ವಿಸ್ಮಯ ..! ಕೇಸರಿ ಬಣ್ಣಕ್ಕೆ ತಿರುಗಿತು ಬೆಳ್ಳಗೆ ಕಂಗೊಳಿಸುತ್ತಿದ್ದ ಹಿಮ …

ಪ್ರಪಂಚದ ಅನೇಕ ದೇಶಗಳಲ್ಲಿ ಹಿಮಪಾತವಾಗುತ್ತಿದೆ. ಹಿಮಪಾತವಾಗುವ ಪ್ರದೇಶಗಳಲ್ಲಿ ಎತ್ತ ನೋಡಿದರೂ ಪರ್ವತಗಳ ಮೇಲೆ ಬಿಳಿ ಹಾಳೆ ಹೊದ್ದಂತೆ ಕಾಣುತ್ತದೆ.

Written by - Ranjitha R K | Last Updated : Feb 8, 2021, 05:54 PM IST
  • ಸ್ವಿಟ್ಜರ್ಲೆಂಡ್‌ನ ವಾಲ್ ಫೆರೆಟ್‌ನಲ್ಲಿ ಬಣ್ಣ ಬದಲಾಯಿಸಿದ ಮಂಜು
  • ರಾತ್ರಿ ಬೆಳಗಾಗುವುದರಲ್ಲಿ ಕಿತ್ತಳೆ ಬಣ್ಣಕ್ಕೆ ತಿರುಗಿದ ಮಂಜು
  • ಕಿತ್ತಳೆದ ಬಣ್ಣದ ಮಂಜು ಕಂಡು ಆಶ್ಚರ್ಯಗೊಂಡ ಜನ
ವಿಸ್ಮಯ ..! ಕೇಸರಿ ಬಣ್ಣಕ್ಕೆ ತಿರುಗಿತು ಬೆಳ್ಳಗೆ ಕಂಗೊಳಿಸುತ್ತಿದ್ದ ಹಿಮ … title=
ರಾತ್ರಿ ಬೆಳಗಾಗುವುದರಲ್ಲಿ ಕಿತ್ತಳೆ ಬಣ್ಣಕ್ಕೆ ತಿರುಗಿದ ಮಂಜು

ಸ್ವಿಟ್ಜರ್ಲೆಂಡ್ : ಪ್ರಪಂಚದ ಅನೇಕ ದೇಶಗಳಲ್ಲಿ ಹಿಮಪಾತವಾಗುತ್ತಿದೆ. ಹಿಮಪಾತವಾಗುವ ಪ್ರದೇಶಗಳಲ್ಲಿ ಎತ್ತ ನೋಡಿದರೂ ಪರ್ವತಗಳ ಮೇಲೆ ಬಿಳಿ ಹಾಳೆ ಹೊದ್ದಂತೆ ಕಾಣುತ್ತದೆ. ಬೆಟ್ಟ ಪ್ರದೇಶಗಳಲ್ಲಿ ಸಂಭವಿಸುವ ಹಿಮಪಾತ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗಳನ್ನು (Tourist) ತನ್ನತ್ತ ಸೆಳೆಯುತ್ತದೆ.  ಸಾಮಾನ್ಯವಾಗಿ ನಮಗೆ ತಿಳಿದಂತೆ ಮಂಜು ಅಥವಾ ಹಿಮ ಅಂದರೆ ಬಿಳಿಯ ಬಣ್ಣ. ಆದರೆ, ಬಿಳಿ ಮಂಜು ಇದ್ದಕ್ಕಿದ್ದಂತೆ ಕಿತ್ತಳೆ ಬಣ್ಣಕ್ಕೆ ತಿರುಗಿದರೆ?  ಸ್ವಿಟ್ಜರ್ಲೆಂಡ್‌ನ ವಾಲ್ ಫೆರೆಟ್‌ನಲ್ಲಿ(Val Ferret) ಇಂಥಹ ಅಚ್ಚರಿಯೊಂದು ನಡೆದಿದೆ. 

ಸ್ವಿಟ್ಜರ್ಲೆಂಡ್‌ನ ವಾಲ್ ಫೆರೆಟ್‌ನಲ್ಲಿ (Val Ferret) ಭಾರೀ ಹಿಮಪಾತವಾಗಿದೆ. ಹಿಮಪಾತವೆಂಬುದು ಇಲ್ಲಿ ಸಾಮಾನ್ಯ. ಆದರೆ ಈ ಬಾರಿಯ ಹಿಮಪಾತ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಬಿಳಿ ಹಾಳೆ ಹೊದ್ದಂತಿದ್ದ ಹಿಮ  (Ice) ರಾತ್ರಿ ಬೆಳಗಾಗುವುದರೊಳಗೆ ಕಿತ್ತಳೆ (Orange) ಬಣ್ಣಕ್ಕೆ ತಿರುಗಿದೆ. ಬೆಳಗ್ಗೆ  ಸ್ಕೀ ಮಾಡಲು ಪ್ರವಾಸಿಗರು ಹೊರಟಾಗ  ಆಶ್ಚರ್ಯ ಕಂಡು ಬೆರಗಾಗಿದ್ದಾರೆ. 

