ಲಂಡನ್ : ಸಹೋದ್ಯೋಗಿಯೊಬ್ಬರಿಗೆ ಕಚೇರಿಯಲ್ಲಿಯೇ ಮುತ್ತು ಕೊಟ್ಟು ಆರೋಗ್ಯ ಸಚಿವರೊಬ್ಬರು ಕೆಲಸ ಕಳೆದುಕೊಂಡಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಮ್ಯಾಟ್ ಹಾನ್‌ಕಾಕ್(Matt Hancock) ಕಿಸ್ ಕೊಟ್ಟ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾರೆ. ಅಂದಹಾಗೆ ಇವರು ಎಲ್ಲರ ಎದುರು, ಕಚೇರಿಯ ಅವಧಿಯಲ್ಲಿ ಮುತ್ತು ಕೊಟ್ಟಿದ್ದಕ್ಕೆ ಈ ಶಿಕ್ಷೆಯಲ್ಲ, ಬದಲಿಗೆ ಕರೊನಾ ನಿಯಮ ಉಲ್ಲಂಘನೆ ಮಾಡಿದರು ಎನ್ನುವ ಕಾರಣಕ್ಕೆ! ಆರೋಗ್ಯ ಸಚಿವರಾಗಿದ್ದಕೊಂಡು ಕರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇವರ ರಾಜೀನಾಮೆ ಪಡೆಯಲಾಗಿದೆ.


ಇದನ್ನೂ ಓದಿ : Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'


ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲರಿಗೂ ಬುದ್ಧಿಹೇಳುವ ಆರೋಗ್ಯ ಸಚಿವ(UK Health Minister)ರು ಹೀಗೆ ಮಾಡಿದ್ದು ತಪ್ಪು ಎನ್ನುವುದು ಇದಕ್ಕೆ ಕಾರಣ. ಈ ಸಚಿವರು ಚುಂಬಿಸಿದ ಫೋಟೋಗಳು ವೈರಲ್ ಆಗಿದ್ದವು. ನಂತರ ಈ ಬಗ್ಗೆ ಅವರಿಗೆ ಸಮಜಾಯಿಷಿ ಕೇಳಿದಾಗ ಕರೊನಾ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ನಂತರ ರಾಜೀನಾಮೆ ನೀಡಿದ್ದಾರೆ. ಇವರ ಜಾಗಕ್ಕೆ ಪಾಕಿಸ್ತಾನದ ಸಂಸತ್ ಸದಸ್ಯ ಸಾಜಿದ್ ಜಾವಿದ್ ಬ್ರಿಟನ್ ನೂತನ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.


ಇದನ್ನೂ ಓದಿ : Research On Covid-19: ಕೊರೊನಾ ವೈರಸ್ ಹೊಸದಲ್ವಂತೆ ! ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.