Man Catch King Cobra Video: ಹಾವು ಕಂಡರೆ ಸಾಕು ಬಹುತೇಕರ ಪರಿಸ್ಥಿತಿ ಹದಗೆಡುತ್ತದೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ಮೈ ನವಿರೇಳುತ್ತದೆ. ಈ ವಿಡಿಯೋ (Viral Video) ಥೈಲ್ಯಾಂಡ್ ನಿಂದ ಹೊರಹೊಮ್ಮಿದೆ. ವಿಡಿಯೋದಲ್ಲಿ ಯುವಕನೋರ್ವ ಬರಿಗೈಯಿಂದ ಅಪಾಯಕಾರಿ ಕಿಂಗ್ ಕೋಬ್ರಾ ಹಾವನ್ನು ಹಿಡಿಯುತ್ತಿರುವುದನ್ನು ನೀವು ಗಮನಿಸಬಹುದು.


COMMERCIAL BREAK
SCROLL TO CONTINUE READING

ಅಪಾಯಕಾರಿ ಕಿಂಗ್ ಕೋಬ್ರಾ ಹಿಡಿಯಲು ಯತ್ನಿಸುತ್ತಿರುವ ಯುವಕ
ದಕ್ಷಿಣ ಥಾಯ್ ಪ್ರಾಂತ್ಯದ ಕ್ರಾಬಿಯಲ್ಲಿ ಭಯಾನಕ ನಾಗರ ಹಾವೊಂದು ತಾಳೆ ತೋಟಕ್ಕೆ ಪ್ರವೇಶಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಇದಲ್ಲದೆ ಅದು ಒಂದು ಸೆಪ್ಟಿಕ್ ಟ್ಯಾಂಕ್ ಗೆ ನುಸುಳುತ್ತಿರುವುದನ್ನು ಕೂಡ ನೀವು ಗಮನಿಸಬಹುದು. ಈ ನಾಗರ ಹಾವು ಸುಮಾರು 14 ಅಡಿ ಉದ್ದ ಇದ್ದು, ಅದರ ತೂಕ 10 ಕೆ.ಜಿಗಿಂತ ಹೆಚ್ಚು ಎಂದು ಹೇಳಲಾಗಿದೆ. ಮೊದಲು ಯುವಕ ಹಾವನ್ನು ಖಾಲಿ ರೋಡಲ್ಲಿ ಅತ್ತಿಂದಿತ್ತ ಸುತ್ತಾಡಿಸುತ್ತಾನೆ ಮತ್ತು ನಂತರ ಅದನ್ನು ಹಿಡಿಯಲು ಪ್ರಯತ್ನಿಸುತ್ತಾನೆ.


ಇದನ್ನೂ ಓದಿ-Viral Video: ‘ಪುಷ್ಪ’ ಸಿನಿಮಾದ ಮತ್ತೊಂದು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ತಾಂಜಾನಿಯಾದ ಯುವಕ..!


ಈ ಘಟನೆಯ ವಿಡಿಯೋ ಅನ್ನು Facebook ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿ ಕಿಂಗ್ ಕೋಬ್ರಾ (King Cobra Video) ಹಾವನ್ನು ಹಿಡಿಯುವುದನ್ನು ತೋರಿಸಲಾಗಿದೆ. ಈ ವೇಳೆ ಹಾವು ತನ್ನ ಬಾಯಿ ತೆರೆದು ಯುವಕನನ್ನು ಕಚ್ಚಲು ಪ್ರಯತ್ನಿಸುತ್ತದೆ. ಆದರೆ, ಯುವಕ ಅದೃಷ್ಟವಂತನಾದ ಕಾರಣ ಹಾವು ವಿಫಲವಾಗುತ್ತದೆ. ವಿಡಿಯೋ ನೋಡಿ...



ಇದನ್ನೂ ಓದಿ-Viral Video: ಪುಷ್ಪ ಸಿನಿಮಾದ ‘ಸಾಮಿ-ಸಾಮಿ’ ಹಾಡಿಗೆ ತಾಂಜಾನಿಯಾ ಯುವಕನ ಅದ್ಭುತ ನೃತ್ಯ..!


ಕೊನೆಗೆ ಹಾವನ್ನು ಹಿಡಿಯುವಲ್ಲಿ ಯುವಕ ಯಶಸ್ವಿಯಾಗುತ್ತಾನೆ
ಆದರೆ, ಸ್ವಲ್ಪ ಹೊತ್ತಿನ ನಂತರ ಯುವಕ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾನೆ ಮತ್ತು ನಂತರ ಸುರಕ್ಷಿತವಾಗಿ ಅದನ್ನು ಅಡವಿಗೆ ಬಿಡುತ್ತಾನೆ. ಹಾವು ತನ್ನ ಸಂಗಾತಿಯ ಹುಡುಕಾಟಕ್ಕಾಗಿ ಅತ್ತಿಂದಿತ್ತ ಓಡಾಡುತ್ತಿತ್ತು ಎನ್ನಲಾಗಿದೆ. ಏಕೆಂದರೆ ಇತ್ತೀಚೆಗಷ್ಟೇ ಕೆಲ ಸ್ಥಳೀಯ ಜನರು ಕೋಬ್ರಾ ಹಾವೊಂದನ್ನು ಅಲ್ಲಿ ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ. ಕೋಬ್ರಾ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದು. ದಕ್ಷಿಣ ಹಾಗೂ ದಕ್ಷಿಣ-ಪೂರ್ವ ಏಷ್ಯಾ ಪ್ರಾಂತ್ಯದಲ್ಲಿ ಇದರ ಪ್ರಜಾತಿಗಳು ಹೆಚ್ಚಾಗಿ ಕಂಡುಬರುತ್ತವೆ.


ಇದನ್ನೂ ಓದಿ-Viral Video: ಪಾಪ್ ಸಿಂಗರ್ ಕೆನ್ನೆ ಕಚ್ಚಿದ ಹಾವು!, ಭಯಾನಕ ದೃಶ್ಯ ಹೇಗಿದೆ ನೋಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.