Earthquake in Taiwan Again: ಚೀನಾ ಜೋತೆಗಿನ ದೀರ್ಘಕಾಲದ ಸಂಘರ್ಷದ ನಡುವೆ ಶನಿವಾರ ಮತ್ತು ಭಾನುವಾರ ತೈವಾನ್ ಪಾಲಿಗೆ ಆತಂಕಕಾರಿ ಸಾಬೀತಾಗಿವೆ. ಏಕೆಂದರೆ, ಶನಿವಾರದ ಬಳಿಕ ಭಾನುವಾರ ಮಧ್ಯಾಹ್ನವೂ ಕೂಡ ಅಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭಾನುವಾರದ ಭೂಕಂಪದ ತೀವ್ರತೆ 7.2 ರಷ್ಟು ದಾಖಲಾಗಿದ್ದು, ಇದೀಗ ಅಲ್ಲಿನ ಸರ್ಕಾರದ ಆತಂಕವನ್ನು ಹೆಚ್ಚಿಸಿದೆ. ಕಳೆದ 24 ಗಂಟೆಯೊಳಗೆ ಇದು ಎರಡನೇ ಭೂಕಂಪ ಇದಾಗಿದೆ. ಇದಕ್ಕೂ ಮೊದಲು ಶನಿವಾರ ತೈವಾನ್ ನಲ್ಲಿ ಸಂಭವಿಸಿದ್ದ ಭೂಕಮಪ್ದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.6 ರಷ್ಟು ದಾಖಲಾಗಿದೆ.
ಇದನ್ನೂ ಓದಿ-Viral Video : ಪುಟ್ಟ ಮಗುವಿನಂತೆ ಜಾರುಬಂಡಿ ಆಡುವ ಕರಡಿ.. ಮನಸ್ಸನ್ನು ರಿಲ್ಯಾಕ್ಸ್ ಮಾಡುವ ವಿಡಿಯೋ
ಶನಿವಾರ ರಾತ್ರಿ ತೈವಾನ್ ಗೆ ಅಪ್ಪಳಿಸಿದ 6.6 ತೀವ್ರತೆಯ ಭೂಕಂಪ
ಶನಿವಾರ ರಾತ್ರಿ ತೈವಾನ್‌ನ ಪೂರ್ವ ಕರಾವಳಿಯಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಲೀ, ಆಸ್ತಿಪಾಸ್ತಿ ಹಾನಿಯಾಗಲೀ ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಉತ್ತರ ಕರಾವಳಿಯ ಪಟ್ಟಣ ಟೈಟುಂಗ್‌ನಿಂದ ಸುಮಾರು 50 ಕಿಮೀ ದೂರದಲ್ಲಿ ರಾತ್ರಿ 9:30 ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಇಲಾಖೆ ಹೇಳಿದೆ. ಈ ಭೂಕಂಪದ ಕೇಂದ್ರವು ಭೂಮಿಯಿಂದ 10 ಕಿಮೀ ಆಳದಲ್ಲಿತ್ತು ಎನ್ನಲಾಗಿದೆ. ಭೂಕಂಪದ ಮಾಹಿತಿ ಬಂದ ತಕ್ಷಣ ತಂಡ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ. ತೈವಾನ್‌ಗೆ ಭೂಕಂಪಗಳು ಹೊಸ ವಿಷಯವಲ್ಲ ಮತ್ತು ಅಲ್ಲಿ ಆಗಾಗ್ಗೆ ಭೂಕಂಪನಗಳು ಸಂಭವಿಸುತ್ತವೆ. ವಾಸ್ತವದಲ್ಲಿ, ತೈವಾನ್ ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಸಂಧಿಯ ನಡುವೆ ಇರುವುದೇ ಇದಕ್ಕೆ ಕಾರಣವಾಗಿದೆ.
ಇದನ್ನೂ ಓದಿ-Viral Video: ವಿಷಕಾರಿ ಹಾವಿನೊಂದಿಗೆ ವ್ಯಕ್ತಿಯ ಅಪಾಯಕಾರಿ ಸಾಹಸ ಹೇಗಿದೆ ನೋಡಿ!
ಟೆನ್ಷನ್‌ನಲ್ಲಿ ಜನರು, ಆದರೆ ಸುನಾಮಿ ಅಪಾಯ ಇಲ್ಲ
ಸತತ ಎರಡು ಬಾರಿ ಭೂಮಿ ಕಂಪಿಸಿದ ಬಳಿಕ ಇದೀಗ ತೈವಾನ್ ಜನರು ಆತಂಕದಲ್ಲಿದ್ದಾರೆ. ಸುನಾಮಿ ಬರಲಿದೆಯೇ ಎಂಬ ಭಯ ಅವರನ್ನು ಆವರಿಸಿದೆ, ಆದರೆ ಭೂಕಂಪದ ತೀವ್ರತೆ 7.0 ಆಗುವವರೆಗೆ ತೈವಾನ್‌ನಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗುವುದಿಲ್ಲ. 6.0 ರ ತೀವ್ರತೆಯ ಭೂಕಂಪಗಳು ಸಹ ಕೆಲವೊಮ್ಮೆ ಗಣನೀಯ ವಿನಾಶವನ್ನು ಉಂಟುಮಾಡಬಹುದು, ಇದು ಭೂಕಂಪದ ಸ್ಥಳ ಮತ್ತು ಆಳವನ್ನು ಅವಲಂಬಿಸಿರುತ್ತದೆ. ಇಂತಹ ಭೂಕಂಪದಿಂದ ತೈವಾನ್‌ನಲ್ಲಿ ಹಾನಿಯಾಗುವ ಸಾಧ್ಯತೆ ಕಡಿಮೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಕೂಡ ದೃಢಪಡಿಸಿದೆ. ಆದರೂ ಸಣ್ಣಪುಟ್ಟ ಹಾನಿಯಾಗಬಹುದು. ಭೂಕಂಪಗಳ ವಿಷಯದಲ್ಲಿ, ಜಪಾನ್ ನಲ್ಲಿಯೂ ಕೂಡ ಬಹುತೇಕ ಇದೇ ರೀತಿಯ ಪರಿಸ್ಥಿತಿ ಇದೆ. ಅಲ್ಲಿಯೂ ಕೂಡ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.