Trending News: ಆಫ್ರಿಕಾದ ಉಗಾಂಡಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ಅಲ್ಲಿ  ಎರಡು ವರ್ಷದ ಮಗುವನ್ನು ಹಿಪಪಾಟಮಸ್ ಜೀವಸಹಿತ ನುಂಗಿಹಾಕಿದೆ. ಆದರೆ ಬಳಿಕ, ಒಬ್ಬ ವ್ಯಕ್ತಿಯು ಕಲ್ಲು ಎಸೆದ ನಂತರ, ಹಿಪ್ಪೋ ಸ್ವಲ್ಪ ಸಮಯದ ನಂತರ ಅಮಾಯಕನನ್ನು ಉಗುಲಿದೆ, ಇದರಿಂದಾಗಿ ಮಗು ಬದುಕುಳಿದಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಕ್ಯಾಪಿಟಲ್ ಎಫ್‌ಎಂ ಉಗಾಂಡಾದ ಪ್ರಕಾರ, ಈ ಘಟನೆಯು ಕಟ್ವೆ ಕಬಟೊರೊ ಪಟ್ಟಣದಲ್ಲಿ ನಡೆದಿದೆ. ಭಾನುವಾರ ಮನೆ ಸಮೀಪದ ಕೆರೆಯ ದಡದಲ್ಲಿ ಮಗು ಆಟವಾಡುತ್ತಿತ್ತು. ಆಗ ಹಸಿದ ಹಿಪಪಾಟಮಸ್ ಆತನನ್ನು ತನ್ನ ಆಹಾರವಾಗಿಸಲು ಯತ್ನಿಸಿದೆ. ಹಿಪ್ಪೋ ಮಗುವನ್ನು ಸಂಪೂರ್ಣವಾಗಿ ನುಂಗುವ ಮೊದಲು, ಅಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಿತಿಪ್ರಜ್ಞೆಯನ್ನು ಮರೆದಿದ್ದಾರೆ ಮತ್ತು ಅದರ ಮೇಲೆ ಕಲ್ಲುಗಳನ್ನು ಎಸೆಯಲು ಆರಂಭಿಸಿದಾರೆ. ಇದರಿಂದಾಗಿ ಹಿಪ್ಪೋ ವಾಂತಿ ಮಾಡಿಕೊಂಡಿದೆ ಮತ್ತು ಮಗು ಅದರ ಬಾಯಿಯಿಂದ ಹೊರಬಂದಿದೆ.


Rosie Moore: ಅಪಾಯಕಾರಿ ಜಂತುಗಳನ್ನು ಮೈಮೇಲೆ ಎಳೆದುಕೊಳ್ಳುವ ವಿಶ್ವದ ಹಾಟ್ ಸೈಂಟಿಸ್ಟ್ ಇವಳೇ ನೋಡಿ


ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಎರಡು ವರ್ಷದ ಪಾಲ್‌ನ ಜೀವವನ್ನು ಹಿಪಪಾಟಮಸ್ ಉಳಿಸಿರಬಹುದು, ಆದರೆ ಅದರ ಹಿಡಿತದಿಂದಾಗಿ ಪಾಲ್ ತೀವ್ರವಾಗಿ ಗಾಯಗೊಂಡಿದ್ದಾನೆ. ಮಗುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೇಬೀಸ್ ಲಸಿಕೆಯನ್ನು ನೀಡಿದ ನಂತರ ಆತನನ್ನು ದೊಡ್ಡ ನಗರದ ಆಸ್ಪತ್ರೆಗೆ ರೆಫರ್ ಮಾಡಲಾಗಿದೆ. ಮಗು ಚೇತರಿಸಿಕೊಂಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಡ್ವಾರ್ಡ್ ಸರೋವರದ ದಡದಲ್ಲಿ ಹಿಪ್ಪೋ ಮಗುವನ್ನು ನುಂಗಿದ ಘಟನೆ ಇದೇ ಮೊದಲು ಎಂದು ಉಗಾಂಡಾ ಪೊಲೀಸರು ಹೇಳಿದ್ದಾರೆ. ಕ್ರಿಸ್ಪಾಸ್ ಬಾಗೊಂಜಾ ಎಂಬ ವ್ಯಕ್ತಿಯ ಶೌರ್ಯದಿಂದ ಮಗುವಿನ ಪ್ರಾಣ ಉಳಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-World's Most Venomous Snake: ಒಂದೇ ಏಟಿಗೆ 100 ಜನರನ್ನು ಮಸಣಕ್ಕಟ್ಟುತ್ತಂತೆ ಈ ಹಾವು


ಹಿಪ್ಪೋ ಪ್ರತಿ ವರ್ಷ 500 ಜನರನ್ನು ಕೊಲ್ಲುತ್ತದೆ
ಒಂದು ವರದಿಯ ಪ್ರಕಾರ, ಹಿಪ್ಪೋಗಳಿಂದಾಗಿ ಆಫ್ರಿಕಾದಲ್ಲಿ ಪ್ರತಿ ವರ್ಷ ಕನಿಷ್ಠ 500 ಜನರು ಸಾವನ್ನಪ್ಪುತ್ತಾರೆ ಎನ್ನಲಾಗಿದೆ. ಅವುಗಳ ಹಲ್ಲುಗಳು ಒಂದು ಅಡಿಗಿಂತ ಹೆಚ್ಚು ಉದ್ದವಾಗಿರುತ್ತವೆ ಮತ್ತು ಮಾರಣಾಂತಿಕ ದಾಳಿಯ ಸಂಭವನೀಯತೆಯು ಶೇ.29 ರಿಂದ ಶೇ.87 ರಷ್ಟು ಇರುತ್ತದೆ. ಆದಾಗ್ಯೂ, ಎಡ್ವರ್ಡ್ ಸರೋವರದಲ್ಲಿ ಮಗುವನ್ನು ಹಿಪ್ಪೋ ನುಂಗಿದ ಮೊದಲ ಪ್ರಕರಣ ಇದಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.