ನ್ಯೂಯಾರ್ಕ್‌: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಮಂಗಳವಾರ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೂ ಆಗಿರುವ ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಅವರನ್ನು ಭೇಟಿಯಾದರು.


COMMERCIAL BREAK
SCROLL TO CONTINUE READING

ಈ ಭೇಟಿ ಬಳಿಕ ಇಬ್ಬರು ದಿಗ್ಗಜ ನಾಯಕರು ಭಾರತದಲ್ಲಿ ಹೂಡಿಕೆ ಸಂಬಂಧ ಸುದೀರ್ಘ ಮಾತುಕತೆ ನಡೆಸಿದರು. ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಖುಷಿ ವ್ಯಕ್ತಪಡಿಸಿದ ಮಸ್ಕ್, ‘ನಾನೂ ಸಹ ಮೋದಿಯವರ ದೊಡ್ಡ ಅಭಿಮಾನಿ’ ಎಂದು ಹೇಳಿದರು.  


ಇದನ್ನೂ ಓದಿ: United Nations ನಲ್ಲಿ ಭಾರತ-ಅಮೆರಿಕಾದ ಶತ್ರು ಮತ್ತು ಲಷ್ಕರ್ ಉಗ್ರನನ್ನು ರಕ್ಷಿಸಲು ವೀಟೋ ಬಳಸಿದ ಚೀನಾ


‘ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಯೋಜನೆ ಇದೆ. ಆದಷ್ಟು ಬೇಗ ಟೆಸ್ಲಾ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಾನು ಧನ್ಯವಾದ ಸಮರ್ಪಿಸುತ್ತೇನೆ. ಶೀಘ್ರವೇ ಈ ವಿಚಾರವಾಗಿ ನಾವು ದೊಡ್ಡ ಘೋಷಣೆ ಮಾಡುತ್ತೇವೆಂದು ಹೇಳಿದರು. ‘ಟೆಸ್ಲಾ ಕಾರ್ಯಾಚರಣೆಯ ಮಹತ್ವದ ಘೋಷಣೆ ಬಗ್ಗೆ ನಾವು ಆತುರ ಪಡುವುದಿಲ್ಲ. ಭಾರತದಲ್ಲಿ ಇದು ನಮ್ಮ ಮಹತ್ವದ ಹೂಡಿಕೆಯಾಗುವ ಸಾಧ್ಯತೆಯಿದೆ' ಅಂತಾ ಮಸ್ಕ್ ಹೇಳಿದ್ದಾರೆ.


ಭಾರತದಲ್ಲಿ ಟ್ವಿಟರ್‌ ಬಂದ್ ಮಾಡುವುದಾಗಿ ಕೇಂದ್ರ ಸರ್ಕಾರ ಬೆದರಿಕೆ ಹಾಕಿದ್ದ ವಿಚಾರವಾಗಿ ಮಾತನಾಡಿದ ಮಸ್ಕ್‌, ‘ದೇಶಗಳ ನಿಯಮಗಳನ್ನು ನಾವು ಪಾಲಿಸಲೇಬೇಕು. ಇದಕ್ಕಿಂತ ಹೆಚ್ಚಿನದು ಮಾಡಲು ಸಾಧ್ಯವಿಲ್ಲ. ಕಾನೂನಿನಡಿ ಅವಕಾಶವಿರುವ ಮುಕ್ತ ಸ್ವಾತಂತ್ರ್ಯ ನೀಡಲು ನಾವು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.


ಇದನ್ನೂ ಓದಿ: ʼವಿಶ್ವ ಸಂಗೀತ ದಿನʼವನ್ನು ಏಕೆ ಆಚರಣೆ ಮಾಡ್ತಾರೆ ಗೊತ್ತೆ..! ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ


ಪ್ರಧಾನಿ ಮೋದಿಯವರು ಹೊಸ ಕಂಪನಿಗಳನ್ನು ಆಹ್ವಾನಿಸಲು ಮತ್ತು ಬೆಂಬಲಿಸಲು ಬಯಸುತ್ತಾರೆ. ಭಾರತವು ಸೋಲಾರ್ ಪವರ್‍ನಲ್ಲಿ ಹೂಡಿಕೆ ಮಾಡಲು ಉತ್ತಮ ದೇಶವಾಗಿದೆ. ಭಾರತದ ಬಗ್ಗೆ ಮೋದಿಯವರು ಉತ್ತಮ ಯೋಜನೆಗಳನ್ನು ಹೊಂದಿದ್ದಾರೆ. ಶೀಘ್ರವೇ ಸ್ಟಾರ್‍ಲಿಂಕ್ ಇಂಟರ್ನೆಟ್‌ ಅನ್ನು ಭಾರತಕ್ಕೆ ತರುವುದಾಗಿ ಮಸ್ಕ್ ವಿಶ್ವಾಸ ವ್ಯಕ್ತಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.