Research On Covid-19: ಕೊರೊನಾ ವೈರಸ್ ಹೊಸದಲ್ವಂತೆ ! ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

Research On Covid-19 - ವಿಶ್ವದ ಸುಮಾರು 26 ದೇಶಗಳ 2,500 ಕ್ಕೂ ಹೆಚ್ಚು ಜನರ ಜೀನೋಮ್‌ಗಳಲ್ಲಿ ನಾವು ಕರೋನಾ ವೈರಸ್‌ನ ಕುರುಹುಗಳನ್ನು ಕಂಡುಕೊಂಡಿದ್ದೇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಐಪಿಯನ್ನು ವಿವರಿಸುವ ಮಾನವರ 42 ವಿಭಿನ್ನ ಜೀನ್‌ಗಳಲ್ಲಿ ರೂಪಾಂತರದ ಪುರಾವೆಗಳು ಕಂಡುಬಂದಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Written by - Nitin Tabib | Last Updated : Jun 26, 2021, 05:53 PM IST
  • 26 ದೇಶಗಳ 2,500 ಕ್ಕೂ ಹೆಚ್ಚು ಜನರ ಜೀನೋಮ್‌ಗಳಲ್ಲಿ ಕೊರೊನಾ ವೈರಸ್ ಪತ್ತೆ.
  • ಇದರಲ್ಲಿ ಬಹುತೇಕ ಜನರು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವಾಸಿಸುತ್ತಾರೆ.
  • ಅಂದರೆ, ಈ ದೇಶಗಳ ಪೂರ್ವಜರು ಸುಮಾರು 25,000 ವರ್ಷಗಳ ಹಿಂದೆ ಕರೋನಾ ವೈರಸ್‌ಗೆ ತುತ್ತಾಗಿದ್ದರು.
Research On Covid-19: ಕೊರೊನಾ ವೈರಸ್ ಹೊಸದಲ್ವಂತೆ ! ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ title=
Research On Covid-19 (File Photo)

ಕ್ಯಾನ್ ಬೇರಾ: Research On Covid-19 - ವಿಶ್ವಾದ್ಯಂತ ಅಪಾರ ಜೀವ ಹಾನಿ ಸೃಷ್ಟಿಸಿರುವ ಕೊರೊನಾ ವೈರಸ್ ಹೊಸತಲ್ಲ ಮತ್ತು ಇದು 20 ಸಾವಿರ ವರ್ಷಗಳ ಹಿಂದೆ ಮಾನವರು ಇದಕ್ಕೆ ಒಡ್ಡಿಕೊಂಡಿದ್ದರು ಎಂದು ಹೇಳಿ ತೀವ್ರ ಕುತೂಹಲ ಸೃಷ್ಟಿಸಿದ್ದಾರೆ. 'ಕರೆಂಟ್ ಬಯಾಲಾಜಿಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಕೊರೊನಾ ವೈರಸ್ 20 ಸಾವಿರ ವರ್ಷಗಳ ಹಿಂದೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಬಹುಶಃ ತನ್ನ ಪ್ರಕೋಪ ಸೃಷ್ಟಿಸಿದೆ ಎಂದು ಹೇಳಿದ್ದಾರೆ.

DNAಯಲ್ಲಿ ದೊರೆತ ವೈರಸ್ ಪುರಾವೆಗಳು
ಅಧ್ಯಯನದ ಪ್ರಕಾರ, ಇದರ ಅವಶೇಷಗಳು ಆಧುನಿಕ ಚೀನಾ, ಜಪಾನ್ ಹಾಗೂ ವಿಯೆಟ್ನಾಂ ಜನರ DNAಗಳಲ್ಲಿ ಪತ್ತೆಯಾಗಿದೆ.  'ಕರೆಂಟ್ ಬಯಾಲಾಜಿ' (Current Biology)ಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ಪ್ರಕಾರ, ಈ ಕ್ಷೇತ್ರದ ಆಧುನಿಕ ಜನಸಂಖ್ಯೆಯ 42 ಜೀನ್ ಗಳಲ್ಲಿ ಕೊರೊನಾ ವೈರಸ್ ನ ಆನುವಂಶಿಕ ರೂಪಾಂತರದ ಪುರಾವೆಗಳು ದೊರೆತಿವೆ ಎನ್ನಲಾಗಿದೆ.

