ನವದೆಹಲಿ: ವಿಶ್ವದಲ್ಲೇ ಹೆಚ್ಚು ಜನಪ್ರಿಯವಾಗಿದ್ದ ಟಿಕ್‌ಟಾಕ್ (TikTok) ಅನೇಕ ದೇಶಗಳಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿದೆ ಮತ್ತು ಯುಎಸ್ ಸರ್ಕಾರದೊಂದಿಗೆ ಉದ್ವಿಗ್ನತೆಯನ್ನು ಎದುರಿಸುತ್ತಿದೆ. ಆದರೆ ಈ ಮಧ್ಯೆ ಅದು ದೊಡ್ಡ ಘೋಷಣೆ ಮಾಡಿದೆ.  $ 498 ಮಿಲಿಯನ್ ವೆಚ್ಚದ ಐರ್ಲೆಂಡ್‌ನಲ್ಲಿ (Ireland) ಯುರೋಪಿನಲ್ಲಿ ತನ್ನ ಮೊದಲ ದತ್ತಾಂಶ ಕೇಂದ್ರವನ್ನು ತೆರೆಯುವುದಾಗಿ ಟಿಕ್‌ಟಾಕ್ ಹೇಳಿದೆ.


COMMERCIAL BREAK
SCROLL TO CONTINUE READING

ಈ ದತ್ತಾಂಶ ಕೇಂದ್ರವು 2022 ರ ವೇಳೆಗೆ ಪ್ರಾರಂಭವಾಗಲಿದೆ ಎಂದು ಟಿಕ್‌ಟಾಕ್ ಭರವಸೆ ವ್ಯಕ್ತಪಡಿಸಿದೆ. ಈ ಕ್ರಮವು 'ನೂರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಟಿಕ್‌ಟಾಕ್ ಬಳಕೆದಾರರ ಡೇಟಾದ ಸುರಕ್ಷತೆ ಮತ್ತು ರಕ್ಷಣೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಟಿಕ್‌ಟಾಕ್‌ನ ಮುಖ್ಯ ಜಾಗತಿಕ ಮಾಹಿತಿ ಭದ್ರತಾ ಅಧಿಕಾರಿ ರೋಲ್ಯಾಂಡ್ ಕ್ಲೋಟಿಯರ್ ಹೇಳಿದ್ದಾರೆ.


ಟಿಕ್‌ಟಾಕ್‌ನ ಕೊರತೆ ನೀಗಿಸಲು ಬಂದಿದೆ ರೀಲ್ಸ್, ಈಗ ಈ ರೀತಿ ಮಾಡಿ ಶಾರ್ಟ್ ವಿಡಿಯೋ


ಚೀನೀ ಕಂಪನಿಗೆ ಅಮೆರಿಕ ಎಚ್ಚರಿಕೆ:
ಸೆಪ್ಟೆಂಬರ್ 15 ರೊಳಗೆ ತನ್ನ ಯುಎಸ್ ಕಾರ್ಯಾಚರಣೆಯನ್ನು ಅಮೆರಿಕದ ಕಂಪನಿಗೆ ಮಾರಾಟ ಮಾಡದಿದ್ದರೆ, ಅದು ಆ್ಯಪ್ ಅನ್ನು ದೇಶದಲ್ಲಿ ನಿಷೇಧಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಚೀನಾ ಸಂಸ್ಥೆಗೆ ಬೆದರಿಕೆ ಹಾಕಿದ ನಂತರ ಟಿಕ್‌ಟಾಕ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಟ್ರಂಪ್ ಆಡಳಿತವು ಟಿಕ್‌ಟಾಕ್ ಅನ್ನು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಬಣ್ಣಿಸಿದ್ದು, ಕಂಪನಿಯು ಅಮೆರಿಕನ್ನರ ವೈಯಕ್ತಿಕ ಡೇಟಾವನ್ನು ಚೀನಾದ ಗುಪ್ತಚರ ಸೇವೆಗಳೊಂದಿಗೆ ಹಂಚಿಕೊಳ್ಳಬಹುದು ಎಂದು ಹೇಳಿದೆ. ಈ ಅಪ್ಲಿಕೇಶನ್ ವಿಶ್ವಾದ್ಯಂತ ಒಂದು ಬಿಲಿಯನ್ ಬಳಕೆದಾರರನ್ನು ಹೊಂದಿದೆ.


