PM Modi Address To Nation: ಜೂನ್ 21 ರಿಂದ 18+ ಎಲ್ಲರಿಗೂ ಕೂಡ ಉಚಿತ ವ್ಯಾಕ್ಸಿನ್, ನವೆಂಬರ್ ವರೆಗೆ ಉಚಿತ ಪಡಿತರ ಯೋಜನೆ ವಿಸ್ತರಣೆ

PM Modi Address To Nation: ಕೊರೊನಾದ ಈ ಸಂಕಷ್ಟದ  ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹುದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ಬರುವ ಜೂನ್ 21 ರಿಂದ ಅಂದರೆ ಅಂತಾರಾಷ್ಟ್ರೀಯ ಯೋಗ ದಿನಾಚರನೆಯಿಂದ ದೇಶದ 18 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಜನರಿಗೆ ಭಾರತ ಸರ್ಕಾರ ಉಚಿತವಾಗಿ ವ್ಯಾಕ್ಸಿನ್ ಪೂರೈಸಲಿದೆ ಎಂದು ಘೋಷಿಸಿದ್ದಾರೆ. ಅಂದರೆ, ವ್ಯಾಕ್ಸಿನ್ ನಿರ್ವಹಣಾ ಜವಾಬ್ದಾರಿಯಿಂದ ರಾಜ್ಯಗಳನ್ನು ಮುಕ್ತಗೊಳಿಸಲಾಗಿದೆ.

Written by - Nitin Tabib | Last Updated : Jun 7, 2021, 10:11 PM IST
  • ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ.
  • ಜೂನ್ 21ರಿಂದ ದೇಶದ ಎಲ್ಲಾ 18+ ಜನರಿಗೆ ಉಚಿತ ವ್ಯಾಕ್ಸಿನ್.
  • PM ಗರೀಬ್ ಕಲ್ಯಾಣ್ ಯೋಜನೆಯ ಅಡಿ ನವೆಂಬರ್ ವರೆಗೆ ಉಚಿತ ಪಡಿತರ ನೀಡಲಾಗುವುದು.
PM Modi Address To Nation: ಜೂನ್ 21 ರಿಂದ 18+ ಎಲ್ಲರಿಗೂ ಕೂಡ   ಉಚಿತ ವ್ಯಾಕ್ಸಿನ್, ನವೆಂಬರ್ ವರೆಗೆ ಉಚಿತ ಪಡಿತರ ಯೋಜನೆ ವಿಸ್ತರಣೆ title=
PM Modi Address To Nation (Photo Courtesy-ANI)

ನವದೆಹಲಿ: PM Modi Address To Nation - ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), ಎರಡು ಬಹುದೊಡ್ಡ ಘೋಷಣೆಗಳನ್ನೂ ಮಾಡಿದ್ದಾರೆ. ತಮ್ಮ ಮೊದಲ ಪ್ರಮುಖ ಘೋಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಭಾರತ ಸರ್ಕಾರ ದೇಶದ 18+ ವಯಸ್ಸಿನ ದೇಶದ ಪ್ರತಿ ವ್ಯಕ್ತಿಗೂ ಕೂಡ ಉಚಿತ ವ್ಯಾಕ್ಸಿನ್ (Free Vaccine To All 18 Plus) ಪೂರೈಸಲಿದ್ದು, ವ್ಯಾಕ್ಸಿನ್ ನಿರ್ವಹಣೆಯಲ್ಲಿ ರಾಜ್ಯಸರ್ಕಾರಗಳ ಮೇಲಿದ್ದ ಶೇ.25ರಷ್ಟು ಹೊರೆಯನ್ನು ಕೂಡ ಕೇಂದ್ರವೇ ಹೊತ್ತುಕೊಳ್ಳಲಿದೆ' ಎಂದಿದ್ದಾರೆ. ವ್ಯಾಕ್ಸಿನೆಶನ್ ನ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ (Modi Government) ಹೊತ್ತುಕೊಳ್ಳಲಿದೆ. ಜನರು ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಇನ್ಮುಂದೆ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ವ್ಯಾಕ್ಸಿನ್ ಅನ್ನು ಖಾಸಗಿ ವ್ಯಾಕ್ಸಿನ್  ತಯಾರಕ ಕಂಪನಿಗಳಿಂದ ನೇರವಾಗಿ ಖರೀದಿಸಬಹುದು. ತಮ್ಮ ಎರಡನೇ ಪ್ರಮುಖ ಘೋಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 'PM ಗರೀಬ್ ಕಲ್ಯಾಣ್ ಯೋಜನೆಯ' (PM Garib Kalyan Scheme) ಅಡಿ ದೇಶದ 80 ಕೋಟಿ ಲಾಭಾರ್ಥಿಗಳಿಗೆ ನವೆಂಬರ್ ವರೆಗೆ ಉಚಿತ ಕೇಂದ್ರ ಸರ್ಕಾರ ರೇಶನ್ ನೀಡಲಿದೆ'. 