ಇದನ್ನೂ ಓದಿ : Indonesiaದಲ್ಲಿ ರಸ್ತೆಗಳ ಮೇಲೆ ಹರಿದ ರಕ್ತ ? 'ರಕ್ತದ ನೆರೆ' ಹಿಂದಿನ ಸತ್ಯಾಸತ್ಯತೆ ಏನು?

ಸ್ವಿಟ್ಜರ್ಲೆಂಡ್‌ನಿಂದ 3000 ಕಿ.ಮೀ ದೂರದಲ್ಲಿರುವ ಸಹಾರಾ ಮರುಭೂಮಿಯಿದೆ (Sahara Desert). ಸಹರಾ ಮರುಭೂಮಿಯಲ್ಲಿ ಭಾರೀ ಪ್ರಮಾಣದ ಚಂಡಮಾರುತ ಎದ್ದಿದೆ.  ಚಂಡಮಾರುತದ ಪರಿಣಾಮ, ಮರಳು (Sand) ಆಫ್ರಿಕಾದಿಂದ ಸ್ವಿಟ್ಜರ್‌ಲ್ಯಾಂಡ್‌ವರೆಗೆ ತಲುಪಿದೆ.  ಮರಳಿನ ಪದರವು ಮಂಜುಗಡ್ಡೆಯ ಮೇಲೆ  ಹರಡಿಕೊಂಡಿದೆ. ಡೈಲಿಮೇಲ್ ವರದಿಯ ಪ್ರಕಾರ, ಸಹಾರಾ ಮರುಭೂಮಿಯಲ್ಲಿನ ಚಂಡಮಾರುತದಿಂದಾಗಿ (Cyclone) ಸ್ವಿಟ್ಜರ್ಲೆಂಡ್‌ನ ವಾಲ್ ಫೆರೆಟ್‌ನಲ್ಲಿನ ಮಂಜುಗಡ್ಡೆಯ ಬಣ್ಣವು ಬದಲಾಯಿತು ಎನ್ನಲಾಗಿದೆ. ಬಿಳಿ ಬಣ್ಣದ ಮಂಜು ಕಿತ್ತಳೆ ಬಣ್ಣಕ್ಕೆ ತಿರುಗಲು ಸಹರಾ ಮರುಭೂಮಿಯ ಮರಳು ಕಾರಣ  ಎಂದು ಹೇಳಲಾಗಿದೆ.

ಮಂಜುಗಡ್ಡೆಯ ಬಣ್ಣ ಬದಲಾಗಿರುವುದನ್ನು ಗಮನಿಸಿದ ಜನರು ಆಶ್ಚರ್ಯಚಕಿತರಾಗುತ್ತಾರೆ. ಇನ್ನು ಕೆಲವರು ಕಿತ್ತಳೆ ಬಣ್ಣದ ಮಂಜನ್ನು ತಿನ್ನುವ ಪ್ರಯತ್ನವನ್ನೂ ಮಾಡಿದ್ದಾರೆ. 
ಆದರೆ ಇದಕ್ಕೆ ಕಾರಣ ಏನು ಎನ್ನುವುದು ಗೊತ್ತಾದ ಮೇಲೆ ಮತ್ತೆ ಮೋಜು ಮಸ್ತಿಯನ್ನು ಮುಂದುವರೆಸಿದ್ದಾರೆ.  ಜನರು ಕಿತ್ತಳೆ ಬಣ್ಣದ ಮಂಜುಗಡ್ಡೆಯೊಂದಿಗೆ ಫೋಟೋಗಳನ್ನು ತೆಗೆದುಕೊಂಡು ಎಂಜಾಯ್ ಮಾಡುತ್ತಿರುವುದು ಕಂಡು ಬಂತು. 

ಇದನ್ನೂ ಓದಿ : 'Made In India' Covid-19 ಲಸಿಕೆಯ ಕ್ಯೂನಲ್ಲಿವೆ ವಿಶ್ವದ 25 ರಾಷ್ಟ್ರಗಳು: ಜಯಶಂಕರ್

ಸಹಾರಾ ಮರುಭೂಮಿಯಲ್ಲಿನ ಚಂಡಮಾರುತದ  ಪ್ರಭಾವವು ಸ್ವಿಟ್ಜರ್ಲೆಂಡ್‌ನ ಮೇಲೆ ಮಾತ್ರವಲ್ಲ, ಫ್ರಾನ್ಸ್‌ನ (France) ಮೇಲೂ ಆಗಿದೆ. ಫ್ರಾನ್ಸಿನಲ್ಲಿಆಕಾಶದ ಬಣ್ಣ ಕಿತ್ತಳೆ ಬಣ್ಣಕ್ಕೆ ತಿರುಗಿದೆ.  ಮತ್ತು ವಾಹನಗಳಲ್ಲಿ ಧೂಳಿನ ಪದರ ಕಾಣಿಸಿಕೊಂಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News