Viral Video: ಕುಸ್ತಿ ಅಖಾಡ ಆಗಿ ಮಾರ್ಪಟ್ಟ ಮದುವೆಯ ವೇದಿಕೆ, ಭಾರಿ ಮಾರಾಮಾರಿಗಿಳಿದ ಜೋಡಿ!

Bride-Groom Fight Video: ಪರಸ್ಪರರಿಗೆ ಮಿಠಾಯಿ ತಿನ್ನಿಸುವ ಸಂಪ್ರದಾಯದ ವೇಳೆ ವಧು ಹಾಗೂ ವರರ ಮಧ್ಯೆ ಭಾರಿ ಜಗಳ ಆರಂಭವಾಗುತ್ತದೆ. ಈ ಜಗಳ ಯಾವ ಮಟ್ಟಕ್ಕೆ ಹೋಗುತ್ತದೆಂದರೆ, ವರ ಎಲ್ಲರ ಮುಂದೆಯೇ ತನ್ನ ಪತ್ನಿಗೆ ಹೊಡೆಯಲಾರಂಭಿಸುತ್ತಾನೆ. ಇದರಿಂದ ಪಿತ್ತ ನೆತ್ತಿಗೇರಿದ ವಧು ಕೂಡ ರೌದ್ರಾವತಾರ ತೋರುತ್ತಾಳೆ. ಅದೇನೇ ಇದ್ದರು ವಿಡಿಯೋ ಮಾತ್ರ ಭಾರಿ ಆಶ್ಚರ್ಯ ಹುಟ್ಟಿಸುವಂತಿದೆ.  

Written by - Nitin Tabib | Last Updated : Dec 15, 2022, 01:53 PM IST
  • ಹಲವು ಬಾರಿ, ಮದುವೆಯ ವೇದಿಕೆಯಲ್ಲಿ, ವಧು-ವರರು ಮಾಡುವ ಕೆಲ ಕೃತ್ಯಗಳನ್ನು ನೋಡಿ ಜನ ಕಕ್ಕಾಬಿಕ್ಕಿಯಾಗುತ್ತಾರೆ
  • ಮತ್ತು ಅಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮದ ಮೇಲೆ ವೈರಲ್ ಆಗುತ್ತವೆ.
  • ಅಂತಹುದೇ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Viral Video: ಕುಸ್ತಿ ಅಖಾಡ ಆಗಿ ಮಾರ್ಪಟ್ಟ ಮದುವೆಯ ವೇದಿಕೆ, ಭಾರಿ ಮಾರಾಮಾರಿಗಿಳಿದ ಜೋಡಿ! title=
Viral Marriage Video

Viral Video: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮದುವೆಯ ಸೀಸನ್ ಆರಂಭಗೊಂಡಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಡಿಯೋಗಳು ಹರಿದಾಡಲಾರಂಭಿಸಿವೆ. ಇವುಗಳಲ್ಲಿ ಕೆಲ ಮದುವೆಯ ವೀಡಿಯೋಗಳು ತುಂಬಾ ತಮಾಷೆಯಾಗಿವೆ. ಅಂದರೆ, ಅವುಗಳನ್ನು ನೋಡುವುದು ಹೊಟ್ಟೆ ಹಿಡಿದುಕೊಂಡು ನಗುವ ಅನುಭವ ನೀಡುತ್ತದೆ. ಆದರೆ, ಹಲವು  ಬಾರಿ, ಮದುವೆಯ ವೇದಿಕೆಯಲ್ಲಿ, ವಧು-ವರರು ಮಾಡುವ ಕೆಲ ಕೃತ್ಯಗಳನ್ನು ನೋಡಿ ಜನ ಕಕ್ಕಾಬಿಕ್ಕಿಯಾಗುತ್ತಾರೆ ಮತ್ತು ಅಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮದ ಮೇಲೆ ವೈರಲ್ ಆಗುತ್ತವೆ. ಅಂತಹುದೇ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ವಧು-ವರರು ಮದುವೆಯ ವೇದಿಕೆಯಲ್ಲಿ ತೀವ್ರವಾಗಿ ಜಗಳವಾಡುತ್ತಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ-CPR Viral Video: ನಡುರಸ್ತೆಯಲ್ಲಿಯೇ ಸಂಭವಿಸಿದ ಹೃದಯಾಘಾತ, CPR ನೀಡಿ ಪ್ರಾಣ ರಕ್ಷಿಸಿದ ಲೇಡಿ ಪೋಲಿಸ್