ಎರಡನೇ ಅಲೆಯ ವಿರುದ್ಧ ಹೋರಾಟ ಮುಂದುವರೆಯಲಿದೆ
ಈ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (PM Modi), 'ಕೊರೊನಾ ವೈರಸ್ ನ ಎರಡನೇ ಅಲೆಯ (Coronavirus Second Wave) ವಿರುದ್ಧ ಭಾರತೀಯರ ಹೋರಾಟ ಜಾರಿಯಲ್ಲಿದೆ. ಈ ಮಹಾಮಾರಿಯ ಕಾಲದಲ್ಲಿ ಭಾರತ ತುಂಬಾ ನೋವನ್ನು ಅನುಭವಿಸಿದೆ. ಭಾರತ ತನ್ನ ಹಲವು ಸಂಬಂಧಿಕರನ್ನು ಕಳೆದುಕೊಂಡಿದೆ. ಇಂತಹ ಕುಟುಂಗಳ ಪ್ರತಿ ನನ್ನ ಸಾಂತ್ವನ. ಕೊರೊನಾ ವಿರುದ್ಧ ಹೋರಾಡಲು ದೇಶದಲ್ಲಿ ಒಂದು ದೊಡ್ಡ ಆರೋಗ್ಯ ವ್ಯವಸ್ಥೆಯನ್ನು  ನಿರ್ಮಿಸಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಆಕ್ಸಿಜನ್ ಬೇಡಿಕೆ ಆಕಸ್ಮಿಕವಾಗಿ ಏರಿಕೆಯಾಗಿದೆ. ಲಿಕ್ವಿಡ್ ಆಕ್ಸಿಜನ್ (Oxygen) ಬೇಡಿಕೆ 10 ಪಟ್ಟು ಹೆಚ್ಚಾಗಿದೆ. ದೇಶದ ಪ್ರತಿಯೊಂದು ಮೂಲೆಯಿಂದ ಸಾಧ್ಯವಾದಷ್ಟನ್ನು ತರಿಸಿಕೊಳ್ಳಲಾಯಿತು ' ಎಂದು ಹೇಳಿದ್ದಾರೆ. 

'ಅದೃಶ್ಯ ಶತ್ರು'ವಿನ ವಿರುದ್ಧ ಹೋರಾಟ 
ಕೊರೊನಾದಂತಹ 'ಅದೃಶ್ಯ ರೂಪ ಪರಿವರ್ತಿಸುವ ಶತ್ರು'ವಿನ ವಿರುದ್ಧದ ಹೋರಾಟದಲ್ಲಿ ಅತಿ ದೊಡ್ಡ ಅಸ್ತ್ರ ಎಂದರೆ ಅದು ಕೊವಿಡ್ ಮಾರ್ಗಸೂಚಿಗಳ (Covid-19 Guidelines) ಪಾಲನೆ. ವ್ಯಾಕ್ಸಿನ್ ನಮಗೆ ಸುರಕ್ಷಾ ಕವಚ ನೀಡಲಿದೆ. ಪ್ರಸ್ತುತ ಒಂದು ವೇಳೆ ನಮ್ಮ ಬಳಿ ಕೊರೊನಾ ವ್ಯಾಕ್ಸಿನ್ ಇಲ್ಲದೆ ಹೋದಲ್ಲಿ ಭಾರತದ ಪರಿಸ್ಥಿತಿ ಊಹಿಸಲು ಸಾದ್ಯವಿಲ್ಲ. ಪೋಲಿಯೋ ಹಾಗೂ ಹೆಪೆಟೈಟಟಿಸ್ ಬಿ ವ್ಯಾಕ್ಸಿನ್ ಗಳ ಅಭಿವೃದ್ಧಿಗೂ ಕೂಡ ದಶಕಗಳ ಕಾಲಾವಕಾಶ ಬೇಕಾಯಿತು ಎಂಬುದು ಇತಿಹಾಸ ಹೇಳುತ್ತದೆ. 2014ರಂತೆ ಒಂದು ವೇಳೆ ನಾವು ಲಸಿಕಾಕರಣ ಕಾರ್ಯಕ್ರಮ ನಡೆಸಿದ್ದಾರೆ, ಸಂಪೂರ್ಣ ಕಾರ್ಯಕ್ರಮ ಮುಗಿಯಲು 40 ವರ್ಷಗಳು ಬೇಕಾಗುತ್ತಿದ್ದವು. ಆದರೆ ನಾವು ಹಾಗೆ ಮಾಡದೆ, 'ಮಿಶನ್ ಇಂದ್ರಧನುಷ್ಯ' (Mission Indradhanushya) ಅಡಿ ಜನರಿಗೆ ವ್ಯಾಕ್ಸಿನ್ ನೀಡಲು ಆರಂಭಿಸಿದೆವು. ಇದರಿಂದ ಕೇವಲ ಐದು ವರ್ಷಗಳಲ್ಲಿ ವ್ಯಾಕ್ಸಿನೆಶನ್ ಪ್ರಮಾಣ ಶೇ.60 ರಿಂದ ಶೇ. 90ಕ್ಕೆ ಏರಿಕೆಯಾಯಿತು' ಎಂದು ಪ್ರಧಾನಿ ಹೇಳಿದ್ದಾರೆ.

