ಥೈಲ್ಯಾಂಡ್: ಸಂಸತ್ತಿನಲ್ಲಿ ಅಶ್ಲೀಲ ಚಿತ್ರ ನೋಡುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆ ಸಿಕ್ಕು ಮುಗುಜರಕ್ಕೆ ಒಳಗಾದ ಪ್ರಸಂಗ ಥೈಲ್ಯಾಂಡ್ (Thailand) ನಲ್ಲಿ ನಡೆದಿದೆ. ಬಜೆಟ್ ಕುರಿತಾದ ಚರ್ಚೆಗೂ ಮುನ್ನ ಸಂಸದ ಮಹಾಶಯರು ನಡೆಸಿರುವ ಈ 'ಅನೈತಿಕ ಕೃತ್ಯ' ವನ್ನು ಪತ್ರಕರ್ತರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ನಂತರ ಈ ಕುರಿತು ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಸಂಸದರು ನೀಡಿರುವ ಉತ್ತರ ಕೇಳಿ ಪತ್ರಕರ್ತರೂ ಕೂಡ ಅವಾಕ್ಕಾಗಿದ್ದಾರೆ.


COMMERCIAL BREAK
SCROLL TO CONTINUE READING

Also Read- ಕಂಗನಾ ಸಾಫ್ಟ್ ಪೋರ್ನ್ ಸ್ಟಾರ್ ಹೇಳಿಕೆ ನಂತರ ನಟಿ ಊರ್ಮಿಳಾ ಮಾತೊಂಡ್ಕರ್ ಟ್ವೀಟ್


ಇನ್ನೆನ್ನು ಥೈಲ್ಯಾಂಡ್ ನ ಸಂಸತ್ತಿನಲ್ಲಿ ಬಜೆಟ್ ಕುರಿತಾದ ಚರ್ಚೆ ಆರಂಭಗೊಳ್ಳಬೇಕು ಮತ್ತು ಇದಕ್ಕಾಗಿ ಉಳಿದ ಸಂಸದರೆಲ್ಲರೂ ತಯಾರಿಯಲ್ಲಿ ತೊಡಗಿದ್ದರು.  ಏತನ್ಮಧ್ಯೆ ರೋನಾಥೆಪ್ ಅನುವತ್  (Ronnathep Anuwat) ತಮ್ಮ ಮೊಬೈಲ್ ಫೋನ್ ನಲ್ಲಿ ಏನನ್ನೂ ನೋಡುತ್ತಿರುವುದು ಕಂಡುಬಂದಿದೆ. ಪ್ರೆಸ್ ಗ್ಯಾಲರಿಯಲ್ಲಿ ಕುಳಿತ ಪತ್ರಕರ್ತರ ದೃಷ್ಟಿ ಅವರ ಮೇಲೆ ಬಿದ್ದಾಗ, ಪತ್ರಕರ್ತರು ಸಂಸದ ನಡೆಸುತ್ತಿರುವ ಕೃತ್ಯವನ್ನು ತಮ್ಮ ಕ್ಯಾಮಾರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಚಿತ್ರಗಳನ್ನು ಜೂಮ್ ಮಾಡಿ ಗಮನಿಸಿದಾಗ ಸಂಸದರು ಬಜೆಟ್ ರೀಡಿಂಗ್ ಓದುವ ಬದಲು ತಮ್ಮ ಮೊಬೈಲ್ ಫೋನ್ ನಲ್ಲಿ ಅಶ್ಲೀಲ ಭಾವಚಿತ್ರಗಳನ್ನು ನೋಡುತ್ತಿರುವುದು ಬೆಳಕಿಗೆ ಬಂದಿದೆ.