ಆದರೆ ಈ ವಿಡಿಯೋ ಹಂಚಿಕೆ ಆ್ಯಪ್ ಯುಎಸ್ ಸರ್ಕಾರ ಎತ್ತಿರುವ ಆರೋಪಗಳನ್ನು ನಿರಾಕರಿಸಿದೆ. ಯುಎಸ್ ಟೆಕ್ ದೈತ್ಯ ಮೈಕ್ರೋಸಾಫ್ಟ್ ಚೀನಾದ (China) ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನ ಯುಎಸ್ ಕಾರ್ಯಾಚರಣೆಯನ್ನು ಖರೀದಿಸಲು ಟಿಕ್‌ಟಾಕ್‌ನ  ಮೂಲ ಕಂಪನಿ ಬೈಟ್‌ಡ್ಯಾನ್ಸ್‌ನೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. ಆದರೆ ಮಾರಾಟಕ್ಕೆ ಸಂಬಂಧಿಸಿದ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ.


ಭಾರತದ ನಿರ್ಧಾರದಿಂದ ವಿಶ್ವದಾದ್ಯಂತ ಗುರಿಯಿಟ್ಟಿದ್ದ ಚೀನಾದ ಟಿಕ್‌ಟಾಕ್‌ಗೆ ಸಂಕಷ್ಟ


'ನಮ್ಮ ಡೇಟಾ ಕೇಂದ್ರವು ಕಾರ್ಯನಿರ್ವಹಿಸಿದಾಗ ಯುರೋಪಿಯನ್ ಬಳಕೆದಾರರ ಡೇಟಾವನ್ನು ಈ ಹೊಸ ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ. ನಮ್ಮ ವೇಗವಾಗಿ ವಿಸ್ತರಿಸುತ್ತಿರುವ ಯುರೋಪಿಯನ್ ಕಾರ್ಯಾಚರಣೆಗಳಲ್ಲಿ ಐರ್ಲೆಂಡ್ ಈಗಾಗಲೇ ಪ್ರಮುಖ ಪಾತ್ರ ವಹಿಸಿದೆ ಎಂದು ಐರ್ಲೆಂಡ್‌ನಲ್ಲಿ ಕೇಂದ್ರವನ್ನು ಪ್ರಾರಂಭಿಸುವ ಬಗ್ಗೆ ಕ್ಲೋಟಿಯರ್ ಹೇಳಿದರು.


ಏತನ್ಮಧ್ಯೆ ಅಮೆರಿಕದ ಮೊಬೈಲ್ ವಾಹಕಗಳು ಮತ್ತು ಫೋನ್ ತಯಾರಕರ ಆಪ್ ಸ್ಟೋರ್‌ಗಳಲ್ಲಿ ವಿಶ್ವಾಸಾರ್ಹವಲ್ಲದ ಚೀನೀ ಆ್ಯಪ್‌ಗಳನ್ನು ನಿಷೇಧಿಸಲು ಟ್ರಂಪ್ ಸರ್ಕಾರ ಬಯಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.


"ಚೀನಾ ಮೂಲದ ಪೋಷಕ ಕಂಪನಿಗಳೊಂದಿಗಿನ  ಟಿಕ್‌ಟಾಕ್‌, ವೀಚಾಟ್ ನಂತಹ ಇತರ ಅಪ್ಲಿಕೇಶನ್‌ಗಳು ಯುಎಸ್ ನಾಗರಿಕರ ಖಾಸಗಿ ಡೇಟಾಗೆ ಬೆದರಿಕೆಯಾಗಿದೆ" ಎಂದು ಪೊಂಪಿಯೊ ತಿಳಿಸಿದರು.