Golden Blood: ವಿಶ್ವದಲ್ಲಿ ಕೇವಲ 43 ಜನರಲ್ಲಿದೆ ಚಿನ್ನದ ರಕ್ತ! 'Golden Blood' ಸಿಗುವುದು ಅಪರೂಪ ಯಾಕೆ?

Golden Blood: ವಿಶ್ವದ ಅತ್ಯಂತ ಅಪರೂಪದ ರಕ್ತದ (Rarest Blood Type) ಪ್ರಕಾರ ಎಂದರೆ ಅದುವೇ ಗೋಲ್ಡನ್ ಬ್ಲಡ್. ವಿಜ್ಞಾನಿಗಳ ಪ್ರಕಾರ, ಈ ರಕ್ತವು ವಿಶ್ವದಲ್ಲಿ 50 ಕ್ಕಿಂತ ಕಡಿಮೆ ಜನರಲ್ಲಿ ಕಂಡುಬರುತ್ತದೆ.

Last Updated : Jan 21, 2022, 09:54 PM IST
  • ವಿಶ್ವದಲ್ಲಿ ಕೇವಲ 43 ಜನರ ಬಳಿ ಇದೆ 'Golden Blood'
  • ಈ ಕುರಿತು ಮೊಟ್ಟಮೊದಲ ಬಾರಿಗೆ 1961 ರಲ್ಲಿ ತಿಳಿದಿದೆ.
  • ಆಸ್ಟ್ರೇಲಿಯಾದ ಓರ್ವ ಮಹಿಳೆಯ ರಕ್ತದ ತಪಾಸಣೆಯ ವೇಳೆ ಈ ಅಂಶ ಬೆಳಕಿಗೆ ಬಂದಿದೆ.
Golden Blood: ವಿಶ್ವದಲ್ಲಿ ಕೇವಲ 43 ಜನರಲ್ಲಿದೆ ಚಿನ್ನದ ರಕ್ತ! 'Golden Blood' ಸಿಗುವುದು ಅಪರೂಪ ಯಾಕೆ? title=

ನವದೆಹಲಿ: Golden Blood - ವಿಶ್ವದ ಅತ್ಯಂತ ಅಪರೂಪದ ರಕ್ತದ  (Rarest Blood Type) ಪ್ರಕಾರವೆಂದರೆ ಅದುವೇ ಚಿನ್ನದ ರಕ್ತ. ವಿಜ್ಞಾನಿಗಳ ಪ್ರಕಾರ, ಈ ರಕ್ತವು ಪ್ರಪಂಚದಲ್ಲಿ 50 ಕ್ಕಿಂತ ಕಡಿಮೆ ಜನರಲ್ಲಿ ಕಂಡುಬರುತ್ತದೆ. Rh ಅಂಶವು ಶೂನ್ಯವಾಗಿರುವ (Null) ಜನರ ದೇಹದಲ್ಲಿ ಚಿನ್ನದ ರಕ್ತವು ಇರುತ್ತದೆ. ಇಂತಹ ಜನರು ತಮ್ಮ Rh ವ್ಯವಸ್ಥೆಯಲ್ಲಿ 61 ಸಂಭಾವ್ಯ ಪ್ರತಿಜನಕಗಳನ್ನು ಅಥವಾ ಆಂಟಿಜೆನ್ಸ್ ಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಈ ರಕ್ತದ ಗುಂಪಿನೊಂದಿಗೆ (Blood Group) ವಾಸಿಸುವ ಜನರಿಗೆ ಅಪಾಯಕಾರಿ ಪರಿಸ್ಥಿತಿಎದುರಾಗುತ್ತದೆ. ಗೋಲ್ಡನ್ ರಕ್ತದ ಗುಂಪು ಅಥವಾ Rh ಶೂನ್ಯ ರಕ್ತದ ಗುಂಪಿನಲ್ಲಿ, ಕೆಂಪು ರಕ್ತ ಕಣದಲ್ಲಿ (RBC) ಯಾವುದೇ Rh ಆಂಟಿಜೇನ ಗಳು (ಪ್ರೋಟೀನ್) ಇರುವುದಿಲ್ಲ.

ಗೋಲ್ಡನ್ ರಕ್ತದ (Blood Type) ಗುಂಪಿನ ಚಿಂತೆಗೀಡು ಮಾಡುವ ವಿಷಯವೆಂದರೆ ಈ ಜನರು ರಕ್ತ ವರ್ಗಾವಣೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ RH ಶೂನ್ಯವನ್ನು  ದಾನ ಮಾಡುವುದು ಮತ್ತು ಸ್ವೀಕರಿಸುವುದು ಕಷ್ಟ. Rh ನಲ್ ಹೊಂದಿರುವ ವ್ಯಕ್ತಿಗೆ ರಕ್ತದ ಅಗತ್ಯವಿದ್ದಾಗ, ಅವನು ಅಥವಾ ಅವಳು ಪ್ರಪಂಚದಾದ್ಯಂತ ಸಾಮಾನ್ಯ Rh ನಲ್ ದಾನಿಗಳ ಸಣ್ಣ ಜಾಲವನ್ನು ಅವಲಂಬಿಸಬೇಕಾಗುತ್ತದೆ.

