದಿವೆ.

ಇದನ್ನೂ ಓದಿ-WATCH:ಬೆಕ್ಕಿನಂತೆ ಸಿಂಹಿಣಿಯನ್ನು ಹೊತ್ತು ತಂದ ಮಹಿಳೆ.. ದೃಶ್ಯ ಕಂಡು ಅವಾಕ್ಕಾದ ನೆಟ್ಟಿಗರು

ಇದನ್ನೂ ಓದಿ-India vs South Africa: ಆಫ್ರಿಕನ್ ನಾಯಕನೊಂದಿಗೆ ಕೆಎಲ್ ರಾಹುಲ್ ಘರ್ಷಣೆ, ವಿಡಿಯೋ ವೈರಲ್

ಈ ಟ್ವೀಟ್ ಟ್ರೆಂಡಿಂಗ್ ಆಗುವ ಮೊದಲೇ ನೂರಾರು ಜನ ಈ ಫೋಟೋಗೆ ಲೈಕ್ ಮಾಡಿ ರೀಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಜನ ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವರು 5 ಆನೆಗಳಿವೆ ಎಂದರೆ ಕೆಲವರು 7 ಎಂದಿದ್ದಾರೆ. ಅದೇನೇ ಇರಲಿ ಸಾಮಾಜಿಕ ಮಾಧ್ಯಮದ ಮೇಲೆ ಈ ಒಗಟು ಬಿಡಿಸಲು ಮಾತ್ರ ಸಾವಿರಾರು ಜನರು ಮುಗಿಬಿದ್ದಿರುವದಂತೂ ನಿಜ.

ಇದನ್ನೂ ಓದಿ-Truth Behind Viral Video: ಕುಡಿದ ಅಮಲಿನಲ್ಲಿ ವಿಮಾನ ನಿಲ್ದಾಣದಲ್ಲಿ Toilet ಮಾಡಿದ್ರಾ Aryan Khan? ಇದರ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News