ಒಂದೇ ವರ್ಷದಲ್ಲಿ ಎರಡು ಸ್ವದೇಶಿ ವ್ಯಾಕ್ಸಿನ್ 
'ನಾವು ನಮ್ಮ ಮಕ್ಕಳನ್ನು ಪ್ರಾಣಾಂತಕಕಾಯಿಲೆಗಳಿಂದ ರಕ್ಷಿಸಲು ಭಾರತದಲಿಯೇ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆವು. ನಮಗೆ ಬಡವರ ಹಾಗೂ ಭಾರತದ ಕಾಳಜಿ ಇತ್ತು. ನಾವು ಶೇ.100 ಲಸಿಕಾಕರಣಕ್ಕೆ ಮುಂದಾದಾಗ ಕೊರೊನಾ ನಮ್ಮನ್ನು ಸುತ್ತುವರೆಯಿತು. ಭಾರತ ಒಂದೇ ವರ್ಷದಲ್ಲಿ ಭಾರತದಲ್ಲಿಯೇ 2 ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ (Made In India Vaccine) ತಯಾರಿಸಿ, ತಾನು ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹಿಂದೆ ಇಲ್ಲ ಎಂದು ತೋರಿಸಿದೆ. ಇದುವರೆಗೆ ದೇಶಾದ್ಯಂತ ಸುಮಾರು 23 ಕೋಟಿಗೂ ಅಧಿಕ ಲಸಿಕೆಯ ಪ್ರಮಾಣಗಳನ್ನು ನೀಡಲಾಗಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹಲವು ವೇದಿಕೆಗಳ ಮೇಲೆ ಏಕಕಾಲಕ್ಕೆ ಹೋರಾಟ
'ಈ ಜಾಗತಿಕ ಮಾಹಾಮಾರಿಯ (Corona Global Pandemic) ವಿರುದ್ಧ ಹಲವು ವೇದಿಕೆಗಳಲ್ಲಿ ದೇಶ ಏಕಕಾಲಕ್ಕೆ ಹೋರಾಟ ನಡೆಸುತ್ತಿದೆ. ಭಾರತದ ಇತಿಹಾಸದಲ್ಲಿಯೇ ಎಂದಿಗೂ ಕೂಡ ಈ ರೀತಿಯ ದೊಡ್ಡ ಪ್ರಮಾಣದ ಆಕ್ಸಿಜನ್ ಕೊರತೆ ಎದುರಾಗಿರಲಿಲ್ಲ. ಸರ್ಕಾರದ ಸಂಪೂರ್ಣ ವ್ಯವಸ್ಥೆ ಇದಕ್ಕಾಗಿ ಎದ್ದು ನಿಂತಿತು. ವಿಶ್ವಾದ್ಯಂತ ಎಲ್ಲಡೆಯಿಂದ ಸಾದ್ಯವಾದದ್ದನ್ನು ಆಮದು ಮಾಡಿಕೊಳ್ಳಲಾಯಿತು. ಅತ್ಯಾವಶ್ಯಕ ಔಷಧಿಗಳ ಉತ್ಪಾದನೆ ಹೆಚ್ಚಿಸಲಾಯಿತು' ಎಂದು ಪ್ರಧಾನಿ ಹೇಳಿದ್ದಾರೆ . 

