ನವದೆಹಲಿ: ಥಾಯ್ಲೆಂಡ್ ಕೊಲ್ಲಿಯಲ್ಲಿ ಚಂಡಮಾರುತಕ್ಕೆ ಥಾಯ್ ನೌಕಾಪಡೆಯ ಹಡಗು ಮುಳುಗಿದ ಹೃದಯ ವಿದ್ರಾವಕ ಘಟನೆ ಡಿಸೆಂಬರ್ 18 ರ ಸಂಜೆ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿಗೆ ಡಿಕೆಶಿ ಹೇಳಿದ್ದೇನು ಗೊತ್ತೇ?


ಥಾಯ್ಲೆಂಡ್ ಕೊಲ್ಲಿಯಲ್ಲಿ ಚಂಡಮಾರುತದ ವೇಳೆ ಥಾಯ್ ನೌಕಾಪಡೆಯ ಹಡಗು ಮಗುಚಿ ಬಿದ್ದಿದ್ದು, 100ಕ್ಕೂ ಹೆಚ್ಚು ನಾವಿಕರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಇಂದು (ಡಿಸೆಂಬರ್ 19) ತಿಳಿಸಿದ್ದಾರೆ. ಯಾವುದೇ ಸಾವುನೋವುಗಳಿಲ್ಲದಿದ್ದರೂ, 106 ಸಿಬ್ಬಂದಿಗಳಲ್ಲಿ ಇನ್ನೂ 28  ಕೊಲ್ಲಿಯಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.28 ಮಂದಿಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅದು ತಿಳಿಸಿದೆ. ಭಾನುವಾರ (ಡಿಸೆಂಬರ್ 18) ರಾತ್ರಿ 11:30 ರ ಸುಮಾರಿಗೆ ಚಂಡಮಾರುತಕ್ಕೆ ಸಿಕ್ಕಿಹಾಕಿಕೊಂಡಾಗ, ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದ ಬ್ಯಾಂಗ್ ಸಫನ್ ಜಿಲ್ಲೆಯ ಕರಾವಳಿಯಿಂದ ಕೇವಲ 32 ಕಿಮೀ ದೂರದಲ್ಲಿ ಎಚ್‌ಟಿಎಂಎಸ್ ಸುಖೋಥೈ ನೀರಿನಲ್ಲಿ ಗಸ್ತು ತಿರುಗುತ್ತಿತ್ತು ಎನ್ನಲಾಗಿದೆ.


ಇದನ್ನೂ ಓದಿ: Deepika Padukone : ಅಸೆಂಬ್ಲಿವರೆಗೂ ಹೊಯ್ತು ದೀಪಿಕಾ ಕೇಸರಿ ಬಿಕಿನಿ.. ಚಳಿಗಾಲ ಅದಿವೇಶನದಲ್ಲಿ ಚರ್ಚೆ..!


ರಾಯಲ್ ಥಾಯ್ ನೌಕಾಪಡೆಯು ಮೂರು ಯುದ್ಧನೌಕೆಗಳು ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಮೊಬೈಲ್ ಪಂಪಿಂಗ್ ಯಂತ್ರಗಳೊಂದಿಗೆ ರವಾನಿಸಿತು, ಸಮುದ್ರದ ನೀರನ್ನು ತೆಗೆದುಹಾಕುವ ಮೂಲಕ ಹಡಗಿಗೆ ಸಹಾಯ ಮಾಡಲು ಪ್ರಯತ್ನಿಸಿತು ಆದರೆ ಬಲವಾದ ಗಾಳಿಯ ಕಾರಣ ಅದನ್ನು ಮಾಡಲು ಸಾಧ್ಯವಾಗಲಿಲ್ಲ.


ಯುದ್ಧನೌಕೆಯು ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದ ಬಂಗ್‌ಸಫನ್ ಜಿಲ್ಲೆಯ ಪಿಯರ್‌ನಿಂದ 32 ಕಿಲೋಮೀಟರ್ (20 ಮೈಲುಗಳು) ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಸುಖೋಟೈ ಹಡಗಿನಲ್ಲಿದ್ದ 106 ನಾವಿಕರ ಪೈಕಿ 78 ಮಂದಿಯನ್ನು ಫ್ರಿಗೇಟ್ ರಕ್ಷಿಸಿದೆ ಎಂದು ಅದು ಹೇಳಿದೆ. ಎಲ್ಲಾ ಸಿಬ್ಬಂದಿಯನ್ನು ಹುಡುಕಲು ರಾತ್ರಿಯಿಡೀ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಮತ್ತು ಮಧ್ಯ ಥೈಲ್ಯಾಂಡ್ ವರ್ಷದ ಅತ್ಯಂತ ಶೀತ ತಾಪಮಾನವನ್ನುಎದುರಿಸುತ್ತಿರುವ ಸಂದರ್ಭದಲ್ಲಿ, ದೂರದ ದಕ್ಷಿಣ ಥೈಲ್ಯಾಂಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಚಂಡಮಾರುತಗಳು ಮತ್ತು ಪ್ರವಾಹದ ಪರಿಸ್ಥಿತಿಗಳು ಸಾಮಾನ್ಯವಾಗಿವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.