UAE VISA Rules:  ಪ್ರತಿಯೊಬ್ಬರಿಗೂ ಒಂದು ಹೆಸರು ಇದ್ದೇ ಇರುತ್ತದೆ. ಕೆಲವರು ತಮ್ಮ ಹೆಸರಿನೊಂದಿಗೆ ತಮ್ಮ ಕುಟುಂಬದ ಹೆಸರು, ಊರಿನ ಹೆಸರು, ಗೋತ್ರದ ಹೆಸರು ಹೀಗೆ ಒಂದು ಉಪನಾಮವನ್ನೂ ಸಹ ಹೊಂದಿರುತ್ತಾರೆ. ಆದಾಗ್ಯೂ, ಬಹುತೇಕ ಜನರು  ತಮ್ಮ ಹೆಸರಿನೊಂದಿಗೆ ಉಪನಾಮವನ್ನು  ಅಂದರೆ ಸರ್ ನೇಮ್ ಅನ್ನು ಹೊಂದಿರುವುದಿಲ್ಲ. ನಮ್ಮಲ್ಲಿ ಇನ್ನೂ ಕೆಲವರು ಉಪನಾಮಗಳನ್ನು ಹೊಂದಿದ್ದರೂ ಕೂಡ ತಮ್ಮ ಅಧಿಕೃತ ದಾಖಲೆಗಳಾದ ವೋಟರ್ ಐಡಿ, ಡಿಎಲ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಗಳಲ್ಲಿ ಒಂದೇ ಹೆಸರನ್ನು ಬಳಸಲು ಇಚ್ಚಿಸುತ್ತಾರೆ. ಆದರೆ, ನಿಮ್ಮ ಹೆಸರಿನಲ್ಲಿ ಉಪನಾಮವಿಲ್ಲದಿದ್ದರೆ ನೀವು ಯುಎಇಗೆ ಪ್ರಯಾಣಿಸಲು ಕಷ್ಟವಾಗಬಹುದು. 


COMMERCIAL BREAK
SCROLL TO CONTINUE READING

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ಹೊಸ ನಿಯಮಗಳ ಪ್ರಕಾರ, ತಮ್ಮ ಪಾಸ್‌ಪೋರ್ಟ್‌ನಲ್ಲಿ ಉಪನಾಮವನ್ನು ಅಂದರೆ ಸರ್ ನೇಮ್ ಅನ್ನು ಹೊಂದಿರದ ಜನರು ಯುಎಇಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೇ?


ಯುಎಇ ವೀಸಾಗೆ ಸಂಬಂಧಿಸಿದ ನಿಯಮಗಳು: 
ಏರ್ ಇಂಡಿಯಾ ಮತ್ತು ಏರ್ ಇಂಡಿಯನ್ ಎಕ್ಸ್‌ಪ್ರೆಸ್ ಹೊರಡಿಸಿದ ಸುತ್ತೋಲೆಯಲ್ಲಿ ಇತ್ತೀಚಿನ ಯುಎಇ ಮಾರ್ಗಸೂಚಿಗಳ ಪ್ರಕಾರ, ಒಂದೇ ಹೆಸರನ್ನು ಹೊಂದಿರುವ ಪಾಸ್‌ಪೋರ್ಟ್ ಹೊಂದಿರುವವರನ್ನು ಯುಎಇ ವೀಸಾ ಪಡೆಯಲು ಸಾಧ್ಯವಿಲ್ಲ ಮತ್ತು ಅಂತಹ ಪ್ರಯಾಣಿಕರನ್ನು ಐಎನ್‌ಎಡಿ ಎಂದು ಪರಿಗಣಿಸಲಾಗುತ್ತದೆ. INAD ಎಂದರೆ ಅನವಶ್ಯಕ ಗಡೀಪಾರು ಎಂದು ತಿಳಿಸಲಾಗಿದೆ. 


ಇದನ್ನೂ ಓದಿ- VIDEO: ಮಹಿಳೆಯ ಬಾಯಿಯಲ್ಲಿ ಸೇರಿತ್ತು 4 ಅಡಿ ಉದ್ದದ ಹಾವು!


2022ರ ನವೆಂಬರ್ 21ರಂದು ಹೊರಡಿಸಲಾಗಿರುವ ಸುತ್ತೋಲೆಯ ಪ್ರಕಾರ, ತಮ್ಮ ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರನ್ನು ಹೊಂದಿರುವ ಅಂದರೆ ಹೆಸರಿನ ಜೊತೆಗೆ ಸರ್ ನೇಮ್ ಅನ್ನು ಹೊಂದಿರದ ಪ್ರಯಾಣಿಕರಿಗೆ ವೀಸಾಗಳನ್ನು ನೀಡಲಾಗುವುದಿಲ್ಲ. ಒಂದೊಮ್ಮೆ ಅಂತಹವರಿಗೆ ಈಗಾಗಲೇ ವೀಸಾ ವಿತರಿಸಿದ್ದಾರೆ ಅವರನ್ನು ವಲಸೆ ಪ್ರಾಧಿಕಾರವು INAD ಎಂದು ಪರಿಗಣಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.


ಇದನ್ನೂ ಓದಿ. FIFA World Cup 2022 ರಲ್ಲಿ ಮಗನ ಆಟ ಕಂಡು ತಾಯಿಯ ಸಂತೋಷ ನೋಡಿ!


ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದುಬೈ ಸೇರಿದಂತೆ ಏಳು ಎಮಿರೇಟ್‌ಗಳ ಸಾಂವಿಧಾನಿಕ ಒಕ್ಕೂಟವಾಗಿದೆ. ಅಬುಧಾಬಿ ನಗರವು ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.