ಮೋದಿ ಗುಣಗಾನ ಮಾಡಿದ್ದ Kili Paul ಮೇಲೆ ಕಿಡಿಗೇಡಿಗಳಿಂದ ಹಲ್ಲೆ
ಕಿಲಿ ಪೌಲ್, ಈ ಹಿಂದೆ ಅನೇಕ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು. ಇತ್ತೀಚೆಗೆ ವಿಶ್ವ ಖ್ಯಾತಿ ಪಡೆದ ಕೆಜಿಎಫ್-2 ಸಿನಿಮಾದ ಡೈಲಾಗ್‌ನ್ನು ಡಬ್ ಮಾಡಿ ರೀಲ್ಸ್ ಮಾಡಿದ್ದರು.
ಸೌತ್ ಆಫ್ರಿಕಾದ ತಾಂಜೇನಿಯ ಮೂಲದ ಕಿಲಿ ಪೌಲ್ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಸೆನ್ಶೇಶನ್ ಕ್ರಿಯೇಟ್ ಮಾಡಿದ್ದರು. ಭಾರತದ ಸಿನಿಮಾ ಹಾಡುಗಳನ್ನು ಮೆಚ್ಚಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಅವರು ಸಖತ್ ಫೇಮಸ್ ಆಗಿದ್ದರು. ಆದರೆ ಇದೀಗ ಕಿಲಿ ಪೌಲ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, "ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ನನ್ನ ಮೇಲೆ ಐವರು ದಾಳಿ ನಡೆಸಲು ಮುಂದಾದಾಗ ನನ್ನನ್ನು ರಕ್ಷಣೆ ಮಾಡಲು ಪ್ರತಿದಾಳಿ ನಡೆಸಿದೆ. ಆದ ಗಾಬರಿಗೊಂಡ ಅವರು ಅಲ್ಲಿಂದ ಪರಾರಿಯಾದರು. ನನ್ನ ಬಲಗೈ ಬೆರಳಿಗೆ ಗಾಯಗಳಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ" ಎಂದು ಹೇಳಿದ್ದಾರೆ.
ಕಿಲಿ ಪೌಲ್, ಈ ಹಿಂದೆ ಅನೇಕ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು. ಇತ್ತೀಚೆಗೆ ವಿಶ್ವ ಖ್ಯಾತಿ ಪಡೆದ ಕೆಜಿಎಫ್-2 ಸಿನಿಮಾದ ಡೈಲಾಗ್‌ನ್ನು ಡಬ್ ಮಾಡಿ ರೀಲ್ಸ್ ಮಾಡಿದ್ದರು. ಈ ವಿಡಿಯೋಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ, ತೆಲುಗಿನ ಪುಷ್ಪ ಸಿನಿಮಾದ ಸೂಪರ್ ಹಿಟ್ ಹಾಡು ‘ಸಾಮಿ-ಸಾಮಿ’ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು.
ಇನ್‌ಸ್ಟಾಗ್ರಾಂನಲ್ಲಿ ಸುಮಾರು 3 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಕಿಲಿ ಪೌಲ್‌ಗೆ ಸಖತ್ ಅಭಿಮಾನಿಗಳಿದ್ದಾರೆ. ಸದ್ಯ ಅವರ ಶೀಘ್ರ ಚೇತರಿಕೆಯಾಗಲೆಂದು ಅವರ ಫ್ಯಾನ್ಸ್ ಆಶಿಸುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.