ಜಗತ್ತಿನಲ್ಲಿ ಕೇವಲ 43 ಜನರು ಮಾತ್ರ ಈ ರಕ್ತವನ್ನು ಹೊಂದಿದ್ದಾರೆ
bigthink.com ನಲ್ಲಿ ಪ್ರಕಟಗೊಂಡ ಮಾಹಿತಿಯ ಪ್ರಕಾರ, ಗೋಲ್ಡನ್ ರಕ್ತವು ವಿಶ್ವದಲ್ಲಿ 43 ಜನರಲ್ಲಿ ಮಾತ್ರ ಕಂಡುಬರುತ್ತದೆ. ಇದರ ಬಗ್ಗೆ ಮೊದಲ ಬಾರಿಗೆ 1961 ರಲ್ಲಿ ತಿಳಿದುಬಂದಿದೆ. ಆಸ್ಟ್ರೇಲಿಯಾದ ಗರ್ಭಿಣಿ ಮಹಿಳೆಯ ರಕ್ತವನ್ನು ಪರೀಕ್ಷಿಸಿದಾಗ ಅವಳಲ್ಲಿ ಈ ರಕ್ತ ಇರುವುದು ಪತ್ತೆಯಾಗಿತ್ತು.

ಇದನ್ನೂ ಓದಿ-Pig Kidneys Transplant In Men: ಹೃದಯ ಬಳಿಕ ಇದೀಗ Brain Dead ಆಗಿರುವ ವ್ಯಕ್ತಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಿ ಇತಿಹಾಸ ಬರೆದ US ವೈದ್ಯರು

ವರದಿಯ ಪ್ರಕಾರ, ವಿಶ್ವಾದ್ಯಂತ ಈ ರಕ್ತದ ಗುಂಪಿನ ಸಕ್ರಿಯ ದಾನಿಗಳ ಸಂಖ್ಯೆ ಕೇವಲ 9 ಮಾತ್ರ ಇದೆ. ಈ ಕಾರಣಕ್ಕಾಗಿಯೇ ಇದು ವಿಶ್ವದಲ್ಲೇ ಅತ್ಯಂತ ಬೆಲೆಬಾಳುವ ರಕ್ತದ ಗುಂಪು ಮತ್ತು ಇದನ್ನು ಗೋಲ್ಡನ್ ಬ್ಲಡ್ ಎಂದು ಹೆಸರಿಸಲಾಗಿದೆ. ಗೋಲ್ಡನ್ ರಕ್ತದ ಗುಂಪನ್ನು ಹೊಂದಿರುವ ವ್ಯಕ್ತಿಯು ಎಲ್ಲಾ Rh ಪ್ರತಿಜನಕಗಳನ್ನು ಹೊಂದಿರುವುದಿಲ್ಲ, ಆದರೆ Rh ಋಣಾತ್ಮಕ ರಕ್ತದ ಗುಂಪನ್ನು ಹೊಂದಿರುವ ವ್ಯಕ್ತಿಯು RhD ಆಂಟಿಜೇನ ಹೊಂದಿರುವುದಿಲ್ಲ. ಗೋಲ್ಡನ್ ರಕ್ತದ ಗುಂಪು ಆನುವಂಶಿಕ ರೂಪಾಂತರದ ಪರಿಣಾಮವಾಗಿದೆ.

ಇದನ್ನೂ ಓದಿ-Plan ಮಾಡಿ ಪತ್ನಿಯ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ ಮಾಡಿಸಿದ ಪತಿ! ಕಾರಣ ಬೆಚ್ಚಿಬೀಳಿಸುವಂತಿದೆ

ಈ ಸಂಗತಿಯ ಅಪಾಯ ಇರುತ್ತದೆ
ಗೋಲ್ಡನ್ ಬ್ಲಡ್ ಗ್ರೂಪ್ ಹೊಂದಿರುವ ಜನರು ಕಡಿಮೆ ಹಿಮೋಗ್ಲೋಬಿನ್ ಮಟ್ಟದಿಂದ ದೇಹದಲ್ಲಿ ಹಿಮೋಲಿಟಿಕ್ ಅನೀಮಿಯಾ, ಪಲ್ಲರ್ ಮತ್ತು ಆಯಾಸವನ್ನು ಹೊಂದಿರುವ ಸಾಧ್ಯತೆ ಇದೆ. ಇಂತಹ  ಪರಿಸ್ಥಿತಿಯಲ್ಲಿ, ಕಡಿಮೆ ಕೆಂಪು ರಕ್ತ ಕಣಗಳ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಜನರು ರಕ್ತ ವರ್ಗಾವಣೆಯ (Blood Transfusion) ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಜ್ಞಾನಿಗಳ ಪ್ರಕಾರ, ತಾಯಿ Rh ಶೂನ್ಯವಾಗಿದ್ದರೆ ಮತ್ತು ಮಗುವಿಗೆ Rh- ಧನಾತ್ಮಕ ರಕ್ತದ ಗುಂಪನ್ನು ಹೊಂದಿದ್ದರೆ, ನಂತರ ಗರ್ಭಪಾತದ ಅಪಾಯವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಇದನ್ನೂ ಓದಿ-Time Is Money: ವೃದ್ಧಾಪ್ಯದಲ್ಲಿ ಸಹಾಯ ಮತ್ತು ಬೆಂಬಲಕ್ಕಾಗಿ Bank ನಲ್ಲಿ Time ಠೇವಣಿ ಮಾಡಿ ! ಏನಿದು ಹೊಸ ಯೋಜನೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News