ನವದೆಹಲಿ: ಪ್ರಪಂಚದಾದ್ಯಂತ ಅನೇಕ ಅಸಮಾನ್ಯ ಮತ್ತು ನಿಗೂಢ ಸ್ಥಳಗಳಿವೆ. ಇಂತಹ ಒಂದು ಸ್ಥಳವು ಟರ್ಕಿಯ ಪ್ರಾಚೀನ ನಗರವಾದ ಹೈರಾಪೊಲಿಸ್‌(Ancient City of Hierapolis)ನಲ್ಲಿದೆ. ಇಲ್ಲಿ ಪುರಾತನ ದೇವಾಲಯವಿದ್ದು, ಇದನ್ನು ‘ನರಕದ ಹೆಬ್ಬಾಗಿಲು’ ಎಂದು ಹೇಳಲಾಗುತ್ತದೆ. ಈ ದೇವಾಲಯದ ಬಳಿ ಹೋದವರು ಸಾಯುತ್ತಾರೆಂಬ ನಂಬಿಕೆ ಇದೆ. ಯಾರಾದರೂ ಈ ದೇವಾಲಯವನ್ನು ಪ್ರವೇಶಿಸಿದರೆ ಅವರ ದೇಹವು ವಾಪಸ್ ಬರುವುದಿಲ್ಲವೆಂದು ಹೇಳಲಾಗುತ್ತದೆ.  ಈ ಆಸಕ್ತಿದಾಯಕ ಮತ್ತು ವಿಚಿತ್ರ ಸ್ಥಳದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿರಿ.


COMMERCIAL BREAK
SCROLL TO CONTINUE READING

ದೇವಾಲಯ ಪ್ರವೇಶಿಸಿದ ತಕ್ಷಣ ಸಾವು ಸಂಭವಿಸುತ್ತದೆ!


ScienceAlert.com ಪ್ರಕಾರ, ಈ ಸ್ಥಳವನ್ನು ‘ಗೇಟ್ ಆಫ್ ಹೆಲ್’ (The Gate Of Hell)ಎಂದು ಕರೆಯಲಾಗುತ್ತದೆ. ಏಕೆಂದರೆ ಕಳೆದ ಹಲವು ವರ್ಷಗಳಿಂದ ಇಲ್ಲಿ ನಿಗೂಢ ಸಾವುಗಳು ಸಂಭವಿಸುತ್ತಿವೆ. ಅತ್ಯಂತ ನಿಗೂಢ ವಿಷಯವೆಂದರೆ ದೇವಾಲಯದ ಸಂಪರ್ಕಕ್ಕೆ ಬರುವ ಯಾವುದೇ ಪ್ರಾಣಿ ಕೂಡ ಸಾವನ್ನಪ್ಪುತ್ತದೆ ಎಂದು ಹೇಳಲಾಗಿದೆ. ಗ್ರೀಕ್ ದೇವರ ವಿಷಪೂರಿತ ಉಸಿರು ಎಲ್ಲಾ ಪ್ರಾಣಿಗಳನ್ನು ಕೊಲ್ಲುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಗ್ರೀಕೋ-ರೋಮನ್ ಅವಧಿಯಲ್ಲಿ ಈ  ದೇವಾಲಯ ಪ್ರವೇಶಿಸಿದ ಪ್ರತಿಯೊಬ್ಬರನ್ನೂ ಶಿರಚ್ಛೇದ ಮಾಡಲಾಗಿತ್ತು ಎಂದು ವರದಿಯಾಗಿದೆ.


