ಇಸ್ಲಾಮಾಬಾದ್ / ಕರಾಚಿ: ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಗಗನಕ್ಕೇರುತ್ತಿದೆ. ಈದ್ ಮಿಲಾದ್ ಹಬ್ಬಕ್ಕೂ ಒಂದು ದಿನ ಮೊದಲು, ಅಂದರೆ, ಶನಿವಾರ ಅದರ ಬೆಲೆ ಒಂದೇ ದಿನದಲ್ಲಿ  ಪ್ರತಿ ಕೆ.ಜಿ.ಗೆ 160 ರೂ. ನಿಂದ  320 ರೂ.ಗೆ ಏರಿತು. ಎರಡು ದಿನಗಳ ನಂತರ, ಟೊಮೆಟೊವನ್ನು ಸೋಮವಾರ 140 ರಿಂದ 170 ರೂಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. 


COMMERCIAL BREAK
SCROLL TO CONTINUE READING

ಟೊಮೆಟೊ ಬೆಲೆ ತೀವ್ರವಾಗಿ ಹೆಚ್ಚಾಗುತ್ತಿರುವುದರಂದ ಸಾರ್ವಜನಿಕರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಗೃಹಿಣಿಯರು ಅಡುಗೆಮನೆಯಲ್ಲಿ ಟೊಮೆಟೊ ಬಳಸುವ ಬಗ್ಗೆ ಯೋಚಿಸುತ್ತಿದ್ದರೆ, ಟೊಮೆಟೊ ಬೆಲೆ ಏರಿಕೆಯಿಂದಾಗಿ, ಸ್ಥಳೀಯ ಅಂಗಡಿಯವರು ಅದನ್ನು ಸಗಟು ಮಾರುಕಟ್ಟೆಯಿಂದ ಖರೀದಿಸುವುದನ್ನು ನಿಲ್ಲಿಸಿದ್ದಾರೆ.


ಹೆಚ್ಚುತ್ತಿರುವ ಟೊಮೆಟೊ ಬೆಲೆಗಳಿಂದಾಗಿ ಅವರು ಮೊಸರನ್ನು ಪರ್ಯಾಯವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಗೃಹಿಣಿ ಕುಲ್ಸುಮ್ ಬೀಬಿ ಹೇಳಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಗೃಹಿಣಿ ಫರ್ಹತ್ ನೊರೀನ್ ಅವರು ಈ ಸಮಸ್ಯೆಯನ್ನು ಹಲವು ಬಾರಿ ಎದುರಿಸಬೇಕಾಯಿತು. ಇನ್ನುಮುಂದೆ ಟೊಮೆಟೊ ಬೆಲೆ ಕಡಿಮೆ ಇರುವಾಗ  ಹೆಚ್ಚಾಗಿ ಕೊಂಡು ಅದನ್ನು ಫ್ರೀಜ್ ನಲ್ಲಿ ಶೇಖರಿಸಿಡುವ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ಫ್ರೀಜ್ ಸ್ಟಫ್ ತಾಜಾ ರುಚಿಯನ್ನು ಪಡೆಯುವುದಿಲ್ಲ ಎಂದು ಅವರು ತಿಳಿಸಿದರು.


ಶೇಖರಣೆ ಮತ್ತು ಲಾಭದಾಯಕತೆಯಿಂದಾಗಿ ಟೊಮೆಟೊ ಬೆಲೆ ಹೆಚ್ಚಾಗಿದೆ ಎಂದು ಸ್ಥಳೀಯ ಮಾರಾಟಗಾರ ಅಬ್ದುಲ್ ಕರೀಮ್ ಆರೋಪಿಸಿದ್ದಾರೆ.


ಬರಾಚಿಸ್ತಾನದಿಂದ ಟೊಮೆಟೊಗಳ ಆಗಮನ ಕಡಿಮೆಯಾಗಿದೆ ಮತ್ತು ಇರಾನ್‌ನಿಂದ ಬರುವ ಟೊಮೆಟೊಗಳು ಸಹ ತಲುಪುತ್ತಿಲ್ಲ ಎಂದು ಕರಾಚಿಯ ಸಗಟು ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷ ಹಾಜಿ ಶಹಜಹಾನ್ ಹೇಳಿದ್ದಾರೆ. ಕಾಬೂಲ್‌ನಿಂದ ಬರುವ ಟೊಮೆಟೊ ಕೂಡ ಕೆಲವು ಕಾರಣಗಳಿಂದ ನಿಂತುಹೋಗಿದೆ. ಟೊಮೆಟೊ ಬೆಳೆ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಬರುತ್ತದೆ. ಆದರೆ ಈ ಬಾರಿ ವಿಳಂಬವಾಗಿದೆ, ಇದರಿಂದಾಗಿ ಬೆಲೆ ಹೆಚ್ಚಾಗಿದೆ. 15 ರಿಂದ 20 ದಿನಗಳಲ್ಲಿ ಆಗಮನವು ಸುಧಾರಿಸುವ ನಿರೀಕ್ಷೆಯಿದೆ. ಬಳಿಕ ಟೊಮೆಟೊ ಬೆಲೆ ಕೂಡ ಕಡಿಮೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.