ಇಂಗ್ಲೆಂಡ್ : ಟಿಕ್ ಟಾಕ್ (Tiktok)ಎಂದಾಕ್ಷಣ ಜೋಕ್ ಗಳು, ಕೆಲ ಮನರಂಜನಾ ವಿಡಿಯೋಗಳು ಕಣ್ಣ ಮುಂದೆ ಬರುತ್ತವೆ. ಸಾಮಾನ್ಯವಾಗಿ ಟಿಕ್ ಟಾಕ್ ಆಪನ್ನು ಮನರಂಜನೆಗಾಗಿಯೇ ಬಳಸುತ್ತಾರೆ. ಆದರೆ ಇಲ್ಲೊಬ್ಬ ಯುವತಿ ತನಗೆ ಕ್ಯಾನ್ಸರ್ (Cancer) ಇದೆ ಎಂಬುದನ್ನು ಟಿಕ್ ಟಾಕ್ ವಿಡಿಯೋ ಮೂಲಕವೇ ಕಂಡುಕೊಂಡಿದ್ದಾಳೆ.  ಇದೀಗ ಯುವತಿ ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾಳೆ. 


COMMERCIAL BREAK
SCROLL TO CONTINUE READING

ಬ್ರಿಟನಿನಲ್ಲಿ (Britain) ವಾಸಿಸುವ 22 ವರ್ಷದ ಕೇಟೀ ಕ್ಲೇಡನ್, ತನಗೆ ಸ್ತನ ಕ್ಯಾನ್ಸರ್ ಇರುವುದನ್ನು ಟಿಕ್ ಟಾಕ್ ವಿಡಿಯೋ ನೋಡಿ ಕಂಡುಕೊಂಡಿದ್ದಾರೆ.  ಕೇಟೀ ಕ್ಲೈಡೆನ್ ಬಾರ್ನ್ಸ್‌ಲಿಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಟಿಕ್ ಟಾಕ್  (Tiktok)ವೀಡಿಯೊವನ್ನು ನೋಡುತ್ತಿದ್ದ  ವೇಳೆ, ಸ್ತನ ಕ್ಯಾನ್ಸ ರ್ ಗೆ ಸಂಬಂಧಿಸಿದ ವಿಡಿಯೋವನ್ನು ಕೇಟೀ ಕ್ಲೈಡೆನ್ ಗಮನಿಸಿದ್ದಾರೆ. ವಿಡಿಯೋ ನೋಡಿದ ಕೇಟೀ ಕ್ಲೈಡೆನ್ ಗೆ ತನಗೆ ಕ್ಯಾನ್ಸರ್ ನ ಲಕ್ಷಣಗಳಿರುವುದು ಗೊತ್ತಾಗಿದೆ. ಕೂಡಲೇ ಯುವತಿ ವೈದ್ಯರನ್ನು ಸಂಪರ್ಕಿಸಿದ್ದಾರೆ. ತಪಾಸಣೆಯ ವೇಳೆ ಯುವತಿಗೆ ಸ್ತನ ಕ್ಯಾನ್ಸರ್ (cancer) ಇರುವುದು ದೃಢ ಪಟ್ಟಿದೆ. 


ಇದನ್ನೂ ಓದಿ : ವಿಸ್ಮಯ ..! ಕೇಸರಿ ಬಣ್ಣಕ್ಕೆ ತಿರುಗಿತು ಬೆಳ್ಳಗೆ ಕಂಗೊಳಿಸುತ್ತಿದ್ದ ಹಿಮ …


ತನಗೆ ಕ್ಯಾನ್ಸರ್ ಇರುವ ವಿಚಾರ ತಿಳಿದಾಗ ಒಂದು ಕ್ಷಣಕ್ಕೆ ಕೇಟಿಕ್ಲೇಡನ್ ಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಂತರ ಧೈರ್ಯ ಮಾಡಿಕೊಂಡ ಕೇಟಿ, ಚಿಕಿತ್ಸೆಗೆ (Treatment) ಒಳಗಾಗಲು ನಿರ್ಧರಿಸಿದ್ದಾರೆ.  ಈ ಬಗ್ಗೆ ಮಾಹಿತಿ ನೀಡಿದ ಯುವತಿ ಕೇಟಿ ಕ್ಲೇಡನ್, ನನಗೆ ಕ್ಯಾನ್ಸರ್ ಬರಬಹುದು ಎಂದು ಭಾವಿಸಿರಲಿಲ್ಲ. ನನ್ನ ವಯಸ್ಸಿನವರಿಗೂ ಕ್ಯಾನ್ಸರ್ ಬರಬಹುದು ಎಂದು ಗೊತ್ತಿರಲಿಲ್ಲ ಎಂದಿರಲಿಲ್ಲ. 


ಕೇಟಿ ಈಗ  ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದು, ಕ್ಯಾನ್ಸರ್ (cancer) ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.  


ಇದನ್ನೂ ಓದಿ : Indonesiaದಲ್ಲಿ ರಸ್ತೆಗಳ ಮೇಲೆ ಹರಿದ ರಕ್ತ ? 'ರಕ್ತದ ನೆರೆ' ಹಿಂದಿನ ಸತ್ಯಾಸತ್ಯತೆ ಏನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.