SARS-CoV-2 ಕಾರಣ ಹರಡಿರುವ ಕೊವಿಡ್-19 ಮಹಾಮಾರಿ ಇದುವರೆಗೆ ವಿಶ್ವಾದ್ಯಂತ ಸುಮಾರು 38 ಲಕ್ಷಕ್ಕೂ ಅಧಿಕ ಜನರ ಪ್ರಾಣ ತೆಗೆದಿದ್ದು, ಕೋಟ್ಯಾಂತರ ರೂ. ಆರ್ಥಿಕ ನಷ್ಟ ಮಾಡಿದೆ. ಕೊರೊನಾ ವೈರಸ್ ಕುಟುಂಬದಲ್ಲಿ ಮಾರ್ಸ್ ಹಾಗೂ ಸಾರ್ಸ್ ವೈರಸ್ ಗಳು ಕೂಡ ಶಾಮೀಲಾಗಿವೆ. ಇವುಗಳಿಂದ ಕಳೆದ 20 ವರ್ಷಗಳಲ್ಲಿ ಹಲವು ಅಪಾಯಕಾರಿ ಸೋಂಕುಗಳು ಕಂಡುಬಂದಿವೆ.

ಜಾಗತಿಕ ಮಾಹಾಮಾರಿಗಳು ಮಾನವರಷ್ಟೇ ಹಳೆ ಇತಿಹಾಸ ಹೊಂದಿವೆ
ಸಂಶೋಧನೆಯ ಪ್ರಕಾರ, ಜಾಗತಿಕ ಸಾಂಕ್ರಾಮಿಕ ರೋಗಗಳು ಬಹುಶಃ ಮಾನವರು ಹೊಂದಿರುವ ಇತಿಹಾಸದಷ್ಟೇ ಹಳೆಯದಾಗಿವೆ. ನಾವು ಈ ಮೊದಲು ಜಾಗತಿಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಿದ್ದೇವೆ. ಕೇವಲ 20 ನೇ ಶತಮಾನ ಒಂದರಲ್ಲೇ  ಇನ್ಫ್ಲುಯೆನ್ಸ ವೈರಸ್ ನ ಮೂರು ಪ್ರಕಾರಗಳು -1918–20ರ 'ಸ್ಪ್ಯಾನಿಷ್ ಫ್ಲೂ', 1957–58ರ 'ಏಷ್ಯನ್ ಫ್ಲೂ' ಮತ್ತು 1968-69ರ 'ಹಾಂಗ್ ಕಾಂಗ್ ಫ್ಲೂ' ಎದುರಿಸಿದ್ದೇವೆ. ಪ್ರತಿಯೊಂದೂ ಫ್ಲೂ ಕೂಡ ವ್ಯಾಪಕ ವಿನಾಶಕ್ಕೆ ಕಾರಣವಾಗಿದ್ದು ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ವೈರಸ್ಗಳು ಮತ್ತು ಇತರ ರೋಗಕಾರಕಗಳಿಂದ ಉಂಟಾಗುವ ಸೋಂಕುಗಳ ಇತಿಹಾಸವು ಸಾವಿರಾರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ದೇಹವು ಈ ವೈರಸ್‌ಗಳಿಗೆ ಹೊಂದಿಕೊಂಡ ನಂತರ, ಅನೇಕ ಆನುವಂಶಿಕ ಗುರುತುಗಳು ಉಳಿದುಹೊಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

26 ದೇಶಗಳ ಸುಮಾರು 2500 ಜನರ ಜಿನೋಮ್ ನಲ್ಲಿ ವೈರಸ್ 
ಈ ಕುರಿತು ಹೇಳಿಕೆ ನೀಡುವ ವಿಜ್ಞಾನಿಗಳು ವೈರಸ್ ಗಳು ಸರಳ ಜೀವಿಗಳಾಗಿವೆ. ಅವುಗಳಿಗೆ ಒಂದು ಉದ್ದೇಶ ಇರುತ್ತದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪ್ರತಿಗಳನ್ನು ತಯಾರಿಸುವ ಗುರಿ ಅವು ಹೊಂದಿರುತ್ತವೆ. ಆದರೆ, ಅವುಗಳ ಸರಳ ಜೈವಿಕ ಸಂರಚನೆಯ ಅರ್ಥ ಅವು ಸ್ವತಂತ್ರವಾಗಿ ಸಂತಾನೋತ್ಪತ್ತಿ ನಡೆಸಲು ಅಸಮರ್ಥವಾಗಿವೆ. ಹೀಗಾಗಿ ಅವು ಬೇರೆ ಜೀವಿಗಳ ಜೀವಕೋಶಗಳ ಮೇಲೆ ದಾಳಿ ನಡೆಸುತ್ತವೆ ಮತ್ತು ಆ ಜೀವಗಳ ಅಣ್ವಿಕ ತಂತ್ರವನ್ನು ಸ್ವಾಧೀನಪಡಿಸಿಕೊಳ್ಳುತ್ತವೆ. ನಂತರ ವೈರಸ್ ಆತಿಥೇಯ ಜೀವಕೊಶದಿಂದ ಉತ್ಪತ್ತಿಯಾಗುವ ನಿರ್ಧಿಷ್ಟ ಪ್ರೋಟೀನ್ ಗಳೊಂದಿಗೆ ವ್ಯವಹರಿಸಿ ಅವುಗಳನ್ನು ಬಂಧಿಸುತ್ತದೆ. ಇದನ್ನೇ ನಾವು ವೈರಲ್ ಇಂಟರ್ಯಾಕ್ಟಿಂಗ್ ಪ್ರೋಟೀನ್ (VIP) ಎಂದು ಕರೆಯುತ್ತೇವೆ.