ದೇಶಕ್ಕೆ ಇನ್ನೂ ಕೆಲ ವ್ಯಾಕ್ಸಿನ್ ಗಳು ಸಿಗಲಿವೆ
ಪ್ರಸ್ತುತ ದೇಶ ನಡೆಸುತ್ತಿರುವ  ಪರಿಶ್ರಮ ಹಾಗೂ ಪ್ರಯತ್ನಗಳ ಹಿನ್ನೆಲೆ ವ್ಯಾಕ್ಸಿನ್ ಸಪ್ಲೈ ಹೆಚ್ಚಾಗಲಿದೆ. ಇಂದು ದೇಶಾದ್ಯಂತ ಒಟ್ಟು 7 ಕಂಪನಿಗಳು ವ್ಯಾಕ್ಸಿನ್ ಸಪ್ಲೈ ಮಾಡುತ್ತಿವೆ. ಮತ್ತೆರಡು ವ್ಯಾಕ್ಸಿನ್ ಗಳ ಟ್ರಯಲ್ ವೇಗದಿಂದ ಸಾಗುತ್ತಿದೆ. ಇದಲ್ಲದೆ ನೆಸಲ್ ವ್ಯಾಕ್ಸಿನ್ (Nasel Vaccine)ವೊಂದರ ತಯಾರಿ ಕೂಡ ನಡೆಸಲಾಗುತ್ತಿದೆ. ಒಂದು ವೇಳೆ ದೇಶಕ್ಕೆ ಈ ವ್ಯಾಕ್ಸಿನ್ ಪರೀಕ್ಷೆಯಲ್ಲಿ ಯಶಸ್ಸು ದೊರೆತರೆ ಮತ್ತಷ್ಟು ಯಶ ಸಿಗಲಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಇದನ್ನೂ ಓದಿ-Pune Fire Accident: SVS Aqua Technologies ಕಂಪನಿಯಲ್ಲಿ ಭೀಕರ ಅಗ್ನಿ ಅವಘಡ, 12 ಸಾವು ಮತ್ತು ಹಲವರು ನಾಪತ್ತೆ

ಲಾಕ್ ಡೌನ್ ಕೊನೆಯ ಪರ್ಯಾಯ
'ಎರಡನೇ ಅಲೆಯ ನಡುವೆ ಈ ಮೊದಲು ಏಪ್ರಿಲ್ 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಲಾಕ್ ಡೌನ್ (Lockdown) ಅನ್ನು ಕೊನೆಯ ಅಸ್ತ್ರವಾಗಿ ಬಳಸಲು ಹೇಳಿದ್ದರು. ಆದರೆ, ಸತತವಾಗಿ ಹೆಚ್ಚಾಗುತ್ತಿರುವ ಪ್ರಕರಣಗಳು ಹಾಗೂ ಆಕ್ಸಿಜನ್ ಕೊರತೆ, ICU ಬೆಡ್ ಗಳ ಕೊರತೆ ಇತ್ಯಾದಿಗಳ ಕಾರಣ ರಾಜ್ಯಗಳಿಗೆ ಸೆಮಿ ಲಾಕ್ ಡೌನ್ (Semi Lockdown) ಸಹಾಯ ಪಡೆಯಲೇ ಬೇಕಾಯಿತು' ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಇದನ್ನೂ ಓದಿ-PM Modi Morphed Photo ಹಂಚಿಕೊಂಡ ಪ್ರಸಾರ ಭಾರತಿ ಮಾಜಿ CEO, ಮುಂದೇನಾಯ್ತು ಗೊತ್ತಾ?

ಮೇ ತಿಂಗಳ ಕೊನೆಯ ದಿನಗಳಿಂದ ಪ್ರಕರಣಗಳಲ್ಲಿ ಇಳಿಮುಖ
'ಮೇ ತಿಂಗಳಾಂತ್ಯದಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯನ್ನು ಗಮನಿಸಲಾಗುತ್ತಿದೆ. ಇದೀಗ ಆಸ್ಪತ್ರೆಗಳಲ್ಲಿ ಮೊದಲಿನಂತೆ ಆಕ್ಸಿಜನ್ ಬೆಡ್ ಗಳಿಗಾಗಿ (Oxygen Bed)ಹಾಹಾಕಾರ ಕಂಡುಬರುತ್ತಿಲ್ಲ. ಇದಕ್ಕೂ ಮೊದಲು ದೇಶಾದ್ಯಂತ ನಿತ್ಯ 3 ರಿಂದ 4 ಲಕ್ಷ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ, ಇಂದು ಆ ಸಂಖ್ಯೆ ಒಂದು ಲಕ್ಷಕ್ಕೆ ಇಳಿಕೆಯಾಗಿದೆ. ಸೋಮವಾರ ಕೊರೊನಾ ವೈರಸ್(Coronavirus) ನ ಒಟ್ಟು 1,00,636 ಹೊಸ ಪ್ರಕರಣಗಳು ವರದಿಯಾಗಿವೆ. ಸದ್ಯ ದೇಶಾದ್ಯಂತ ಸುಮಾರು 2,89,09,975 ಜನರು ಈ ಸೋಂಕಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ -'ಜನರ ಜೀವದ ಜತೆ ಚೆಲ್ಲಾಟ‌ ಬಿಡಿ, ಇಲ್ಲವೇ ಅಧಿಕಾರ ಬಿಟ್ಟು ಇಳಿಯಿರಿ ಕೆಳಗೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News