Super Typhoon Nanmadol: ಯಾವುದೇ ಕ್ಷಣದಲ್ಲಿ ಜಪಾನ್ಗೆ ಅಪ್ಪಳಿಸಲಿದೆ ನಾನ್ಮಡೋಲ್, ಅಪಾರ ನಷ್ಟದ ಶಂಕೆಯ ನಡುವೆ ಅಲರ್ಟ್ ಘೋಷಣೆ
Typhoon Nanmodal Update: ನಾನ್ಮಡೋಲ್ ಯಾವುದೇ ಕ್ಷಣದಲ್ಲಿ ಬೇಕಾದರೂ ಜಪಾನ್ ಗೆ ಅಪ್ಪಳಿಸುವ ಸಾಧ್ಯತೆಯನ್ನು ವರ್ತಿಸಲಾಗಿದೆ. ಇದರಿಂದ ಭಾರಿ ನಷ್ಟ ಉಂಟಾಗುವ ಅಪಾಯ ಎದುರಾಗಿದೆ. ಈಗಾಗಲೇ ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ.
Nanmadol Typhoon In Japan: ದೈತ್ಯ ಚಂಡಮಾರುತ 'ನಾನಮಡೋಲ್' ನೈಋತ್ಯ ಜಪಾನ್ನಲ್ಲಿ ಸಾರಿಗೆ ಸೇವೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಮಾಧ್ಯಮ ವರದಿಗಳ ಪ್ರಕಾರ, ಹವಾಮಾನ ಅಧಿಕಾರಿಗಳು ನೈಋತ್ಯ ಜಪಾನ್‌ನ ಕಾಗೋಶಿಮಾ ಪ್ರಿಫೆಕ್ಚರ್‌ಗೆ ಪ್ರಬಲ ಬಿರುಗಾಳಿ ಅದರಿಂದ ಏಳುವ ಅಲೆಗಳಿಗೆ ಸಂಬಂಧಿಸಿದಂತೆ ತುರ್ತು ಎಚ್ಚರಿಕೆ ನೀಡಿದ್ದಾರೆ. ಹಲವು ದಶಕಗಳಲ್ಲಿ ಒಮ್ಮೆ ಮಾತ್ರ ಕಂಡುಬರುವ ರೀತಿಯ ವಿಪತ್ತನ್ನು ಈ ಪ್ರಬಲ ಚಂಡಮಾರುತ ಪ್ರಚೋದಿಸುತ್ತದೆ ಎಂದು ಅವರು ಹೇಳಿದ್ದಾರೆ.
ಗಂಟೆಗೆ ಗರಿಷ್ಠ 180 ಕಿಲೋಮೀಟರ್ ವೇಗದ ಗಾಳಿಯು ಉತ್ತರ ಮತ್ತು ದಕ್ಷಿಣ ಕ್ಯುಶು ಮತ್ತು ಅಮಾಮಿ ದ್ವೀಪಗಳಿಗೆ ಅಪ್ಪಳಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಚಂಡಮಾರುತ ಕಡಲು ತೀರಕ್ಕೆ ಅಪ್ಪಳಿಸಿದಾಗ ಅದರ ವೇಗವು ಗಂಟೆಗೆ 252 ಕಿಲೋಮೀಟರ್ ಗಳಷ್ಟು ಇರುವ ಸಾಧ್ಯತೆಯನ್ನು ಅಧಿಕಾರಿಗಳು ವರ್ತಿಸಿದ್ದಾರೆ. ಇದರಿಂದ ಸೋಮವಾರ ಬೆಳಗಿನ ಹೊತ್ತಿಗೆ ದಕ್ಷಿಣ ಕ್ಯುಶುದಲ್ಲಿ 600 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ.
ಚಂಡಮಾರುತ ಈಶಾನ್ಯಕ್ಕೆ ಚಲಿಸಲಿದೆ
ಚಂಡಮಾರುತವು ಪ್ರಬಲವಾಗಿರುವುದರಿಂದ ದೂರದ ಪ್ರದೇಶಗಳಲ್ಲಿಯೂ ಮಳೆ ಮತ್ತು ತೀವ್ರ ಗಾಳಿ ಬೀಸಲಿದೆ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಸೋಮವಾರದಿಂದ ಪಶ್ಚಿಮ ಮತ್ತು ಪೂರ್ವ ಜಪಾನ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಸಾರ್ವಜನಿಕ ಸುದ್ದಿ ವಾಹಿನಿ NHK-ವರ್ಲ್ಡ್ ಜಪಾನ್ ಪ್ರಕಾರ, ಚಂಡಮಾರುತವು ಈಶಾನ್ಯ ದಿಕ್ಕಿನತ್ತ ಚಲಿಸುತ್ತದೆ ಮತ್ತು ಮಂಗಳವಾರದ ವೇಳೆಗೆ ಜಪಾನ್‌ನ ಮುಖ್ಯ ದ್ವೀಪವಾದ ಹೊನ್ಶು ಮೂಲಕ ಹಾದುಹೋಗಲಿದೆ ಎನ್ನಲಾಗಿದೆ.