42 ವಿವಿಧ ಜೀನ್ ಗಳಲ್ಲಿ ರೂಪಾಂತರದ ಪುರಾವೆಗಳು
ವಿಶ್ವದ ಸುಮಾರು 26 ದೇಶಗಳ 2,500 ಕ್ಕೂ ಹೆಚ್ಚು ಜನರ ಜೀನೋಮ್‌ಗಳಲ್ಲಿ ನಾವು ಕರೋನಾ ವೈರಸ್‌ನ (Covid-19) ಕುರುಹುಗಳನ್ನು ಕಂಡುಕೊಂಡಿದ್ದೇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಐಪಿಯನ್ನು ವಿವರಿಸುವ ಮಾನವರ 42 ವಿಭಿನ್ನ ಜೀನ್‌ಗಳಲ್ಲಿ ರೂಪಾಂತರದ ಪುರಾವೆಗಳು ಕಂಡುಬಂದಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ- China's Cyber Attack On India: ಭಾರತದ ವಿರುದ್ಧ ಚೀನಾ ಹೊಸ ಕುತಂತ್ರ, ಪ್ರಮುಖ ಸಂಸ್ಥೆಗಳ ಮೇಲೆ Cyber Attack!

VIPಯ ಈ ಸಂಕೇತಗಳು ಕೇವಲ ಐದು ಸ್ಥಾನಗಳ ಜನಸಂಖ್ಯೆಯಲ್ಲಿ ಪತ್ತೆಯಾಗಿವೆ ಹಾಗೂ ಎಲ್ಲಾ ಐದು ಸ್ಥಾನಗಳು ಪೂರ್ವಏಷ್ಯಾನಲ್ಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕರೋನಾ ವೈರಸ್ (Coronavirus) ಕುಟುಂಬಕ್ಕೆ ಮೊದಲು ಬಂದ ವೈರಸ್ ಬಹುಶಃ ಈ ಸ್ಥಳಗಳಲ್ಲಿ ಹುಟ್ಟಿಕೊಂಡಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ ಆಧುನಿಕ ಪೂರ್ವ ಏಷ್ಯಾದ (East Asia) ದೇಶಗಳ ಪೂರ್ವಜರು ಸುಮಾರು 25,000 ವರ್ಷಗಳ ಹಿಂದೆ ಕರೋನಾ ವೈರಸ್‌ಗೆ ತುತ್ತಾಗಿದ್ದಾರೆ ಎಂಬುದನ್ನು ಇದು ಸಂಕೇತಿಸುತ್ತದೆ.

ಇದನ್ನೂ ಓದಿ-Covid-19 Third Wave In India - ಬರುವ ಅಕ್ಟೋಬರ್ ನಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಕೊವಿಡ್-19 ಮೂರನೇ ಅಲೆ! ವಿಶ್ವಾದ್ಯಂತದ ಸುಮಾರು 40 ತಜ್ಞರು ಹೇಳಿದ್ದೇನು?

ಆ ಬಳಿಕ ಈ ಕುರಿತು ಹೆಚ್ಚಿನ ಸಂಶೋಷಣೆ ನಡೆಸಲಾಗಿ, ಈ 42 ವಿಐಪಿಗಳು ಪ್ರಮುಖವಾಗಿ ಪುಪ್ಪುಸದಲ್ಲಿ ಕಂಡುಬರುತ್ತವೆ ಮತ್ತು ಇದು ಕೊವಿಡ್-19 ನ ಅತಿ ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತದೆ.  ವಿಜ್ಞಾನಿಗಳ ಪ್ರಕಾರ, ಈ ವಿಐಪಿಗಳು ಪ್ರಸ್ತುತ ಮಹಾಮಾರಿಗೆ (Covid-19 Pandemic) ಕಾರಣವಾಗಿರುವ SARS-CoV-2 ವೈರಸ್ ಅನ್ನು ನೇರವಾಗಿ ಸಂಪರ್ಕ ಸಾಧಿಸುತ್ತವೆ ಎಂಬುದನ್ನು ಪುಷ್ಟೀಕರಿಸುತ್ತವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News