ಇಂದು ಅಥವಾ ನಾಳೆ ಅಫ್ಘಾನಿಸ್ತಾನದಲ್ಲಿ ‘ತಾಲಿಬಾನ್ 2.0’ ಹೊಸ ಸರ್ಕಾರ..!
ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡಜಾದ ಇಂದು ಸಂಜೆ ಅಥವಾ ನಾಳೆ ಅಫ್ಘಾನಿಸ್ತಾನ ಸರ್ಕಾರದ ಹೊಸ ಸಚಿವ ಸಂಪುಟ ಘೋಷಿಸುವ ಸಾಧ್ಯತೆ.
ಕಾಬೂಲ್: ಇಡೀ ಅಫ್ಘಾನಿಸ್ತಾನವನ್ನೇ ಕಬ್ಜಾ ಮಾಡಿಕೊಂಡಿರುವ ತಾಲಿಬಾನ್ ಹೊಸ ಸರ್ಕಾರ ರಚಿಸುವ ನಿಟ್ಟಿನಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದೆ. ತಾಲಿಬಾನ್ 2.0 ಸರ್ಕಾರವು ಔಪಚಾರಿಕತೆಯ ಅಂತಿಮ ಹಂತದಲ್ಲಿದ್ದು, ಮುಂದಿನ 24 ರಿಂದ 48 ಗಂಟೆಗಳಲ್ಲಿ ಹೊಸ ಸಚಿವ ಸಂಪುಟ(Taliban Cabinet) ಘೋಷಣೆಯಾಗುವ ನಿರೀಕ್ಷೆಯಿದೆ.
ಮಾಧ್ಯಮಗಳ ವರದಿಯ ಪ್ರಕಾರ, ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡಜಾದ ಇಂದು ಸಂಜೆ ಅಥವಾ ನಾಳೆ ಅಫ್ಘಾನಿಸ್ತಾನ ಸರ್ಕಾರದ ಹೊಸ ಸಚಿವ ಸಂಪುಟವನ್ನು ಘೋಷಿಸುವ ಸಾಧ್ಯತೆಯೊಂದಿಗೆ ಕಾಬೂಲ್ ತಲುಪುವ ನಿರೀಕ್ಷೆಯಿದೆ. ಅಖುಂಡಜಾದ(Hibatullah Akhundzada) ಸದ್ಯ ಕಂದಹಾರ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ
ಅಮೆರಿಕ ಸೇನಾ ಪಡೆಗಳು ಸಂಪೂರ್ಣವಾಗಿ ಅಫ್ಘಾನಿಸ್ತಾನ(Afghanistan) ತೊರೆದ ಬಳಿಕ, ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಗುಂಡಿನ ಸದ್ದಿನ ಮೂಲಕ ತಾಲಿಬಾನ್‌ಗಳು ವಿಜಯೋತ್ಸವ ಆಚರಿಸಿದ್ದು, ಸಂಭ್ರಮಾಚರಣೆ ಮಾಡಿದ್ದಾರೆ.
ಹಿರಿಯ ತಾಲಿಬಾನ್ ನಾಯಕ ಅನಸ್ ಹಕ್ಕಾನಿ(Anas Haqqani) ಕೂಡ ಹೊಸ ಸರ್ಕಾರ ರಚಿಸುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಶೀಘ್ರವೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೂತನ ಸರ್ಕಾರ ರಚನೆಯಾಗುವ ಸಾಧ್ಯತೆ ಬಗ್ಗೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಮೆರಿಕದ ಕೊನೆಯ ಸೇನಾ ವಿಮಾನ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಡುವ ಸ್ವಲ್ಪ ಸಮಯಕ್ಕೂ ಮೊದಲು ಮಾತನಾಡಿದ್ದ ಹಕ್ಕಾನಿ, ತಾಲಿಬಾನ್ ಹೊಸ ಸಚಿವ ಸಂಪುಟ ಮುಂದಿನ ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್
ಅಫ್ಘಾನಿಸ್ತಾನ(Afghanistan)ದಲ್ಲಿ ವಿನೂತನ ಮಾದರಿಯ ಸರ್ಕಾರ ರಚಿಸುತ್ತೇವೆಂದು ತಾಲಿಬಾನ್ ಭಯೋತ್ಪಾಕ ಸಂಘಟನೆ ಹೇಳಿಕೊಂಡಿದೆ. ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ಮಹಿಳೆಯರಿಗೆ ‘ಇಸ್ಲಾಮಿಕ್ ಕಾನೂನಿನೊಳಗೆ’ ಸ್ವಾತಂತ್ರ್ಯ ನೀಡುವ ಸರ್ಕಾರ ರಚಿಸಲು ಉದ್ದೇಶಿಸಲಾಗಿದೆ ಎಂದು ತಾಲಿಬಾನ್ ನಾಯಕರು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಕಟ್ಟುನಿಟ್ಟಾಗಿ ಶರಿಯಾ ಕಾನೂನು ಜಾರಿಗೊಳಿಸುವುದಾಗಿ ಈಗಾಗಲೇ ತಾಲಿಬಾನ್ ನಾಯಕರು ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಸರ್ಕಾರ ಜಾರಿಯಾಗುವ ಭೀತಿಯಲ್ಲಿ ಸಾವಿರಾರು ಅಫ್ಘಾನ್ ಪ್ರಜೆಗಳು ದೇಶ ತೊರೆಯಲು ನಿರ್ಧರಿಸಿದ್ದರು. ತಾಲಿಬಾನ್ ಆಡಳಿತದಲ್ಲಿ ತಮಗೆ ಉಳಿಗಾಲವಿಲ್ಲವೆಂದು ಅನೇಕರು ದೇಶ ತೊರೆಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.