U.S. Government Lab Report: China ಅಸಲ್ಲಿಯತ್ತು ಬಹಿರಂಗಪಡಿಸಿದ ಅಮೆರಿಕಾದ ವರದಿ, ಕೊರೊನಾ ವುಹಾನ್ ಲ್ಯಾಬ್ ನಿಂದಲೇ ಸೋರಿಕೆ!
U.S. Government Lab Report: ಅಮೆರಿಕದ ಸರ್ಕಾರಿ ರಾಷ್ಟ್ರೀಯ ಪ್ರಯೋಗಾಲಯದ ವರದಿಯಲ್ಲಿ, ಚೀನಾದ ವುಹಾನ್ ಲ್ಯಾಬ್‌ನಿಂದ ಕರೋನಾ ವೈರಸ್ ಸೋರಿಕೆಯಾಗುವ ಸಾಧ್ಯತೆಯನ್ನು ವರ್ತಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕು ಎಂದಿದೆ.
ವಾಶಿಂಗ್ಟನ್: U.S. Government Lab Report - ಕೊರೊನಾವೈರಸ್ (Coronavirus) ಎಲ್ಲಿ ಹುಟ್ಟಿಕೊಂಡಿದೆ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಮಾಡಿದ ಯುಎಸ್ ಅಧ್ಯಯನವು (US Study On Coronavirus) ಪೂರ್ಣಗೊಂಡಿದೆ. ಅಮೆರಿಕದ ಸರ್ಕಾರಿ ರಾಷ್ಟ್ರೀಯ ಪ್ರಯೋಗಾಲಯದ ವರದಿಯಲ್ಲಿ, ಚೀನಾದ ವುಹಾನ್ ಲ್ಯಾಬ್‌ನಿಂದ (Wuhan Lab) ಕರೋನಾ ವೈರಸ್ (Covid-19) ಸೋರಿಕೆಯಾಗಿರುವ ಸಾಧ್ಯತೆಯಿದೆ ಮತ್ತು ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಹೇಳಲಾಗಿದೆ. ಈ ಅಧ್ಯಯನಕ್ಕೆ ಸಂಬಂಧಿಸಿದ ಜನರನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ಸೋಮವಾರ ಈ ವರದಿಯನ್ನು ಪ್ರಕಟಿಸಿದೆ.
ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್‌ಮೋರ್ ರಾಷ್ಟ್ರೀಯ ಪ್ರಯೋಗಾಲಯವು 2020 ರ ಮೇ ತಿಂಗಳಲ್ಲಿ ಈ ಅಧ್ಯಯನವನ್ನು ಸಿದ್ಧಪಡಿಸಿದೆ ಮತ್ತು ಟ್ರಂಪ್ ಆಡಳಿತದ ಅಂತಿಮ ತಿಂಗಳುಗಳಲ್ಲಿ ಕರೋನಾ ವೈರಸ್‌ನ ಉಗಮದ ತನಿಖೆಯ ಸಂದರ್ಭದಲ್ಲಿ ವಿದೇಶಾಂಗ ಇಲಾಖೆಯ ವತಿಯಿಂದ ಇದನ್ನು ಉಲ್ಲೇಖಿಸಲಾಗಿದೆ ಎಂದು ವರದಿ ಹೇಳಿದೆ.
ಲಾರೆನ್ಸ್ ಲಿವರ್‌ಮೋರ್‌ನ ಈ ಅಂದಾಜು ವೈರಸ್ ನ ಜಿನೋಮಿಕ್ ವಿಶ್ಲೇಷಣೆಯನ್ನು ಆಧರಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲಿ ಹೇಳಲಾಗಿದೆ. ಆದರೆ, ಲಾರೆನ್ಸ್ ಲಿವರ್‌ಮೋರ್ ವಾಲ್ ಸ್ಟ್ರೀಟ್ ವರದಿಯ ಮೇಲೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಕಳೆದ ತಿಂಗಳು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರು ಕೊರೊನಾ ವೈರಸ್(Covid-19) ನ ಮೂಲ ಪತ್ತೆ ಹಚ್ಚಲು ಅಮೆರಿಕಾದ ಗುಪ್ತಚರ ಇಲಾಖೆಗಳಿಗೆ ಆದೇಶ ನೀಡಿರುವುದು ಇಲ್ಲಿ ಉಲ್ಲೇಖನೀಯ. ಇದಾದ ಬಳಿಕ ಅಮೆರಿಕಾದ ಗುಪ್ತಚರ ಇಲಾಖೆಗಳು ಎರಡು ಪ್ರತ್ಯೇಕ ಸಾಧ್ಯತೆಗಳನ್ನು ಪರಿಗಣಿಸುತ್ತಿವೆ. ಲ್ಯಾಬ್ ನಲ್ಲಿ ನಡೆದ ದುರ್ಘಟನೆಯಿಂದ ಈ ವೈರಸ್ ಲೀಕ್ ಆಗಿದೆ ಎಂಬುದು ಗುಪ್ತಚರ ಸಂಸ್ಥೆಗಳ ಮೊದಲ ಸಾಧ್ಯತೆಯಾಗಿದ್ದಾರೆ. ಸೋಂಕಿತ ಪ್ರಾಣಿಯಿಂದ ಇದು ಮನುಷ್ಯರಿಗೆ ಹರಡಿದೆ ಎಂಬುದು ಎರಡನೇ ಸಾಧ್ಯತೆಯ ಮೇಲೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇದುವರೆಗೆ ಈ ಸಂಸ್ಥೆಗಳು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಪ್ರಕಟಗೊಂಡ ಗುಪ್ತಚರ ವರದಿಯ ಪ್ರಕಾರ, 2019 ರ ನವೆಂಬರ್‌ನಲ್ಲಿ ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಮೂವರು ಸಂಶೋಧಕರು ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ಕಳುಹಿಸಬೇಕಾಯಿತು ಎಂದು ಹೇಳಲಾಗಿದೆ.
ಇದನ್ನೂ ಓದಿ-Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?
WHO ಹೇಳಿದ್ದೇನು?
ಇನ್ನೊಂದೆಡೆ ಇತ್ತ ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಘಟನೆ (WHO), ವೈರಸ್ ನ ಉತ್ಪತ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಅಂಕಿ-ಅಂಶಗಳನ್ನು ನೀಡುವಂತೆ ಒತ್ತಡ ಹೇರುವುದು ಸಾದ್ಯವಿಲ್ಲ ಎಂದಿದೆ. ವಾಸ್ತವದಲ್ಲಿ ಚೀನಾ ಮೇಲೆ ಒತ್ತಡ ಹೇರುವುದು ಉಚಿತವಲ್ಲ ಆದರೆ, ವೈರಸ್ ಎಲ್ಲಿಂದ ಬಂತು ಹಾಗೂ ವಿಶ್ವಾದ್ಯಂತ ಅದು ಹೇಗೆ ಹರಡಿತು ಎಂಬುದರ ತನಿಖೆ ನಿರಂತರವಾಗಿ ನಡೆಯಲ್ಲಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ-2022 ರ ಅಂತ್ಯದ ವೇಳೆಗೆ ಜಗತ್ತಿನ ಎಲ್ಲ ಜನರಿಗೂ ಲಸಿಕೆ ಹಾಕಲು ಬ್ರಿಟನ್ ಪ್ರಧಾನಿ ಕರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.