ನವದೆಹಲಿ: BA.2 Sub Variant - ಹಲವು ದೇಶಗಳಲ್ಲಿ ಕೊರೊನಾ (Covid-19 Cases) ಪ್ರಕರಣಗಳು ಮತ್ತೆ ಹೆಚ್ಚಾಗತೊಡಗಿವೆ. ಈಗ ಕರೋನಾದ ಓಮಿಕ್ರಾನ್ ರೂಪಾಂತರಿಯ ಉಪ-ವೇರಿಯಂಟ್ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ರೂಪಾಂತರವನ್ನು BA.2 ಎಂದು ಹೆಸರಿಸಲಾಗಿದೆ. ಇದರ ಹೊಡೆತ ಈಗಾಗಲೇ ಭಾರತದಲ್ಲಿ ಅನುಭವಿಸಲಾಗುತ್ತಿದೆ. ಇದುವರೆಗೆ 530 ಮಾದರಿಗಳನ್ನು ಸ್ವೀಕರಿಸಲಾಗಿದೆ. ಈ ಎಲ್ಲಾ ರೂಪಾಂತರಗಳು ಓಮಿಕ್ರಾನ್‌ಗಿಂತ (Omicron Cases In India) ವೇಗವಾಗಿ ಹರಡುತ್ತವೆ ಎಂದು ಹೇಳಲಾಗುತ್ತಿದೆ. ಬ್ರಿಟಿಷ್ ಆರೋಗ್ಯ ಇಲಾಖೆಯು ಓಮಿಕ್ರಾನ್‌ನ ಈ ಉಪ-ರೂಪಾಂತರಿಗೆ ಸಂಬಂಧಿಸಿದ ನೂರಾರು ಪ್ರಕರಣಗಳನ್ನು ಗುರುತಿಸಿದೆ. UK ಹೆಲ್ತ್ ಪ್ರೊಟೆಕ್ಷನ್ ಏಜೆನ್ಸಿ (UKHSA) ಅದರ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ ತನಿಖೆಯ ನಂತರ BA.2 ಎಂದು ಹೆಸರಿಸಿದೆ.
40 ದೇಶಗಳಲ್ಲಿ BA.2 ಪ್ರಕರಣಗಳು ಕಂಡುಬಂದಿವೆ
ವರದಿಗಳ ಪ್ರಕಾರ, ಇದುವರೆಗೆ ವಿಶ್ವದ ಸುಮಾರು 40 ದೇಶಗಳಲ್ಲಿ Omicron ನ ಹೊಸ ಉಪ-ರೂಪಾಂತರಿಯನ್ನು ಪತ್ತೆಹಚ್ಚಲಾಗಿದೆ. ಡೆನ್ಮಾರ್ಕ್ ಅತ್ಯಧಿಕ ಸಂಖ್ಯೆಯ BA.2 ಪ್ರಕರಣಗಳನ್ನು ವರದಿ ಮಾಡಿದೆ, ಹೊಸ ರೂಪಾಂತರವು ಓಮಿಕ್ರಾನ್ ವೈರಸ್‌ನಿಂದ ಉಂಟಾದ ಸಾಂಕ್ರಾಮಿಕದ ಎರಡು ವಿಭಿನ್ನ ಪೀಕ್ ಗಳಿಗೆ ಕಾರಣವಾಗಬಹುದು ಎಂದು ಡ್ಯಾನಿಶ್ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಓಮಿಕ್ರಾನ್ ನ BA.2 ಉಪ-ರೂಪಾಂತರಿಯನ್ನು ಜೀನೋಮ್ ಅನುಕ್ರಮದ ಮೂಲಕ ಮಾತ್ರ ಕಂಡುಹಿಡಿಯಬಹುದು ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ-Health Tips: ಕರೋನಾ ಲಕ್ಷಣವಿದ್ದರೆ ಕೂಡಲೇ ಈ ಕೆಲಸ ಮಾಡಿ
ಪ್ರಕರಣಗಳು ಮೊದಲು ಬ್ರಿಟನ್‌ನಲ್ಲಿ ವರದಿಯಾಗಿದೆ
ಜನವರಿಯ ಮೊದಲ 10 ದಿನಗಳಲ್ಲಿ, ಯುಕೆಯಲ್ಲಿ ಈ ರೂಪಾಂತರದ 400 ಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಲಾಗಿದೆ. ಆನ್‌ಲೈನ್ ಸುದ್ದಿ ಮಾಧ್ಯಮ ವರದಿಯ ಪ್ರಕಾರ, ಭಾರತದಲ್ಲಿ 530 ಓಮಿಕ್ರಾನ್ ಉಪ-ವೇರಿಯಂಟ್‌ಗಳು, ಸ್ವೀಡನ್‌ನಲ್ಲಿ 181 ಮತ್ತು ಸಿಂಗಾಪುರದಲ್ಲಿ 127 ಮಾದರಿಗಳು ಪತ್ತೆಯಾಗಿವೆ . ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ (WHO) ಓಮಿಕ್ರಾನ್ ರೂಪಾಂತರವನ್ನು 'ವೇರಿಯಂಟ್ ಆಫ್ ಕನ್ಸರ್ನ್' ಎಂದು ವಿವರಿಸಿದೆ. ಅದರ ಉಪ-ರೂಪಾಂತರಿ BA.2 ಸಹ ಅದೇ ರೀತಿಯದ್ದಾಗಿದೆ ಎಂದು ನಂಬಲಾಗಿದೆ. ಅಂದರೆ, ಇವೆರಡರ ನಡುವೆ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ.
ಇದನ್ನೂ ಓದಿ-COVID ನಿಂದ ಚೇತರಿಸಿಕೊಂಡ ನಂತರ ಈ ತಪ್ಪನ್ನು ಮಾಡದಿರಿ, 68 ದಿನಗಳವರೆಗೆ ಉಳಿಯಲಿದೆ ಈ ಲಕ್ಷಣಗಳು
ಈ ರೂಪಾಂತರವು ಅತ್ಯಂತ ಮಾರಕ ಎಂದು ನಂಬಲಾಗಿದೆ
UKHSA ನ ನಿರ್ದೇಶಕಿ ಡಾ. ಮೀರಾ ಚಂದ್ ಅವರ ಪ್ರಕಾರ, ಓಮಿಕ್ರಾನ್ ನಿರಂತರವಾಗಿ ರೂಪಾಂತರಗೊಳ್ಳುವ ರೂಪಾಂತರವಾಗಿದೆ. ಆದ್ದರಿಂದ ನಾವು ಹೊಸ ರೂಪಾಂತರಗಳನ್ನು ನೋಡುವುದನ್ನು ಮುಂದುವರೆಸುವ ನಿರೀಕ್ಷೆ ಇದೆ. ನಾವು ಅದರ ಜೀನೋಮ್ ಅನುಕ್ರಮವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಅದರಿಂದಾಗುವ ಆತಂಕದ ಮಟ್ಟವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ-ಭಾರತದಲ್ಲಿ ಸಮುದಾಯ ಪ್ರಸಾರಣ ಹಂತದಲ್ಲಿದೆ ಕೊರೊನಾ ಓಮಿಕ್ರಾನ್..! ಆಘಾತಕಾರಿ ಮಾಹಿತಿ ಬಹಿರಂಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.