ವಧು ಮತ್ತು ವರರ ನಡುವೆ ಭಾರಿ ಮಾರಾಮಾರಿ
ಮದುವೆ ವೇದಿಕೆಯಲ್ಲಿ ವಧು-ವರರ ನಡುವೆ ಘರ್ಷಣೆ ನಡೆಯುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಇಬ್ಬರೂ ಪರಸ್ಪರರನ್ನು ತೀವ್ರವಾಗಿ ಕಪಾಳಮೋಕ್ಷ ನಡೆಸುತ್ತಿದ್ದಾರೆ. ಕೇವಲ ಮಾರಾಮಾರಿಗೆ ಮಾತ್ರ ಸೀಮಿತವಾಗಿರದೇ, ಪರಸ್ಪರರ ಒದ್ದು, ಕೂದಲು ಹಿಡಿದು ಎಳೆದಾಡುತ್ತಿದ್ದಾರೆ. ವಾಸ್ತವದಲ್ಲಿ ಇಬ್ಬರ ನಡುವೆ ಸಿಹಿ ತಿನ್ನಿಸುವ ವಿಚಾರದಲ್ಲಿ ಜಗಳವಾಗಿದೆ. ಈ ಜಗಳ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ವರನು ತನ್ನ ವಧುವನ್ನು ಎಲ್ಲರ ಮುಂದೆ ಹೊಡೆಯಲು ಪ್ರಾರಂಭಿಸುತ್ತಾನೆ. ವರನು ತನ್ನ ವಧುವಿನ ಕೂದಲನ್ನು ಹಿಡಿದುಕೊಂಡು ಹೊಡೆಯುವುದನ್ನು ನೀವು ನೋಡಬಹುದು. ಈ ವೇಳೆ ಅಲ್ಲಿದ್ದವರು ವರನನ್ನು ತಡೆಯಲು ಯತ್ನಿಸಿದರೂ ವರ ನಿಲ್ಲುವ ಮಾತೆ ಎತ್ತುವುದಿಲ್ಲ... ವಿಡಿಯೋ ನೋಡಿ.

ಇದನ್ನೂ ಓದಿ-Viral Video: ಮಹಿಳೆಯ ಕಿವಿಯೊಳಗಿಂದ ಹೊರಬಂದ ಜೇಡ! ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ

ಈ ಸಂದರ್ಭದಲ್ಲಿ ವರನ ಈ ಪ್ರವೃತ್ತಿಯಿಂದ ರೊಚ್ಚಿಗೆದ್ದ ವಧು ಕೂಡ ತನ್ನ ಉಗ್ರ ರೂಪ ಪ್ರದರ್ಶಿಸುತ್ತಾಳೆ. ಪಿತ್ತ ನೆತ್ತಿಗೇರಿದ ಆಕೆಯೂ ಕೂಡ ಹಿಂದೆ ಮುಂದೆ ನೋಡದೆ, ವರನಿಗೆ ಥಳಿಸಲು ಆರಂಭಿಸುತ್ತಾಳೆ. ಆಕೆಯೂ ಕೂಡ ವರನ ಕೂದಲನ್ನು ಹಿಡಿದು ಕೆನ್ನೆಗೆ ಬಾರಿಸಲು ಶುರು ಮಾಡುತ್ತಾಳೆ. ಪ್ರಸ್ತುತ ಈ ವಿಡಿಯೋ ಎಲ್ಲಿಂದ ಹೊರಹೊಮ್ಮಿದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ ಆದರೆ @gharkekalesh ಹೆಸರಿನ ಟ್ವಿಟ್ಟರ್ ಖಾತೆಯ ಮೂಲಕ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕೇವಲ 27 ಸೆಕೆಂಡುಗಳ ಈ ವೀಡಿಯೊವನ್ನು ಭಾರಿ ಪ್ರಮಾಣದಲ್ಲಿ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ .ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಜನರು ತರಹೇವಾರಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News