Pak PM Shehbaz struggles with earphone : ವೈರಲ್ ವಿಡಿಯೋವೊಂದರಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಇಯರ್‌ಫೋನ್ ಹಾಕಿಕೊಳ್ಳಲು ಪರದಾಡುತ್ತಿರುವುದನ್ನು ಕಾಣಬಹುದು. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು ನೋಡುತ್ತಾ ನಗುತ್ತಿದ್ದಾರೆ. ಇಯರ್‌ಫೋನ್ ಅನ್ನು ಹಾಕಿಕೊಳ್ಳಲು ಸಾಧ್ಯವಾಗದೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ "ಯಾರಾದರೂ ನನಗೆ ಸಹಾಯ ಮಾಡಬಹುದೇ?" ಎಂದು ಕೋರುತ್ತಾರೆ. ನಂತರ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಅವರ ಸಹಾಯಕ್ಕೆ ಎರಡು ಬಾರಿ ಬರುತ್ತಾನೆ ಮತ್ತು ಪುಟಿನ್ ಒಮ್ಮೆ ತಮ್ಮ ಇಯರ್‌ಫೋನ್ ಅನ್ನು ಪರಿಶೀಲಿಸುತ್ತಾರೆ. ಅಲ್ಲದೇ ಪಾಕ್ ಪ್ರಧಾನಿಯ ಪರದಾಟ ಕಂಡು ನಗುತ್ತಾರೆ.
ಇದನ್ನೂ ಓದಿ: Monkey Video : ಶಾಲೆಗೆ ಬಂದ ಮಂಗಣ್ಣ.! ವಿದ್ಯಾರ್ಥಿ ಪಕ್ಕ ಕುಳಿತು ಮಾಡಿದ ಕಿತಾಪತಿ ನೋಡಿ
ಇಯರ್‌ಫೋನ್ ಅನ್ನು ಪಾಕ್ ಪ್ರಧಾನಿ ಷರೀಫ್ ಹಾಕಿಕೊಳ್ಳುವವರೆಗೂ ರಷ್ಯಾ ಅಧ್ಯಕ್ಷ ಪುಟಿನ್ ಕಾಯುತ್ತಿದ್ದರು. ಪಾಕ್ ಪಿಎಂ ಷರೀಫ್ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ, ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗರು ಈ ವಿಡಿಯೋ ಕುರಿತು ಕಟುವಾಗಿ ಟೀಕಿಸಿದ್ದಾರೆ. ಈ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮುಜುಗರ ತಂದಿದೆ ಎಂದು ಹೇಳಿದ್ದಾರೆ.
This CrimeMinister is a constant embarrassment for Pakistan. Even President Putin had to eventually just laugh at this clumsy man. Pathetic. This is what conspirators wanted? To have by design a politician who would not only be a crook but also a pathetic apology for a PM? pic.twitter.com/mmEhLY7RZg
— Shireen Mazari (@ShireenMazari1) September 15, 2022
ಪ್ರತಿಪಕ್ಷದ ಪಿಟಿಐ ನಾಯಕಿ ಶಿರೀನ್ ಮಜಾರಿ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು, 'ಕ್ರೈಂ ಮಿನಿಸ್ಟರ್' ಪಾಕಿಸ್ತಾನಕ್ಕೆ ನಿರಂತರ ಮುಜುಗರ ತಂದಿದ್ದಾರೆ ಎಂದು ಹೇಳಿದ್ದಾರೆ. ಗುರುವಾರ ಶೆಹಬಾಜ್ ಷರೀಫ್ ಅವರು ಸ್ನೇಹಪರ ರಾಷ್ಟ್ರಗಳ ವಿಶ್ವ ನಾಯಕರೊಂದಿಗಿನ ಸಭೆಗಳಲ್ಲಿ ಭಾಗಿಯಾಗಿದ್ದರು. ಅಲ್ಲದೇ ಅವರು ಪ್ರವಾಹದ ಹಾನಿಯನ್ನು ವಿವರಿಸಿದರು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಎರಡು ವರ್ಷಗಳಲ್ಲಿ ಇದು SCO ಮೊದಲ ವೈಯಕ್ತಿಕ ಸಭೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಂಟು ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಾಯಕರು 22ನೇ ಎಸ್‌ಸಿಒ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ: Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್ ಸಿಕ್ರೆ ಹೇಗಿರುತ್ತೆ? ಈ ವಿಡಿಯೋ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.