ವಿವಾದಗಳ ಬೆನ್ನಲ್ಲೇ ಮತ್ತೊಂದು ಶಾಕಿಂಗ್!ವಿಶ್ರಾಂತಿಗೆಂದು ಮನೆಗೆ ತೆರಳಿದ್ದ ಸಿಎಂ ಅಧಿಕೃತ ನಿವಾಸದಿಂದಲೇ ನಾಪತ್ತೆ!
ಶನಿವಾರ ಸಂಜೆಯಿಂದ ಇಸ್ಲಾಮಾಬಾದ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಅಲಿ ಅಮೀನ್ ಗಂಡಾಪುರ್ ನಾಪತ್ತೆಯಾಗಿದ್ದಾರೆ.
ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಹಿರಿಯ ನಾಯಕ ಅಲಿ ಅಮೀನ್ ಗಂಡಾಪುರ್ ನಾಪತ್ತೆಯಾಗಿದ್ದಾರೆ.ಅಲಿ ಅಮೀನ್ ಅವರು ಬುಡಕಟ್ಟು ಪ್ರಾಂತ್ಯದ ಖೈಬರ್-ಪಖ್ತುಂಖ್ವಾ ಮುಖ್ಯಮಂತ್ರಿಯಾಗಿದ್ದಾರೆ.ಮಾಹಿತಿಯ ಪ್ರಕಾರ ಶನಿವಾರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸಿದ ನಂತರ ತಮ್ಮ ಅಧಿಕೃತ ನಿವಾಸದಲ್ಲಿ ವಿಶ್ರಾಂತಿ ಪಡೆಯಲು ತೆರಳಿದ್ದರು ಎಂದು ಹೇಳಲಾಗುತ್ತಿದೆ. ಇದಾದ ನಂತರ,ಅವರು ಶನಿವಾರ ಸಂಜೆ ರಾಷ್ಟ್ರ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ನಾಪತ್ತೆಯಾಗಿದ್ದಾರೆ.
ಅವರು ಯಾವುದೇ ಫೆಡರಲ್ ಏಜೆನ್ಸಿಯ ವಶದಲ್ಲಿಲ್ಲ ಎಂದು ಗೃಹ ಸಚಿವ ಮೊಹ್ಸಿನ್ ನಖ್ವಿ ಭಾನುವಾರ ಹೇಳಿದ್ದಾರೆ.ಮುಖ್ಯಮಂತ್ರಿ ಎಲ್ಲಿದ್ದಾರೆ ಎಂಬ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ನಖ್ವಿ ಹೇಳಿದ್ದಾರೆ.ಪೊಲೀಸರು ಅಲ್ಲಿಗೆ ತಲುಪುವ ಮೊದಲೇ ಅಲ್ಲಿಂದ ಹೊರಟು ಹೋಗಿದ್ದರು ಎನ್ನಲಾಗಿದೆ.ಅಲ್ಲದೆ ಅವರು ಯಾವುದೇ ಸರ್ಕಾರಿ ಏಜೆನ್ಸಿಯ ವಶದಲ್ಲಿಲ್ಲ ಎನ್ನುವುದನ್ನು ಖಡಾ ಖಂಡಿತವಾಗಿ ನಾನು ಹೇಳಬಲ್ಲೆ ಎಂದು ನಖ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಕುದುರೆ ಸವಾರಿ ಮಾಡಿದವರು ಯಾರು ಗೊತ್ತೆ..? ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ..
ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿರುವ ಮುಖ್ಯಮಂತ್ರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.‘ಪೊಲೀಸರು ಕೂಡಾ ಕೆಲವೆಡೆ ದಾಳಿ ನಡೆಸಿದ್ದರೂ ಇದುವರೆಗೂ ಅಲಿ ಅಮೀನ್ ಪತ್ತೆಯಾಗಿಲ್ಲ.ಇದೀಗ ಇವರ ದಿಢೀರ್ ನಾಪತ್ತೆಯು ಆತಂಕವನ್ನು ಹೆಚ್ಚಿಸಿದೆ.
ಖೈಬರ್ ಪಖ್ತುನ್ಖ್ವಾ ಸರ್ಕಾರದ ವಕ್ತಾರ ಮೊಹಮ್ಮದ್ ಅಲಿ ಸೈಫ್ ಪ್ರಕಾರ,ಪ್ರಾಂತೀಯ ಸರ್ಕಾರ ಮತ್ತು ಮುಖ್ಯಮಂತ್ರಿಯ ಕುಟುಂಬ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.'ಜಿಯೋ ನ್ಯೂಸ್' ವರದಿಯ ಪ್ರಕಾರ, ಗಂಡಾಪುರ ನಾಪತ್ತೆ ಪ್ರಕರಣದಲ್ಲಿ ಪ್ರಾಂತೀಯ ಸರ್ಕಾರವು ಪೇಶಾವರ ಹೈಕೋರ್ಟ್ ಅನ್ನು ಭಾನುವಾರದಂದು ಸಂಪರ್ಕಿಸಿದೆ.
ಇದನ್ನೂ ಓದಿ : ವಿಶ್ವದ ಟಾಪ್ 10 ಅತ್ಯಂತ ದುಬಾರಿ ಆಹಾರಗಳಿವು..! ಇವುಗಳನ್ನ ತಿನ್ನಲು ನೀವು ಜೀವಮಾನ ದುಡಿಯಬೇಕು..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.