ಮಾಸ್ಕ್ ಕೂಡ ತೆಗೆದು ಹಾಕಿದ್ದರು.
ಸಂಸದರು ತಮ್ಮ ಮೊಬೈಲ್ ನಲ್ಲಿ ಭಾವಚಿತ್ರ ವೀಕ್ಷಣೆಯಲ್ಲಿ ಯಾವ ರೀತಿ ಮೈಮರೆದಿದ್ದರೆಂದರೆ ಅವರು ತಾವು ಧರಿಸಿದ್ದ ಮಾಸ್ಕ್ ಅನ್ನು ಕೂಡ ತೆಗೆದು ಬಿಸಾಕಿದ್ದರು. ಅನುವತ್ ಆಡಳಿತಾರೂಢ ಪಾಲಾಂಗ್ ಪಕ್ಷದ ಚೋನಬುರಿ ಪ್ರಾಂತ್ಯದ ಸಂಸದರಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಲೇ ಪಕ್ಷ ಬ್ಯಾಕ್ ಫುಟ್ ಮೇಲೆ ನಿಂತಿದೆ. ಆದರೆ ಇದುವರೆಗೆ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.


Also Read- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು


ಸಂಸದ ನೀಡಿರುವ ಸ್ಪಷ್ಟೀಕರಣ 
ಸಂಸದ ರೋನಾಥೆಪ್ ಅನುವತ್ ಅವರು ನಡೆಸಿರುವ ಈ ಕೃತ್ಯದ ಕುರಿತು ಪತ್ರಕರ್ತರು ಅವರನ್ನು ಪ್ರಶ್ನಿಸಿದ್ದಾಗ, ಮೊದಲು ಬೆಚ್ಚಿಬಿದ್ದ ಅವರು ನಂತರ ಬೇರೊಂದೇ ಕಥೆಯನ್ನು ಪೋಣಿಸಿದ್ದಾರೆ. ತಮಗೆ ಈ ಫೋಟೋಗಳನ್ನು ಕಳುಹಿಸಿದ ವ್ಯಕ್ತಿಯೊಬ್ಬರು ತಮ್ಮ ಬಳಿ ಹಣ ಹಾಗೂ ಸಹಾಯ ಕೋರಿದ್ದರು, ಆ ಕಾರಣದಿಂದ ತಾವು ಅವುಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಫೋಟೋಗಳ ಬ್ಯಾಕ್ ಗ್ರೌಂಡ್ ವೀಕ್ಷಿಸಿ ಯುವತಿ ಸಂಕಷ್ಟದಲ್ಲಿದ್ದಾಳೆಯೇ ಅಥವಾ ಅಪರಾಧಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆಯೇ ಮತ್ತು ಬಲವಂತವಾಗಿ ಅವರು ಆಕೆಯಿಂದ ಈ ರೀತಿಯ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆಯೇ  ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದೆ ಎಂದಿದ್ದಾರೆ.


Also Read - Viral Video: 'ನಾನೂ ಒಂದು ಕಾಲದಲ್ಲಿ ಡ್ರಗ್ ಅಡಿಕ್ಟ್ ಆಗಿದ್ದೆ' ಎಂದ Kangana Ranaut


ಇದೊಂದು ಖಾಸಗಿ ವಿಷಯ ಎಂದ ಸ್ಪೀಕರ್
ಸರ್ಕಾರಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಸಂಸದರಿಗೆ ಅವರು ಮಾಡಿರುವ ಕೃತ್ಯದ ಕುರಿತು ಸ್ಪಷ್ಟೀಕರಣ ನೀಡಲು ಕರೆ ನೀಡಲಾಗಿದೆ. ಆದರೆ, ಅವರ ಮೇಲೆ ಯಾವುದೇ ಕ್ರಮದ ಸಾಧ್ಯತೆಯನ್ನು ಅವರು ಅಲ್ಲಗಳೆದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸ್ಪೀಕರ್ ಚುವಾನ್ ಲೀಕ್ ಪೈ ಇದೊಂದು ವೈಯಕ್ತಿಕ ವಿಚಾರವಾಗಿದೆ ಎಂದಿದ್ದಾರೆ. ಸಂಸತ್ತಿನಲ್ಲಿ ಕುಳಿತಿರುವ ಸಂಸದರು ಏನನ್ನು ನೋಡಬೇಕು ಅಥವಾ ನೋಡಬಾರದು ಎಂಬುದರ ಕುರಿತು  ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ಅವರು ಹೇಳಿದ್ದಾರೆ.