20 ಲಕ್ಷ ಜನರನ್ನು ಸ್ಥಳಾಂತರಿಸಲು ಆದೇಶ
ನೈಋತ್ಯ ಜಪಾನ್‌ನಲ್ಲಿ ಭಾನುವಾರದಂದು ಪ್ರಬಲ ಚಂಡಮಾರುತದ ಮುನ್ಸೂಚನೆಯ ಹಿನ್ನೆಲೆ ಸುಮಾರು ಎರಡು ಮಿಲಿಯನ್ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ, ಜಪಾನ್ ಏರ್‌ಲೈನ್ಸ್ ಮತ್ತು ಆಲ್ ನಿಪ್ಪಾನ್ ಏರ್‌ವೇಸ್ ದಿನದ 500 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಜಪಾನ್ ಏರ್ಲೈನ್ಸ್ 376 ವಿಮಾನಗಳನ್ನು ರದ್ದುಗೊಳಿಸಲು ಯೋಜಿಸಿದೆ ಮತ್ತು ಎಲ್ಲಾ ನಿಪ್ಪಾನ್ ಏರ್ವೇಸ್ 19 ವಿಮಾನಗಳನ್ನು ರದ್ದುಗೊಳಿಸಿದೆ ಇತರ ವಿಮಾನಯಾನ ಸಂಸ್ಥೆಗಳು ಸೋಮವಾರದಿಂದ ತಮ್ಮ ಸೇವೆಗಳನ್ನು ರದ್ದುಗೊಳಿಸಲಿವೆ.
ಬುಲೆಟ್ ಟ್ರೈನ್ ಸೇವೆಯ ಮೇಲೂ ಪ್ರಭಾವ
ಪ್ರಬಲ ಚಂಡಮಾರುತದಿಂದ ಬುಲೆಟ್ ರೈಲು ಸೇವೆಗೂ ತೊಂದರೆಯಾಗುತ್ತಿದೆ. NHK ವರದಿಯ ಪ್ರಕಾರ, ಮಧ್ಯಾಹ್ನ 1:30 ಕ್ಕೆ, ಕ್ಯುಶು ಶಿಂಕನ್‌ಸೆನ್‌ನ ನಿರ್ವಾಹಕರು ಭಾನುವಾರ ಮತ್ತು ಸೋಮವಾರದೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಚಂಡಮಾರುತವು ಜಪಾನ್‌ನ ನೈಋತ್ಯ ದ್ವೀಪಗಳಲ್ಲಿ ಒಂದಾದ ದಕ್ಷಿಣ ಕ್ಯುಶುವನ್ನು ಅಪ್ಪಳಿಸುವ ನಿರೀಕ್ಷೆಯಿದೆ, ಅದರಲ್ಲಿಯೂ ನಿರ್ದಿಷ್ಟವಾಗಿ ಕಾಗೋಶಿಮಾ ಪ್ರಾಂತ್ಯದೊಳಗೆ ಅದು ಅಪ್ಪಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ-ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಅಮೆರಿಕಾದ ಮಾಧ್ಯಮಗಳು..!
ಮನೆಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ
ಜಪಾನ್‌ನ ಹವಾಮಾನ ಸಂಸ್ಥೆ (ಜೆಎಂಎ) ನೀಡಿರುವ ಹೇಳಿಕೆಯ ಪ್ರಕಾರ, "ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ತುರ್ತು ಭಾರೀ ಮಳೆಯ ಎಚ್ಚರಿಕೆಯನ್ನು ಪ್ರಕಟಿಸಲಾಗುವುದು" ಎನ್ನಲಾಗಿದೆ. ಜೋರಾಗಿ ಗಾಳಿ ಬೀಸಿದರೆ ಮನೆಗಳು ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಜೆಎಂಎ ಅಧಿಕಾರಿ ರ್ಯುತಾ ಕುರೋರಾ ಶನಿವಾರ ಎಚ್ಚರಿಸಿದ್ದಾರೆ. ಭೂಕುಸಿತ ಮತ್ತು ಪ್ರವಾಹದ ಅಪಾಯವನ್ನು ತಪ್ಪಿಸಲು ಚಂಡಮಾರುತವು ಅಪ್ಪಳಿಸುವ ಮೊದಲು ಮನೆ ತೆರವುಗೊಳಿಸಿ ಸ್ಥಳಾಂತರಗೊಳ್ಳಲು ಕುರೋರಾ ನಿವಾಸಿಗಳನ್ನು ಕೋರಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.