ದೇವರಾಣೆಗೂ ನಾನಲ್ಲಿಗೆ ಬರಲ್ಲ.. ನೀನೇ ಬಂದು ಕೊಡು.: ಸಖತ್‌ ಫನ್ನಿಯಾಗಿದೆ ಈ ವಿಡಿಯೋ..!

ಸೋಷಿಯಲ್‌ ಮೀಡಿಯಾದಲ್ಲಿ ಸಿಗುವ ಸಖತ್‌ ಫನ್ನಿ ವಿಡಿಯೋಗಳು ಮನಸ್ಸಿಗೆ ನೆಮ್ಮದಿ ಕೊಡುವ ಜೊತೆ ನಗುವಿಗೆ ಕಾರಣವಾಗುತ್ತವೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಘಟನೆಯ ದೃಶ್ಯ ಎಲ್ಲೋ ಇರುವ ಜನರ ನಗುವಿಗೆ ಕಾರಣವಾಗುತ್ತದೆ. ಸದ್ಯ ಸೋಂಬೇರಿ ಚಿಂಪಾಂಜಿಯೊಂದರ ಕಾಮಿಡಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Nov 24, 2022, 01:44 PM IST
  • ಸೋಷಿಯಲ್‌ ಮೀಡಿಯಾದಲ್ಲಿ ಸಿಗುವ ಸಖತ್‌ ಫನ್ನಿ ವಿಡಿಯೋಗಳು ಸಿಗುತ್ತವೆ
  • ವೈರಲ್‌ ವಿಡಿಯೋಗಳು ಮನಸ್ಸಿಗೆ ನೆಮ್ಮದಿ ಕೊಡುವ ಜೊತೆ ನಗುವಿಗೆ ಕಾರಣವಾಗುತ್ತವೆ
  • ಸದ್ಯ ಸೋಂಬೇರಿ ಚಿಂಪಾಂಜಿಯೊಂದರ ವಿಡಿಯೋ ವೈರಲ್‌ ಆಗುತ್ತಿದೆ.
ದೇವರಾಣೆಗೂ ನಾನಲ್ಲಿಗೆ ಬರಲ್ಲ.. ನೀನೇ ಬಂದು ಕೊಡು.: ಸಖತ್‌ ಫನ್ನಿಯಾಗಿದೆ ಈ ವಿಡಿಯೋ..!

Viral video : ಸೋಷಿಯಲ್‌ ಮೀಡಿಯಾದಲ್ಲಿ ಸಿಗುವ ಸಖತ್‌ ಫನ್ನಿ ವಿಡಿಯೋಗಳು ಮನಸ್ಸಿಗೆ ನೆಮ್ಮದಿ ಕೊಡುವ ಜೊತೆ ನಗುವಿಗೆ ಕಾರಣವಾಗುತ್ತವೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಘಟನೆಯ ದೃಶ್ಯ ಎಲ್ಲೋ ಇರುವ ಜನರ ನಗುವಿಗೆ ಕಾರಣವಾಗುತ್ತದೆ. ಸದ್ಯ ಸೋಂಬೇರಿ ಚಿಂಪಾಂಜಿಯೊಂದರ ಕಾಮಿಡಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪಕ್ಕದ ಮನೆಯಲ್ಲಿ ನಡೆಯುವ ವಿಚಾರಗಳು ಗೊತ್ತಾಗೋಲ್ಲ ಆದ್ರೆ ಜಗತ್ತಿನಲ್ಲಿ ಆಗುವ ಆಚಾರ, ವಿಚಾರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಕುಡುಕರ ಗಲಾಟೆ, ಪ್ರೇಮಿಗಳ ಪೈಟ್‌, ರಾಜಕೀಯ ನಾಯಕ ಪ್ರತಿಭಟನೆ, ಪ್ರಾಣಿ ಪಕ್ಷಿಗಳ ವರ್ತನೆ ಸೇರಿದಂತೆ ಹಲವಾರು ಘಟನೆಯ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಸಿಗುತ್ತವೆ. ಇನ್ನು ಇವುಗಳಲ್ಲಿ ನಗು ತರಿಸುವ ಕೆಲ ವಿಡಿಯೋಗಳು ಮಾತ್ರ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತವೆ.

ಇದನ್ನೂ ಓದಿ : Trending Video : ಸೊಂಡಿಲಿನಿಂದ ಡ್ರಮ್ ನುಡಿಸುವ ಆನೆ.. ವಿಡಿಯೋ ವೈರಲ್‌

 

ಸದ್ಯ ವೈರಲ್‌ ಆದ ವಿಡಿಯೋದಲ್ಲಿ, ಮೃಗಾಲಯ ನೋಡಲು ಹೋಗಿದ್ದ ಯುವತಿಯೊಬ್ಬಳು ಚಿಂಪಾಂಜಿಗೆ ಕಿತ್ತಳೆ ಹಣ್ಣನ್ನು ಕೊಡಲು ಮುಂದಾಗುತ್ತಾರೆ. ಆಗ ಆ ಸೋಂಬೇರಿ ಚಿಂಪಾಂಜಿ ಮಾತ್ರ ಕಲ್ಲು ಗುಡ್ಡವನ್ನು ಹತ್ತಿ ಬರಲು ಸೋಂಬೇರಿ ತನ ತೋರಿಸುತ್ತದೆ. ಅಲ್ಲದೆ, ನೀನೇ ತಂದು ಕೋಡು ಎನ್ನುವ ರೀತಿಯಲ್ಲಿ ಕೈ ಚಾಚಿ ನಿಲ್ಲುತ್ತದೆ. ಸಪ್ಪೆ ಮೋರೆ ಹಾಕಿ ನಿಂತಿರುವ ಚಿಂಪಾಂಜಿಯನ್ನು ನೋಡಿದ್ರೆ ನಗು ಉಕ್ಕಿ ಬರೋದಂತು ಖಂಡಿತ.

ಇನ್ನು ಈ ಘಟನೆಯ ದೃಶ್ಯವನ್ನು ಸ್ಥಳದಲ್ಲಿ ಇದ್ದ ಜನರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಸೆರೆ ಹಿಡಿದ್ದಾರೆ. ಸೋಂಬೇರಿ ಚಿಂಪಾಂಜಿಯ ನಾಟಕ ನೋಡುಗರನ್ನ ನಗೆಗಡಲಿನಲ್ಲಿ ತೇಲಿಸುತ್ತಿದೆ. ಈ ವಿಡಿಯೋವನ್ನು ಡಿಮಾರಿಯೋ ಬಂಟಿಂಗ್‌ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಫೋಸ್ಟ್‌ ಮಾಡಲಾಗಿದೆ. 13 ಸಾವಿರ ಜನ ವೀಕ್ಷಣೆ ಮಾಡಿದ್ದು, ಸುಮಾರು 344 ಜನರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಬೇಜಾರಾಗಿದ್ದವರು ಪಕ್ಕಾ ಈ ವಿಡಿಯೋ ನೋಡಿದ್ರೆ ನಗೋದಂತು 100% ಸತ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News