VIDEO: ಮಹಿಳೆಯ ಬಾಯಿಯಲ್ಲಿ ಸೇರಿತ್ತು 4 ಅಡಿ ಉದ್ದದ ಹಾವು!

Viral Video : ಮಹಿಳೆ ಮಲಗಿದ್ದಾಗ 4 ಅಡಿ ಉದ್ದದ ಹಾವೊಂದು ಆಕೆಯ ಬಾಯಿಗೆ ನುಗ್ಗಿ ಗಂಟಲಿಗೆ ಇಳಿದಿದೆ. ರಷ್ಯಾದ ಮಹಿಳೆಯೊಬ್ಬರ ಬಾಯಿಯಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆದ 4 ಅಡಿ ಹಾವಿನ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Written by - Chetana Devarmani | Last Updated : Nov 24, 2022, 04:36 PM IST
  • ಮಹಿಳೆಯ ಬಾಯಿಯಲ್ಲಿ ಸೇರಿತ್ತು 4 ಅಡಿ ಉದ್ದದ ಹಾವು!
  • ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು
  • ಸಾಮಾಜಿಕ ಮಾಧ್ಯಗಳಲ್ಲಿ ವಿಡಿಯೋ ವೈರಲ್‌
VIDEO: ಮಹಿಳೆಯ ಬಾಯಿಯಲ್ಲಿ ಸೇರಿತ್ತು 4 ಅಡಿ ಉದ್ದದ ಹಾವು!
ಹಾವು

Snake in Woman Mouth: ಹಾವನ್ನು ನೋಡಿದ ಜನರು ದೂರ ಓಡುತ್ತಾರೆ. ಆದರೆ ಮಲಗಿದ್ದಾಗ ನಿಮ್ಮ ಬಾಯಿಯೊಳಗೆ ಹಾವು ಹೋದರೆ ಏನಾಗಬಹುದು? ಊಹಿಸಲೂ ಭಯಂಕರವಾಗಿದೆ ಅಲ್ಲವೇ. ಆದರೆ ಇಲ್ಲೊಬ್ಬ ಮಹಿಳೆಯ ಬಾಯಿಯಲ್ಲಿ 4 ಅಡಿ ಉದ್ದದ ಹಾವು ಹೋಗಿದೆ. ರಷ್ಯಾದ ಮಹಿಳೆಯೊಬ್ಬರ ಬಾಯಿಯಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆದ 4 ಅಡಿ ಹಾವಿನ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ಮಲಗಿದ್ದಾಗ 4 ಅಡಿ ಉದ್ದದ ಹಾವೊಂದು ಆಕೆಯ ಬಾಯಿಗೆ ನುಗ್ಗಿ ಗಂಟಲಿಗೆ ಇಳಿದಿದೆ. 

ಇದನ್ನೂ ಓದಿ : Viral Video : 6 ಜನ, 2 ಶ್ವಾನ, 2 ಕೋಳಿ ಬೈಕ್‌ ಮಾತ್ರ ಒಂದೇ! ಈ ಸವಾರಿ ಕಂಡು ಹೌಹಾರಿದ ನೆಟ್ಟಿಗರು

ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಈ ಹಾವನ್ನು ಮಹಿಳೆಯ ಬಾಯಿಯಿಂದ ಹೊರತೆಗೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.  ವೈದ್ಯರೊಬ್ಬರು ರೋಗಿಯ ಬಾಯಿಯಲ್ಲಿ ಶಸ್ತ್ರಚಿಕಿತ್ಸಾ ಉಪಕರಣವನ್ನು ಅಳವಡಿಸಿ 4 ಅಡಿ ಉದ್ದದ ಹಾವನ್ನು ಹೊರತೆಗೆದಿದ್ದಾರೆ. ಅದನ್ನು ಹೊರತೆಗೆದ ಕೂಡಲೇ ವೈದ್ಯರ ಮೇಲೆ ಹಾವು ದಾಳಿ ಮಾಡಲು ಪ್ರಯತ್ನಿಸಿದೆ. ಆದರೆ, ವೈದ್ಯರು ಹಾವಿನ ವ್ಯಾಪ್ತಿಯಿಂದ ದೂರವಿದ್ದು, ಅವರಿಗೆ ಏನೂ ಆಗಿಲ್ಲ. ಈ 11 ಸೆಕೆಂಡ್‌ಗಳ ದೃಶ್ಯಸಲ್ಲಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆಯ ಬಾಯಿಯಿಂದ ವೈದ್ಯರು ಹಾವನ್ನು ಹೊರತೆಗೆಯುವುದನ್ನು ತೋರಿಸಲಾಗಿದೆ.

 

 

ಈ ವಿಡಿಯೋವನ್ನು @FascinateFlix ಟ್ವಿಟರ್‌ ಅಕೌಂಟ್‌ನಲ್ಲಿ ಶೇರ್‌ ಮಾಡಿದ್ದಾರೆ. ವೈದ್ಯರು ಮಹಿಳೆಯ ಬಾಯಿಯಿಂದ 4 ಅಡಿ ಹಾವನ್ನು ಎಳೆದ ವಿಡಿಯೋ ನೋಡಿದರೆ ಮೈ ಜುಮ್ಮೆನ್ನುತ್ತದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊವನ್ನು 1.6 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 36.9k ಲೈಕ್‌ಗಳನ್ನು ಸಹ ಪಡೆದುಕೊಂಡಿದೆ.

ಇದನ್ನೂ ಓದಿ :  FIFA World Cup 2022 ರಲ್ಲಿ ಮಗನ ಆಟ ಕಂಡು ತಾಯಿಯ ಸಂತೋಷ ನೋಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News