ಇದನ್ನೂ ಓದಿ: Subhash Chandra Bose: ನೇತಾಜಿಯವರ ಪರಂಪರೆ 'ಮರುಶೋಧಿಸಲು' ತೈವಾನ್ ಮಹತ್ವದ ಹೆಜ್ಜೆ


‘ನರಕದ ಹೆಬ್ಬಾಗಿಲು’ ಎನ್ನುವ ಜನರು  


ಈ ದೇವಾಲಯದ ಸಂಪರ್ಕದಿಂದ ಜನರು, ಪ್ರಾಣಿಗಳು ಮತ್ತು ಪಕ್ಷಿಗಳು ಸಹ ಸಾಯುತ್ತವೆ ಎಂದು ಹೇಳಲಾಗುತ್ತದೆ. ಇಲ್ಲಿ ನಡೆಯುತ್ತಿರುವ ನಿರಂತರ ಸಾವುಗಳ ಕಾರಣ ಜನರು ಈ ದೇವಾಲಯದ ದ್ವಾರವನ್ನು ‘ನರಕದ ಹೆಬ್ಬಾಗಿಲು’ ಅಂತಾ ಕರೆಯುತ್ತಾರೆ. ಗ್ರೀಕ್ ಮತ್ತು ರೋಮನ್ ಕಾಲ(Greek and Roman times)ದಲ್ಲೂ ಜನರು ಸಾವಿನ ಭಯದಿಂದ ಇಲ್ಲಿಗೆ ಹೋಗಲು ಹೆದರುತ್ತಿದ್ದರಂತೆ.


ರಹಸ್ಯ ಭೇದಿಸಿದ ವಿಜ್ಞಾನಿಗಳು ಹೇಳಿದ್ದೇನು..?


ಈ ದೇವಾಲಯದ ಸಮೀಪವಿರುವ ಜನರ ನಿಗೂಢ ಸಾವಿನ(Death Mystery) ರಹಸ್ಯವನ್ನು ವಿಜ್ಞಾನಿಗಳು ಭೇದಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ ದೇವಾಲಯದ ಅಡಿಯಲ್ಲಿ ವಿಷಕಾರಿ ಕಾರ್ಬನ್ ಡೈಆಕ್ಸೈಡ್ ಅನಿಲ ನಿರಂತರವಾಗಿ ಹೊರಬರುತ್ತದೆ. ಮನುಷ್ಯ, ಪ್ರಾಣಿ, ಪಕ್ಷಿಗಳ ಸಂಪರ್ಕಕ್ಕೆ ಬಂದ ತಕ್ಷಣ ಸಾಯುವುದು ಇದೇ ಕಾರಣಕ್ಕೆ ಅಂತಾ ಅವರು ಹೇಳಿದ್ದಾರೆ.


ಇದನ್ನೂ ಓದಿ: Trending News: Internet ನಲ್ಲಿ ಎಲ್ಲರ ತಲೆ ಗಿರಕಿ ಹೊಡೆಸಿದ 7 ಆನೆಗಳ ಫೋಟೋ, ನಿಮಗೆಷ್ಟು ಆನೆಗಳು ಕಾಣಿಸುತ್ತಿವೆ?


ಕೀಟಗಳು ಸಹ ಸಾಯುತ್ತವಂತೆ!


ದೇವಾಲಯದ ಅಡಿಯಲ್ಲಿರುವ ಗುಹೆಯಲ್ಲಿ ವಿಜ್ಞಾನಿಗಳು ಹೆಚ್ಚಿನ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಅನ್ನು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಕೇವಲ 10 ಪ್ರತಿಶತದಷ್ಟು ಇಂಗಾಲದ ಡೈಆಕ್ಸೈಡ್ ವ್ಯಕ್ತಿಯನ್ನು 30 ನಿಮಿಷಗಳಲ್ಲಿ ಕೊಲ್ಲುತ್ತದೆ. ಆದರೆ ಈ ದೇವಾಲಯದ ಗುಹೆಯೊಳಗೆ ವಿಷಕಾರಿ ಅನಿಲದ ಪ್ರಮಾಣವು 91 ಪ್ರತಿಶತದಷ್ಟಿದೆ. ಹಾಗಾಗಿಯೇ ಇಲ್ಲಿಗೆ ಬರುವ ಕೀಟ, ಕ್ರಿಮಿ, ಪ್ರಾಣಿ, ಪಕ್ಷಿಗಳು ಸಂಪರ್ಕಕ್ಕೆ ಬಂದ ತಕ್ಷಣ ಸಾಯುತ್ತವೆ ಅಂತಾ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.